Advertisement
ನಗರದ ಕರ್ನಾಟಕ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಕಸಾಪ ಸಂಸ್ಥಾಪನೆಯ 102ನೇ ವರ್ಷಾಚರಣೆ ಅಂಗವಾಗಿ, ಕಸಾಪ- 102 ಗ್ರಾಮ ಘಟಕಗಳ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ-ಕೃಷಿಕ-ಸೇವಕ ಇವು ನಮ್ಮ ಸಮಾಜದ ಆಧಾರ ಸ್ತಂಭಗಳಾಗಿವೆ ಎಂದು ಬಣ್ಣಿಸಿದರು.
ದುಶ್ಚಟಗಳಿಂದ ದೂರವಿದ್ದು ಸ್ನೇಹಿತರಾಗಿ, ಮಾರ್ಗದರ್ಶಿಯಾಗಿ, ತತ್ವ ಜ್ಞಾನಿಯಾಗಿರಬೇಕು. ಅಂಥ ಶಿಕ್ಷಕ ದೇವರಿಗೆ ಸಮ ಅಂಥ ಶಿಕ್ಷಕರ ವೇತನ ಹೆಚ್ಚಾಗಬೇಕು. ಅದರಿಂದ ಅವರ ಮಾನಸಿಕ ನೆಮ್ಮದಿ ಸುಧಾರಿಸಿ ಉತ್ತಮ, ಗುಣಾತ್ಮಕ ಶಿಕ್ಷಣ ನೀಡಬಲ್ಲರು ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯೆ ಡಾ| ಶಿವಗಂಗಾ ರುಮ್ಮಾ ಅವರು ಸನ್ಮಾನ ಸ್ವಿಕರಿಸಿ ಮಾತನಾಡಿ,
ಸ್ವಾತಂತ್ರ್ಯಾ ಹೋರಾಟದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಬದಲಾದ ಕಾಲಗತಿಯ ಶಿಕ್ಷಕರ ಮನೋಭಾವವೂ ಬದಲಾಗಿದೆ. ಶಿಕ್ಷಣ ವ್ಯವಸ್ಥೆ, ಮೌಡ್ಯ, ಭ್ರಷ್ಟಾಚಾರ ಮುಕ್ತವಾಗಬೇಕು. ಕಳೆದ ಇಪ್ಪತ್ತು ವರ್ಷಗಳಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಾಗಿರುವುದು ದುರಂತದ ಸಂಗತಿಯಾಗಿದೆ ಎಂದು ಹೇಳಿದರು.
Related Articles
Advertisement
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸಾಪ ಸಾಹಿತ್ಯ- ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಶಿಕ್ಷಣ ವಿಕಾಸಕ್ಕೂ ದುಡಿಯಲು ಸಿದ್ಧವಾಗಿದೆ. ಸಮಾಜಮುಖೀಯಾದ ಕೆಲಸಗಳಿಗೆ ಶಿಕ್ಷಕರು ಕೈ ಜೋಡಿಸಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಂಡಿತ ಬಾಳೂರೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರಸಪ್ಪ ಕವಿ ಹಾಗೂ ಜಿಲ್ಲೆಯ ಉತ್ತಮ ಶಿಕ್ಷಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ| ಬಿ.ಎಸ್.ಬಿರಾದಾರ, ಜಿಲ್ಲಾ ಎನ್‌ಜಿಒ ಗೃಹ ನಿರ್ಮಾಣ ಅಧ್ಯಕ್ಷ ಬಾಲಾಜಿ ಬಿರಾದಾರ, ಶಿಕ್ಷಕರ ಸಂಘದ ಉಪಾಧ್ಯಕ್ಷ ಗಣಪತಿ ಭಕ್ತ ಮೊದಲಾದವರು ವೇದಿಕೆಯಲ್ಲಿದ್ದರು. ಡಾ| ಬಸವರಾಜ ಬಲ್ಲೂರ ನಿರೂಪಿಸಿದರು ಟಿ.ಎಂ.ಮಚ್ಚೆ ಸ್ವಾಗತಿಸಿದರು. ಜಗನ್ನಾಥ ಕಮಲಾಪುರೆ ವಂದಿಸಿದರು.