ಮಂಗಳೂರು: ಬ್ರ್ಯಾಂಡ್ ವಿಷನ್ ಈವೆಂಟ್ಸ್, ಮಂಗಳೂರು ಅಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್ ಕ್ರಿಕೆಟ್ ಅಕಾಡೆಮಿಯ ಆಶ್ರಯದಲ್ಲಿ ಎನ್‌ಎಂಪಿಟಿಯ ಡಾ| ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಕೂಟ ದಲ್ಲಿ ನಾಲ್ಕನೇ ಜಯ ಸಾಧಿಸಿದ ಟೀಮ್ ಎಲಿಗೆಂಟ್ ತಂಡವು ನಾಕೌಟ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ.
ಮಹಮ್ಮದ್ ಆಸಿಫ್ (58) ಮತ್ತು ದೇವದತ್ (39) ಅವರ ಉತ್ತಮ ಆಟದಿಂದಾಗಿ ಟೀಮ್ ಎಲಿಗೆಂಟ್ ತಂಡವು 19.5 ಓವರ್‌ಗಳಲ್ಲಿ 165 ರನ್ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ವೈಸ್ ವಾರಿಯರ್ ತಂಡವು ಆದಿತ್ಯ ರೈ ದಾಳಿಗೆ ಕುಸಿದು 20ನೇ ಓವರಿನಲ್ಲಿ 130 ರನ್ನಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್ ಎಲಿಗೆಂಟ್ 35 ರನ್ನುಗಳ ಜಯ ಸಾಧಿಸುವಂತಾಯಿತು.
ದಿನದ ಇನ್ನೊಂದು ಪಂದ್ಯದಲ್ಲಿ ಬೆದ್ರ ಬುಲ್ಸ್ ತಂಡ ಮೊದಲ ಗೆಲುವಿನ ಸಂಭ್ರಮ ಆಚರಿಸಿತು. ಕಳೆದ ಮೂರು ಪಂದ್ಯಗಳಲ್ಲಿ ಸೋತಿದ್ದ ಬೆದ್ರ ತಂಡವು ಕಾರ್ಕಳ ಗ್ಲೆàಡಿಯೇಟರ್ ವಿರುದ್ಧ 7 ವಿಕೆಟ್ ಅಂತರದ ಜಯ ಸಾಧಿಸಿತು. ಕಾರ್ಕಳ ತಂಡ 6 ವಿಕೆಟಿಗೆ 169 ರನ್ ಗಳಿಸಿದ್ದರೆ ಬೆದ್ರ ತಂಡವು 19 ಎಸೆತ ಬಾಕಿ ಇರುವಾಗಲೇ ಜಯಭೇರಿ ಬಾರಿಸಿತು. ಜಯಪ್ರಕಾಶ್ ಶೆಟ್ಟಿ 91 ರನ್ ಗಳಿಸಿ ಅಜೇಯರಾಗಿ ಉಳಿದರು.
ರವಿವಾರ ರಾತ್ರಿ ನಡೆದ ಪಂದ್ಯ ದಲ್ಲಿ ಕ್ಲಾಸಿಕ್ ಬಂಟ್ವಾಳ ತಂಡವು ಮಂಗಳೂರು ಯುನೈಟೆಡ್ ತಂಡ ವನ್ನು 6 ವಿಕೆಟ್‌ಗಳಿಂದ ಸೋಲಿ ಸಿದೆ. ಮಂಗಳೂರು ತಂಡ 128 ರನ್ ಗಳಿಸಿದ್ದರೆ ಕ್ಲಾಸಿಕ್ ಬಂಟ್ವಾಳ ತಂಡ 17.5 ಓವರ್‌ಗಳಲ್ಲಿ ಜಯ ಸಾಧಿಸಿತು.
ಮಂಗಳವಾರ ಏಕೆ ನ್ಪೋರ್ಟ್ಸ್ ಉಡುಪಿ-ಕ್ಲಾಸಿಕ್ ಬಂಟ್ವಾಳ, ಮ್ಯಾಸ್ಟ್ರೋ ಟೈಟಾನ್-ಮಂಗಳೂರು ಯುನೈಟೆಡ್ ಮತ್ತು ಟಿ4 ಸೂಪರ್ ಕಿಂಗ್-ಯುನೈಟೆಡ್ ಉಳ್ಳಾಲ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.