ಕನಕಪುರ: ಸೋಮವಾರ ಆರಂಭವಾದ 6ರಿಂದ 8ನೇ ತರಗತಿಗೆ ಉತ್ಸಾಹದಿಂದ ಹಾಜರಾದ ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ಶಿಕ್ಷಕರು ಶಾಲೆಗೆ ಬರಮಾಡಿಕೊಂಡರು.
ಕಳೆದ ತಿಂಗಳ ಹಿಂದೆಯಷ್ಟೇ 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಮಾಡಿದ್ದ ಸರ್ಕಾರ,
ಈಗ6ರಿಂದ8ನೇ ತರಗತಿ ಮಕ್ಕಳಿಗೆ ಶಾಲೆ ಆರಂಭ ಮಾಡಿದೆ.
ಕೋವಿಡ್ 2ನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು ತಾಲೂಕಿನಲ್ಲಿ ಪಾಸಿಟಿವಿಟಿ ಶೇ.2ಕ್ಕಿಂತಕಡಿಮೆ ಇದೆ. ಈ ಹಿನ್ನೆಲೆ ಕೋವಿಡ್ ನಿಯಮ ಅನುಸರಿಸಿ ಶಾಲೆ ತೆರೆಯಲು ಸೂಚನೆ ನೀಡಿತ್ತು. ಸೋಮವಾರ ಮೊದಲ ದಿನ ತಾಲೂಕಿನಲ್ಲಿ ಪ್ರಾಥಮಿಕ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆ ಬಾಗಿಲು ತೆರೆದಿದ್ದವು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಹೂ ಹಿಡಿದು ಹಣಿಯಾಗಿದ್ದರು. ಶಾಲೆಗಳಿಗೆ ಮಕ್ಕಳು ಹಾಜರಾಗುತ್ತಿದ್ದಂತೆ ಮಕ್ಕಳಿಗೆ ಹೂ ನೀಡಿ ಖುಷಿಯಿಂದಲೇ ಬರಮಾಡಿಕೊಂಡಿದ್ದು ಕಂಡು ಬಂದಿತು. ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಆರಂಭವಾಗದೆ ಬಾಗಿಲು ಮುಚ್ಚಿದ್ದರಿಂದ ಶಾಲೆ ಆವರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಎಲ್ಲಾ ಶಾಲೆಗಳನ್ನು ಸ್ವಚ್ಛಗೊಳಿಸಲಾಗಿತ್ತು.
ಇದನ್ನೂ ಓದಿ:ಐಮೊಬೈಲ್ ಪೇ ಆ್ಯಪ್ ಮೂಲಕ ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಾಕಿ ತಕ್ಷಣ ಪಾವತಿಸಿ
ಶಾಲೆಗೆ ಹಾಜರಾದ ಮಕ್ಕಳು ಹಾಗೂ ಶಿಕ್ಷಕರು ಮೊದಲ ದಿನ ಕೋವಿಡ್ ಸಂದರ್ಭದ ಅನುಭವಗಳನ್ನು ಪರಸ್ಪರ ಹಂಚಿಕೊಂಡರು. ಪ್ರತಿಯೊಬ್ಬ ಪೋಷಕರ ಅನುಮತಿ ಪತ್ರ ತರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಸ್ಯಾನಿಟೈಸರ್‌ಕಡ್ಡಾಯ, ಎಲ್ಲರೂ ಕೋವಿಡ್ ನಿಯಮಪಾಲನೆ ಮಾಡಬೇಕು ಎಂದು ಶಿಕ್ಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.