Advertisement
ನಮ್ಮ ಯಶಸ್ಸಿಗೆ, ನಗುವೂ ಕಾರಣವಾಗುತ್ತದೆ. ಖುಷಿ ಹಂಚಿ, ಯಶಸ್ಸನ್ನು ಪಡೆಯಿರಿ. ಜನರನ್ನೂ ಒಗ್ಗೂಡಿಸುವುದೂ ಕಲೆ. ಅದೂ ನಮ್ಮ ಸಾಮರ್ಥ್ಯವನ್ನೂ ಬಿಂಬಿಸುತ್ತದೆ. ಹಾಗೆಯೇ ಉತ್ತಮ ನಾಯಕನಿಗಿರಬೇಕಾದ ಅತೀಮುಖ್ಯ ಗುಣವೆನಿಸುತ್ತದೆ ಸಂಘಟನ ಶಕ್ತಿ. ಒಬ್ಬನಿಂದ ಸಾಧಿಸಲಾಗದ್ದು ತಂಡವಾಗಿ ಸಾಧಿಸಲು ಸುಲಭ. ನಾನಿಲ್ಲಿ ಹೇಳಲು ಹೊರಟಿರುವುದೂ ತಂಡ ಕಟ್ಟಿ ಯಶಸ್ಸು ಗಳಿಸಿದ ಮುಂಗೋಪಿಯ ಬಗ್ಗೆ…
Related Articles
Advertisement
ವರ್ಕೌಟ್ ಆಗಲಿಲ್ಲ
ಹೀಗಿರಬೇಕಾದರೆ ಅಪ್ಪನ ಅಗಲುವಿಕೆ ಅವನಿಗಾಯಿತು. ಹಾಗಾಗಿ ಅವರು ನಡೆಸುತ್ತಿದ್ದ ಹಾಳೆ ಬಟ್ಟಲು ತಯಾರಿಸುವ ಉದ್ಯಮವನ್ನು ತಾನೇ ಮುಂದುವರಿಸಬೇಕಾದ ಅನಿವಾರ್ಯತೆ ಕಾಲೇಜು ದಿನಗಳಲ್ಲೇ ಇವನಿಗೆ ಒದಗಿಬಂತು. ಆತ ಮೊದಲು ಮಾಡಿದ ಕೆಲವೇನೆಂದರೆ ಅಪ್ಪನ ಕಾಲದಿಂದಲೂ ಇದ್ದ ಕೆಲಸಗಾರರನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಹೊರಗೆ ಹಾಕಿದ್ದು. ಏಕಾಂಗಿಯಾಗಿ ಸಾಧಿಸಬೇಕೆಂಬ ಹಠವೇ ಇವನಲ್ಲಿ ಹೆಚ್ಚಾಗಿತ್ತು. ಉತ್ಪಾದನೆ, ಮಾರುಕಟ್ಟೆ ವಿಭಾಗ ಹೀಗೆ ಎಲ್ಲ ವಿಭಾಗಳಲ್ಲೂ ತಾನಿಲ್ಲದಿದ್ದರೆ ಕಾರ್ಯವೇ ಸಾಗುವುದಿಲ್ಲ ಎಂಬ ಭಾವನೆ ಇವನಲ್ಲಿ. ಯಾರೊಬ್ಬರನ್ನೂ ನಂಬಲಿಲ್ಲ, ವಿಶ್ವಾಸಕ್ಕೂ ತೆಗೆದುಕೊಳ್ಳಲಿಲ್ಲ. ಒಬ್ಬನೇ ಎಷ್ಟೆಂದು ದುಡಿದಾನು, ಕಂಪೆನಿ ಕೈಕೊಟ್ಟಿತು. ರಾಶಿ ರಾಶಿ ಹಾಳೆ ಬಟ್ಟಲುಗಳು ಅಂಗಳದಲ್ಲಿ ಕೊಳೆಯುವಂತಾಯಿತು. ಆಗ ಅವನಿಗೆ ಜ್ಞಾನೋದಯವಾಗಿತ್ತು, ಒಬ್ಬನಿಂದಲೇ ಮಾರುಕಟ್ಟೆ ಆಳಲು ಸಾಧ್ಯವಿಲ್ಲ. ಅದಕ್ಕೊಂದು ಸರ್ವಸಜ್ಜಿತ ತಂಡ ಬೇಕು…
ತಂಡ ಕಟ್ಟಿದ, ಗೆದ್ದ…
ಬದುಕು ತುಂಬಾ ಕಲಿಸಿತ್ತು. ಉತ್ತಮ ತಂಡ, ಉನ್ನತ ನಡವಳಿಕೆಗಳಿಂದ ಎಲ್ಲರನ್ನೂ ಜನರನ್ನೂ ಗೆಲ್ಲಬಹುದೆಂಬ ಅರಿವು ಆತನಲ್ಲಿ ನಿತ್ಛಳವಾಯಿತು. ಹೌದು, ಅಂದಿನಿಂದಲೇ ತಂಡ ಕಟ್ಟಲು ಶುರು ಮಾಡಿದ. ಉನ್ನತ ಕೆಲಸಗಾರರಿಂದ ಹಾಳೆ ಬಟ್ಟಲು ತಯಾರಿಸಿದ. ಉತ್ತಮ ಮಾರ್ಕೆಟಿಂಗ್ ತಂತ್ರ ಅರಿತವನಿಗೆ ತನ್ನ ಉತ್ಪನ್ನ ಮಾರಾಟ ಮಾಡುವ ಜವಾಬ್ದಾರಿಯನ್ನು ಕೊಟ್ಟ. ತಾನು ಎಲ್ಲರೊಂದಿಗೆ ಬೆರೆಯುತ್ತಾ ಅವರನ್ನೂ ಹುರಿದುಂಬಿಸಲು ಪ್ರಾರಂಭಿಸಿದ.
ಈಗ ಎಲ್ಲರಿಗೂ ತಮ್ಮ ಬಾಸ್, ಕಂಪೆನಿ ಬಗ್ಗೆ ಗೌರವ ನೂರ್ಮಡಿಯಾಯಿತು. ಇಷ್ಟ ಪಟ್ಟು ಕೆಲಸ ಮಾಡಿದರು. ಕಂಪೆನಿ ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗಿ ಹಾಳೆ ಬಟ್ಟಲು ಮಾರಾಟದಲ್ಲಿ ಖ್ಯಾತಿಯನ್ನು ಗಳಿಸಿತು. ಅದೇ ವ್ಯಕ್ತಿತ್ವದ ಪ್ರತಿಫಲನ ಕಾಲೇಜು ಶಿಕ್ಷಣದಲ್ಲೂ ಸಾಧ್ಯವಾಯಿತು. ಒಬ್ಬನೇ ಕೂತು ಓದುತ್ತಿದ್ದವ ಎಲ್ಲರೊಂದಿಗೂ ಬೆರೆತು ತನಗಿದ್ದ ಗೊಂದಲಗಳನ್ನು ಪರಿಹರಿಸುತ್ತಿದ್ದ. ಇತರರಿಗೂ ನೆರವಾಗುತ್ತಿದ್ದ. ಆ ವರ್ಷದ ಕಲಿಕೆಯಲ್ಲೂ ಹಿರಿದಾದ ಪ್ರಗತಿಯಾಯಿತು.
-ಹಿರಣ್ಮಯಿ