ನವದೆಹಲಿ: ದೇಶದಲ್ಲಿ ಕೋವಿಡ್ ಆತಂಕ ಆವರಿಸಿದ್ದರೂ, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ದುಡಿದ ನಮ್ಮ ಶಿಕ್ಷಕರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆ ನಿಮಿತ್ತ ದೇಶದ ಶಿಕ್ಷಕ ವೃಂದಕ್ಕೆ ಶುಭಾಶಯ ಸಲ್ಲಿಸಿದ ಅವರು, “ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಶಿಕ್ಷಕರು ಆನ್‌ಲೈನ್ ಮೂಲಕ ಮಕ್ಕಳ ಶಿಕ್ಷಣಕ್ಕೆ ಮುಂದಾದರು.
ಲಾಕ್‌ಡೌನ್‌ನ ಎಲ್ಲಾ ಸವಾಲುಗಳನ್ನು ಮೆಟ್ಟಿ, ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ನೋಡಿಕೊಂಡರು” ಎಂದರು.
ಇದನ್ನೂ ಓದಿ:ಉಡುಪಿ: “2 ವಾರದಲ್ಲಿ ಶೇ. 1ಕ್ಕಿಂತ ಕಡಿಮೆ ಪಾಸಿಟಿವ್ ಗುರಿ’ -ಜಿಲ್ಲಾಧಿಕಾರಿ
ಶಿಕ್ಷಕರದ ದಿನಾಚರಣೆಯು ಅವರ ಸೇವೆಯನ್ನು ಸ್ಮರಿಸುವ ದಿನವಾಗಿದೆ ಎಂದ ಕೋವಿಂದ್, “ಶಿಕ್ಷಕರ ನಿಸ್ವಾರ್ಥ ಹಾಗೂ ಸಮರ್ಪಣಾ ಭಾವದಿಂದ ದುಡಿಯುವ ಮನೋಭಾವಕ್ಕೆ ಈ ದಿನದಂದು ಕೃತಜ್ಞತೆಯನ್ನು ಸಲ್ಲಿಸಬೇಕಿದೆ.
ನಮ್ಮ ಮಕ್ಕಳಲ್ಲಿ ಬೌದ್ಧಿಕ ಹಾಗೂ ನೈತಿಕ ಮೌಲ್ಯಗಳನ್ನು ತುಂಬುವ ಅವರನ್ನು ಹೃತ್ಪೂರ್ವಕ ವಾಗಿ ಶ್ಲಾಘಿಸಬೇಕಿದೆ” ಎಂದರು.