Advertisement

ಶಿಕ್ಷಕರಿಗೆ ಕನಿಷ್ಠ ಪದವಿ: ಆರ್‌ಟಿಇ ಕಾಯ್ದೆಗೆ ತಿದ್ದುಪಡಿ

03:45 AM Mar 23, 2017 | |

ನವದೆಹಲಿ: ಪ್ರಾಥಮಿಕ ಶಾಲೆಗಳ ಎಲ್ಲ ಶಿಕ್ಷಕರು ಕನಿಷ್ಠ ವಿದ್ಯಾರ್ಹತೆ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸುವ ನಿಟ್ಟಿನಲ್ಲಿ “ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009’ಕ್ಕೆ (ಆರ್‌ಟಿಇ) ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟ ತಿದ್ದುಪಡಿಯನ್ನು ಅನುಮೋದಿಸಿದ್ದು, ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಗಳಿಸಲು ಅಗತ್ಯವಿರುವ ತರಬೇತಿ ಪಡೆಯುವ ಅವಧಿಯನ್ನು ನಾಲ್ಕು ವರ್ಷಗಳ ಕಾಲ ಅಂದರೆ, 2019ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ. 

ಈ ಮೂಲಕ ಪ್ರಾಥಮಿಕ ಶಾಲೆಗಳ ಅನನುಭವಿ ಶಿಕ್ಷಕರು ತರಬೇತಿ ಪಡೆಯಲು ಈ ತಿದ್ದುಪಡಿ ಅವಕಾಶ ಮಾಡಿಕೊಟ್ಟಿದೆ. ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಉತ್ತಮಪಡಿಸುವ ಕೇಂದ್ರದ ಉದ್ದೇಶಕ್ಕೆ ಈ ತಿದ್ದುಪಡಿ ಪೂರಕವಾಗಿದೆ. ದೇಶದಲ್ಲಿನ 66.41 ಲಕ್ಷ ಪ್ರಾಥಮಿಕ ಶಾಲೆ ಶಿಕ್ಷಕರ ಪೈಕಿ 11 ಲಕ್ಷ ಅನನುಭವಿ ಶಿಕ್ಷಕರಿದ್ದಾರೆ  ಎಂದು ದೇಶದ ವಿವಿಧ ರಾಜ್ಯ ಸರ್ಕಾರಗಳು ತಿಳಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆರ್‌ಟಿಇ ಕಾಯ್ದೆ  ತಿದ್ದುಪಡಿಗೆ ಮುಂದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next