Advertisement

ಕೋವಿಡ್‌-19 ತಡೆಗೆ ತಂಡ ರಚನೆ: ಅಧಿಕಾರಿಗಳಿಗೆ ಡಿಸಿ ಸೂಚನೆ

12:05 PM Aug 06, 2020 | mahesh |

ಪುತ್ತೂರು: ಕೋವಿಡ್‌ ಕುರಿತಂತೆ ಜನರಲ್ಲಿ ಇರುವ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ಒದಗಿಸುವ ಸಲುವಾಗಿ ಅಧಿಕಾರಿಗಳು ಸಹಿತ ಶಿಕ್ಷಕರು, ಸ್ಥಳೀಯ ಗ್ರಾ.ಪಂ. ಪಿಡಿಒ, ಆಶಾ, ಅಂಗನವಾಡಿ ಕಾರ್ಯಕತೆರ್ಯರು ಹಾಗೂ ಕಾರ್ಯಪಡೆ ಸದಸ್ಯರನ್ನು ಬಳಸಿಕೊಂಡು ತಂಡವಾಗಿ ಕೆಲಸ ನಿರ್ವಹಿ ಸುವಂತೆ ದ.ಕ. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ತಾ.ಪಂ. ಸಭಾಂಗಣದಲ್ಲಿ ಕೋವಿಡ್‌- 19 ಕುರಿತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆ. 5ರಂದು ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಕೋವಿಡ್‌-19 ಮಹಾಮಾರಿಯನ್ನು ಮುಂದಿನ ದಿನಗಳಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳಿಂದ ಜನರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದ ಅವರು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಸಹಿತ ಗ್ರಾ.ಪಂ. ಮಟ್ಟದ ಕೊರೊನಾ ವಾರಿಯರ್ಗಳು ನಿರಂತರ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಸ್ಕ್ ಒದಗಿಸಿ
ಮನೆ ಮನೆಗಳಿಗೆ ತೆರಳುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಆಡಳಿತದ ವತಿಯಿಂದ ನೀಡಬೇಕು. ಈ ವಿಚಾರದಲ್ಲಿ ಕೊರತೆ ಉಂಟಾದಲ್ಲಿ ಜಿಲ್ಲಾಡಳಿತದಿಂದ ರ್‍ಯಾಂಡಮ್‌ ಆಗಿ ತಪಾಸಣೆ ಮಾಡಲಿದ್ದೇವೆ. ಮುಖ್ಯವಾಗಿ ಸ್ಥಳೀಯ ಬಿಇಒ ಹಂತದಲ್ಲಿ ಶಿಕ್ಷಕರು, ಟಿಎಚ್‌ಒ, ಸಿಡಿಪಿಒ, ಪಿಡಿಒ ಗ್ರಾ.ಪಂ. ಮಟ್ಟದ ಸ್ಥಳೀಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್‌ಗಳಿಗೆ ತರಬೇತಿ ನೀಡುವ ಕೆಲಸವನ್ನು ಆರಂಭಿಸಬೇಕು ಎಂದು ಸೂಚನೆ ನೀಡಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಜತೆಗೆ ಡೆಂಗ್ಯೂ, ಮಲೇರಿಯಾ, ಇಲಿ ಜ್ವರದ ಕುರಿತು ಗಮನ ಹರಿಸಬೇಕಾಗಿದೆ. ಎಲ್ಲೆಲ್ಲಿ ಕೊಳಚೆ ನೀರು ನಿಲ್ಲುತ್ತದೆ ಎಂಬುದನ್ನು ತಿಳಿದು ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ ಎಂದರು.
ಕೆಲವು ಆಸ್ಪತ್ರೆಗಳಲ್ಲಿ ಕೋವಿಡ್‌ ಆಗಿರಲಿ, ನಾನ್‌ ಕೋವಿಡ್‌ ಆಗಿರಲಿ ಜಾಸ್ತಿ ಬಿಲ್‌ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಕುರಿತು ನಮಗೆ ತಿಳಿಸಿ. ಗಂಭೀರ ಆರೋಗ್ಯ ಸಮಸ್ಯೆ ಇರು ವವರನ್ನು ಆಯುಷ್ಮಾನ್‌ ಯೋಜನೆಗೆ ಒಳಪಡಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌, ತಹಶೀಲ್ದಾರ್‌ ರಮೇಶ್‌ ಬಾಬು, ತಾ.ಪಂ. ಇಒ ನವೀನ್‌ ಭಂಡಾರಿ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು.

250- 300 ಮಂದಿಯ ತಂಡ
ತಾಲೂಕು ಮಟ್ಟದ ಅ ಧಿಕಾರಿಗಳು ಸಹಿತ ಸ್ಥಳೀಯ ಗ್ರಾ.ಪಂ. ಮಟ್ಟದ ಆಶಾ ಕಾರ್ಯಕತೆರ್ಯರು, ಕಾರ್ಯಪಡೆ ಸದಸ್ಯರು, ಪಿಡಿಒ ಮೊದಲಾದವರನ್ನೊಳಗೊಂಡ 250ರಿಂದ 300 ಮಂದಿಯ ತಂಡ ಮಾಡಿ ಪ್ರತಿದಿನ ಸುಮಾರು 20 ಮನೆಗಳನ್ನಾದರೂ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು. ಜ್ವರ, ಶೀತ ಲಕ್ಷಣಗಳು ಕಂಡು ಬಂದಲ್ಲಿ ಬಿಪಿ, ಶುಗರ್‌ ಚೆಕ್‌ ಮಾಡಿ ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮಾಡಲು ಮನ ವೊಲಿಸಬೇಕು. ಫೀಲ್ಡ್‌ ಮಾಹಿತಿ ಸರಿಯಾಗಿ ಸಿಗಬೇಕು. ಶೀಘ್ರ ತಾಲೂಕಿಗೆ ತಲಾ ಎರಡರಂತೆ ಲ್ಯಾಬ್‌ ಟೆಕ್ನೀಶಿಯನ್‌, ಡಾಟಾ ಎಂಟ್ರಿ ಆಪರೇಟರ್‌ರನ್ನು ನೀಡಲಿದ್ದು, ಮನೆ ಭೇಟಿ ಸಂದರ್ಭ ಇವರು ಆಶಾ ಕಾರ್ಯಕರ್ತೆಯರೊಂದಿಗೆ ಸಹಕರಿಸ ಲಿದ್ದಾರೆ ಎಂದು ಡಿಸಿ ತಿಳಿಸಿದರು.

Advertisement

ಸಹಭಾಗಿತ್ವ ಅಗತ್ಯ
ಕೋವಿಡ್‌-19 ತಡೆಗಟ್ಟುವ ವಿಚಾರದಲ್ಲಿ ಸಮುದಾಯದ ಸಹಭಾಗಿತ್ವದ ಆವಶ್ಯಕತೆಯಿದೆ. ಕೆಲವು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ಇದೆ. ಇದನ್ನು ಟಿಎಚ್‌ಒ ಅವರು ಗಮನಿಸಿ ತಾಂತ್ರಿಕ ತೊಂದರೆಗಳಿರುವ ಆಸ್ಪತ್ರೆಗಳ ವೈದ್ಯರನ್ನು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಪಡೆಯವಂತೆ ಮಾಡಬೇಕು. ಒಂದೇ ಕಡೆ ಕೋವಿಡ್‌-ನಾನ್‌ಕೋವಿಡ್‌ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ. ಈ ಕುರಿತು ಡಾಕ್ಟರ್‌ ಅಸೋಸಿಯೇಶನ್‌ ಅವರಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next