ಹೊಸದಿಲ್ಲಿ: ಟೀಂ ಇಂಡಿಯಾದ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದ ಟೀಂ ಇಂಡಿಯಾ ಸುಧಾರಣೆ ಕಂಡಿಲ್ಲ ಎಂದು ಪಾಕಿಸ್ಥಾನದ ಮಾಜಿ ನಾಯಕ ಸಲ್ಮಾನ್ ಬಟ್ ಹೇಳಿದ್ದಾರೆ.
ಸದ್ಯ ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಹೊಸ ಆಯ್ಕೆ ಸಮಿತಿ ಸದಸ್ಯರಿಗಾಗಿ ಅರ್ಜಿ ಆಹ್ವಾನ ಮಾಡಿದೆ. ಈ ಬಗ್ಗೆ ಮಾತನಾಡಿದ ಸಲ್ಮಾನ್ ಬಟ್, ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವಂತಹ ಕೆಲವು ಪ್ರಶ್ನಾರ್ಹ ನಿರ್ಧಾರಗಳನ್ನು ಆಯ್ಕೆಗಾರರು ಮಾಡಿದ್ದಾರೆ. ಕೊಹ್ಲಿಯನ್ನು ತೆಗೆದು ಹಾಕಿದ ನಂತರ ಟೀಮ್ ಇಂಡಿಯಾ ಹೆಚ್ಚು ಸುಧಾರಿಸಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ:ಶವವಾಗಿ ಪತ್ತೆಯಾದ ರಾಡಿಸನ್ ಬ್ಲೂ ಹೋಟೆಲ್ ಮಾಲೀಕ ಅಮಿತ್ ಜೈನ್
ನೀವು ಆಸ್ಟ್ರೇಲಿಯಾದಲ್ಲಿ ಆಡುತ್ತಿರುವಾಗ, ಪರ್ತ್ ಮತ್ತು ಮೆಲ್ಬೋರ್ನ್‌ನಲ್ಲಿ ಆಡಬೇಕಾದ ಟಿ20 ವಿಶ್ವಕಪ್ ಗೆ ಉತ್ತಮ ವೇಗದ ಬೌಲರ್ ಇಲ್ಲದಿರಲು ಕಾರಣವೇನು? ಕೊಹ್ಲಿಯನ್ನು ವಜಾ ಮಾಡಿದಾಗಲೂ ಅವರ ಬಳಿ ಸರಿಯಾದ ಕಾರಣ ಇರಲಿಲ್ಲ. ಅವರು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ ಎಂದು ಹೇಳಿದರು. ಐಸಿಸಿ ಟ್ರೋಫಿಯನ್ನು ಎಷ್ಟು ನಾಯಕರು ಗೆದ್ದಿದ್ದಾರೆ?” ಎಂದು ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೊದಲ್ಲಿ ತಿಳಿಸಿದ್ದಾರೆ.
“ಹಾಗಾದರೆ, ಅವರು (ಟೀಂ ಇಂಡಿಯಾ) ಈಗ ಟ್ರೋಫಿ ಗೆದ್ದಿದ್ದಾರೆಯೇ? ವಿರಾಟ್ ಉತ್ತಮ ನಾಯಕರಾಗಿದ್ದರು. ಟ್ರೋಫಿ ಗೆಲ್ಲದಿರಲು ಅವರು ಏಕೈಕ ಕಾರಣವಲ್ಲ. ಅಂದಿನಿಂದ ತಂಡವು ಅಷ್ಟೊಂದು ಸುಧಾರಿಸಿಲ್ಲ,” ಅವರು ಹೇಳಿದ್ದಾರೆ.