Advertisement

ಶಿಕ್ಷಕರಿಗಿದೆ ಜಗತ್ತು ಬೆಳಗಿಸುವ ಶಕ್ತಿ 

03:25 PM Sep 06, 2018 | |

ರೋಣ: ಇಡೀ ಜಗತ್ತನ್ನು ಬೆಳಗಿಸುವ ಅವಕಾಶ ಶಿಕ್ಷಕರಿಗಿದೆ. ಈ ಅವಕಾಶವನ್ನು ಶಿಕ್ಷಕರು ಸರಿಯಾಗಿ ಬಳಸಿಕೊಂಡು ಭವ್ಯ ಭಾರತ ಪ್ರಜೆಗಳನ್ನು ನಿರ್ಮಾಣ ಮಾಡಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಬುಧವಾರ ಪಟ್ಟಣದ ಗುರುಭವನದಲ್ಲಿ ಜರುಗಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ರವರ 130ನೇ ಜನ್ಮ ದಿನಾಚರಣೆ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ, ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ದೇಶದ ಭವಿಷ್ಯ ನಿರ್ಮಿಸಬೇಕಾದ ಶಿಕ್ಷಕರು ಸೂಕ್ತ ತರಬೇತಿ, ಪಾಂಡಿತ್ಯ ಹೊಂದಿರಬೇಕು. ಸರಕಾರ ಜಾರಿಗೆ ತಂದಿರುವ ಕಡ್ಡಾಯ ಮತ್ತು ಉಚಿತ ಶಿಕ್ಷಣ ಲಾಭ ಎಲ್ಲರೂ ಪಡೆದುಕೊಳ್ಳಬೇಕು. ಮಕ್ಕಳನ್ನು ಪ್ರಾಥಮಿಕ ಹಂತದಿಂದ ಗಟ್ಟಿಗೊಳಿಸಬೇಕು. ಆದರ್ಶ ಶಿಕ್ಷಕನಿಗೆ ತಾನು ಎಷ್ಟೇ ಸಂಪತ್ತು ಸಂಗ್ರಹಿಸಿದರೂ, ತಮ್ಮ ಮಕ್ಕಳು ಯಾವುದೇ ಸಾಧನೆ ಮಾಡಿದರೂ ಅದು ಸಂತೋಷ ನೀಡದು. ಅದೇ ತನ್ನ ಕೈಯಲ್ಲಿ ಕಲಿತ ವಿದ್ಯಾರ್ಥಿ ಸಾಧನೆ ಮಾಡಿದಾಗ ಸಿಗುವ ನೆಮ್ಮದಿ ಬೇರಾವುದರಲ್ಲಿ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಸದೃಢ, ಸುಸಂಸ್ಕೃತ ನಾಡು ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದರು.

ಬಸವನಬಾಗೇವಾಡಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಂಗಮೇಶ ಪೂಜಾರ ಉಪನ್ಯಾಸ ನೀಡಿ, ಶಿಕ್ಷಣ ನಿಂತ ನೀರಲ್ಲ. ಅದು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಇದನ್ನರಿತು ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಮೂಲಕ ಸರಕಾರಿ ಶಾಲೆ ಮುಚ್ಚುವ ಕಾರ್ಯಕ್ಕೆ ಕಡಿವಾಣ ಹಾಕಬೇಕು ಎಂದರು.

ಗುಲಗಂಜಿಮಠದ ಗುರುಪಾದ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕ್ಷೇತ್ರ ಶಿಕ್ಷಣಾಧಿ ಕಾರಿ ಎನ್‌. ನಂಜುಂಡಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು, ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಶೇ.100ರಷ್ಟು ಫಲಿತಾಂಶ ನೀಡಿದ ಶಾಲೆಯ ಮುಖ್ಯಸ್ಥರು ಸನ್ಮಾನಿಸಲಾಯಿತು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಪಂ ಸದಸ್ಯೆ ಮಲ್ಲವ್ವ ಬಿಚ್ಚಾರ, ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಉಪಾಧ್ಯಕ್ಷೆ ಇಂದಿರಾ ತೇಲಿ, ಮುತ್ತಣ್ಣ ಲಿಂಗನಗೌಡ್ರ, ಅಶೋಕ ನವಲಗುಂದ, ಬಿ.ಎಂ. ಸಜ್ಜನರ, ವೀರೂಪಾಕ್ಷಗೌಡ ಪಾಟೀಲ, ಹೇಮಾವತಿ ಕಡದಳ್ಳಿ, ನಂಜುಂಡಯ್ಯ,ಬಿ.ವಿ. ಅಂಗಡಿ, ವೈ.ಡಿ. ಗಾಣಿಗೇರ, ಸಿ.ಬಿ. ರಡ್ಡೇರ, ಪರಶುರಾಮ ವಾಲ್ಮೀಕಿ, ಬಿ.ಎನ್‌. ಭಜಿ, ವಿ.ಎ. ಹಾದಿಮನಿ, ವಿ.ಎಸ್‌. ರಾಠೊಡ, ಎಂ.ವಿ. ಚಳಗೇರಿ, ಮಹೇಶ ಕುರಿ, ಕ್ಯಾತನಗೌಡ್ರ, ಐ.ಎ. ರೇವಡಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next