Advertisement

Teacher’s day: ಶ್ರೀ ಗುರುವೇ ನಮಃ

03:21 PM Sep 04, 2023 | Team Udayavani |

ಅಜ್ಞಾನಂ ತಿಮಿರಾಂದಸ್ಯ ಜನಾಂಜನ ಶಲಕಾಯ, ಚಕ್ಷುರ್‌ ಉನ್ಮಿಲಿತಯೇನ ತಸ್ಮಯ್‌ ಶ್ರೀ ಗುರುವೇ ನಮಃ. ಅಜ್ಞಾನವೆಂಬ ಕತ್ತಲೆಯಿಂದ ಕುರುಡನಾದವನ ಕಣ್ಣನ್ನು ಗುರುವು ಜ್ಞಾನವೆಂಬ ಕಾಡಿಗೆಯ ಕಡ್ಡಿಯಿಂದ ತೆರೆಸುತ್ತಾನೆ ಎಂದು ಭಗವದ್ಗೀತೆಯ ಮೊದಲ ಭಾಗದಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಅಂತಹ ಗುರುಗಳಿಗೆ ನಮ್ಮ ಜೀವನವಿಡೀ ಶ್ರಮಿಸಿದರು ಋಣಮುಕ್ತರಾಗಲು ಸಾಧ್ಯವಿಲ್ಲ. ಯಾವುದೇ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅಂತಹ ಶಿಕ್ಷಕರನ್ನು ಗೌರವಿಸಲು ಅವರಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಶಿಕ್ಷಕರ ದಿನಾಚರಣೆ.

Advertisement

ಡಾ| ಸರ್ವಪಲ್ಲಿ ರಾಧಾಕೃಷ್ಣ ಅವರು ಜನ್ಮದಿನಾವಾದ ಸೆಪ್ಟಂಬರ್‌ 5ನ್ನು ಶಿಕ್ಷಕರ ದಿನವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಜನಿಸಿದ ರಾಧಾಕೃಷ್ಣ ಅವರು ಮಹಾನ್‌ ಶಿಕ್ಷಕ ಮತ್ತು ತತ್ವಜ್ಞಾನಿ. ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿಯೂ ಆಗಿದ್ದರು. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರ ಕೊಡುಗೆ ಅಪಾರ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಭಾರತದಲ್ಲಿ ಶಿಕ್ಷಕರ ದಿನದ ಮುನ್ನಾ ದಿನದಂದು ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ಸಲುವಾಗಿ ದೇಶದ ಸಾಧಕ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಶಿಕ್ಷಕರ ದಿನವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸುಂದರವಾದ ಬಾಂಧವ್ಯವನ್ನು ಆಚರಿಸಲು ಅದ್ಭುತ ಸಂದರ್ಭವಾಗಿದೆ. ಈ ದಿನವನ್ನು ವಿದ್ಯಾರ್ಥಿಗಳು ಹಬ್ಬದ ಹಾಗೆ ಆಚರಿಸುವ ಮೂಲಕ ತಮ್ಮ ಶಿಕ್ಷಕರಿಗೆ ಗೌರವವನ್ನು ತೋರ್ಪಡಿಸುತ್ತಾರೆ.

“”ಧಾತೃತ್ವಮೇವ ಸರ್ವಭ್ಯೋ ಗುಣೇಭ್ಯೋ ಭಾಸಥೇತರಂ ಜ್ಞಾತೃತ್ವ ಸಹಿತಂ ತುಚ್ಛೇತ್ಸುವರ್ಣಸೇವಾ ಸೌರಭಂ” ಅಂದರೆ ಜಗತ್ತಿನಲ್ಲಿ ಎಲ್ಲ ಗುಣಗಳಿಗಿಂತ ಮಿಗಿಲಾದ ಗುಣ ಅದು ದಾನ ಮಾಡುವ ಗುಣ. ಅದು ಜ್ಞಾನ ಗುಣದೊಡನೆ ಬೆರೆತಾಗ ಚಿನ್ನಕ್ಕೆ ಪರಿಮಳ ಇಟ್ಟಂತೆಯೇ ಶೋಭಿಸುತ್ತದೆ ಅಂತೆಯೇ ವಿದ್ಯೆ ಎಂಬ ಜ್ಞಾನವನ್ನು ನಮಗೆ ದಾನ ಮಾಡಿರುವ ನಮ್ಮ ಗುರುಗಳು ಚಿನ್ನಕ್ಕೆ ಪರಿಮಳ ಇತ್ತಂತೆ ಶೋಭಿಸುತ್ತಾರೆ ಎನ್ನುವುದು ಇದರ ಅರ್ಥ. ನನ್ನೆಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

-ಶಾಂಭವಿ,

ಭಂಡಾರ್ಕರ್ಸ್ ಕಾಲೇಜು,

Advertisement

ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next