Advertisement
ತಂದೆ ಪ್ರೀತಿ ತೋರು ಗುರುನಾನು ಮೊದಲ ಸಲ ಮನೆ ಬಿಟ್ಟು ವಸತಿ ಶಾಲೆಗೆ ಬಂದಾಗ ಹೊರ ಪ್ರಪಂಚದ ಅರಿವಿಲ್ಲದೆ ಅಂಜುತ್ತಾ ತಬ್ಬಿಬ್ಟಾಗಿ ನಿಂತಿದ್ದೆ. ಆದರೆ ನೀವು ನನ್ನ ಪ್ರಾಂಶುಪಾಲರಾಗದೆ ಶಾಲೆಗೆ ಬಂದ ಮೊದಲ ದಿನವೇ ಅಪ್ಪಾಜಿ ಪ್ರೀತಿ ತೋರಿ ಸ್ವಂತ ಮಗಳಂತೆ ಕಂಡು ವಾತ್ಸಲ್ಯದ ಧಾರೆಯೆರೆದಿದ್ದೀರಿ. ಈ ವರ್ಷ ನಾನು ಎಸ್ಸೆಸ್ಸೆಲ್ಸಿ. ನನ್ನ ಅಂಕ 600 ದಾಟಬೇಕು ಎಂದು ವಾಗ್ಧಾನ ಮಾಡಿಸಿಕೊಂಡಿದ್ದೀರಿ. ಖಂಡಿತವಾಗಿಯೂ ನಾನು ಸಾ ಧಿಸಿ ತೋರಿಸುತ್ತೇನೆ. ನಿಮ್ಮಂಥ ವ್ಯಕ್ತಿ ನನಗೆ ಗುರು, ಮಾರ್ಗದರ್ಶಿ, ಅಪ್ಪಾಜಿಯಾಗಿ ಲಭಿಸಿದ್ದಕ್ಕೆ ನಾನು ಅದೃಷ್ಟಶಾಲಿ. ನಿಮ್ಮ ಪ್ರೀತಿ ಈ ಕಂದನಿಗೆ ಸದಾ ಇರಲಿ. ನೀವು ನನಗೆ ಮಾತ್ರವಲ್ಲ ಎಲ್ಲ ವಿದ್ಯಾರ್ಥಿಗಳಿಗೂ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದೀರಿ ಸರ್.
**
ಗಣಿತ ಜತೆ ಮೌಲ್ಯಗಳ ಬೋಧನೆ
ಗಣಿತ ಟೀಚರ್ ಚಂದನಾ ಮೇಡಂ ಕಂಡರೆ ಬಹಳ ಇಷ್ಟ. ಘಟಕ ಪರೀಕ್ಷೆಗಳಲ್ಲಿ ಅಂಕಗಳು ಹೆಚ್ಚು-ಕಡಿಮೆಯಾದರೂ ವಿದ್ಯಾರ್ಥಿಗಳನ್ನು ಮೂದಲಿಸದೆ, ಪ್ರೋತ್ಸಾಹಕರ ನುಡಿಗಳನ್ನು ಆಡಿ ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕವನ್ನು ತಗೆಯಬೇಕು ಎಂದು ಉತ್ತೇಜಿಸುತ್ತಾರೆ. ಚಂದನಾ ಮೇಡಂ ಗಣಿತವನ್ನಲ್ಲದೇ ಮೌಲ್ಯಧಾರಿತ ವಿಷಯಗಳನ್ನು ಬೋಧಿಸುತ್ತಾರೆ. ನೀತಿಕಥೆಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳು ಹೇಗಿರಬೇಕು, ಮುಂದೆ ಯಾವ ರೀತಿ ಉತ್ತಮ ಪ್ರಜೆಯಾಗಿ ಜೀವನ ನಡೆಸಬೇಕು. ಒಳ್ಳೆಯತನವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದನ್ನು ಹೇಳಿಕೊಡುತ್ತಾರೆ. ಅಂತರ ಶಾಲೆಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಭಾಗವಹಿಸಲು ಸ್ಫೂರ್ತಿ ತುಂಬುತ್ತಾರೆ.
– ಕಂಗನಾ ವಿ. 7ನೇ ತರಗತಿ, ಸಿಕೆಸಿ ಪಬ್ಲಿಕ್ ಸ್ಕೂಲ್, ಲಕ್ಷ್ಮೀಪುರಂ, ಮೈಸೂರು
**
ನೀವು ಟೀಚರ್ ಅಲ್ಲ, ಫ್ರೆಂಡ್
ನನಗೆ ಇಷ್ಟವಾದ ಗುರು ಸಂಗಮೇಶ ಉಟಗಿ. ಮಗಳ ರೀತಿ ಕಾಣುತ್ತೀರಿ. ಹಾಗೆ ನೀವು ನನಗೆ ಅಂತಲ್ಲ ಎಲ್ಲರಿಗೂ ಮಾನವೀಯ ಗುಣ ಹಾಗೂ ಮೌಲ್ಯಗಳನ್ನು ತಿಳಿಸುತ್ತೀರಿ. ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡುವಾಗ ಗಣಿತ ವಿಷಯದ ಮೇಲೆ ಆಸಕ್ತಿ ಇರಲಿಲ್ಲ. ಆದರೆ ಪ್ರೌಢ ಶಾಲೆಗೆ ಬಂದ ಮೇಲೆ ನೀವು ಅದರ ಮೇಲೆ ಆಸಕ್ತಿ ಬರುವ ಹಾಗೆ ಮಾಡಿದ್ದೀರಿ. ಗಣಿತ ಕಬ್ಬಿಣದ ಕಡಲೆ ಅಲ್ಲ. ಅದು ಸರಳ ಎಂಬುದು ನಿಮ್ಮ ಬೋಧನೆಯಿಂದ ತಿಳಿದುಕೊಂಡೆವು. ನೀವು ಕೇವಲ ಶಿಕ್ಷಕರಾಗಲಿಲ್ಲ. ಒಂದು ವಿಧದಲ್ಲಿ ಮಿತ್ರರ ಹಾಗೆ ಇದ್ದೀರಿ. ಏಕೆಂದರೆ ಎಲ್ಲ ವಿಷಯವನ್ನು ಹಂಚಿಕೊಳ್ಳುತ್ತೀರಿ. ನಮ್ಮ ಜೊತೆ ಸ್ನೇಹ ಸಂಬಂಧದಿಂದ ಇರುತ್ತೀರಿ. ಅದಕ್ಕೆ ನನಗೆ ನೀವು ತುಂಬಾ ಇಷ್ಟ.
– ಮಧುಮತಿ ಹನುಮಂತ ಚಿಕ್ಕಲಕಿ, 10ನೇ ತರಗತಿ, ಸ.ಪ್ರೌ. ಶಾಲೆ ಕುಂಬಾರಹಳ್ಳ, ಬಾಗಲಕೋಟೆ
**
ನಿಮ್ಮ ಪಾಠ ಕೇಳುವುದೇ ಚಂದ
ಕುಮಾರ ಕೆ.ಎಫ್. ಕೇವಲ ಶಿಕ್ಷಕರಲ್ಲ ಅದಕ್ಕಿಂತ ಮಿಗಿಲಾದವರು. ತಪ್ಪಾ ದಾಗ ತಿದ್ದಿ ಪ್ರೋತ್ಸಾಹಿಸಿದ್ದಿರಿ. ನಿಮ್ಮ ತಾಳ್ಮೆ ನಮಗೂ ಕಲಿಸಿದ್ದಿರಿ. ನಮ್ಮ ಯಶಸ್ಸಿನ ಹಿಂದೆ ನಿಮ್ಮ ಶ್ರಮ ಅತಿ ಮುಖ್ಯ ವಾಗಿದೆ. ನನ್ನ ವ್ಯಕ್ತಿತ್ವ ತುಂಬಾ ಸುಂದರವಾಗಿ ರೂಪುಗೊಳ್ಳಲು ಪ್ರಭಾವ ಬೀರಿದವರು. ಮಾರ್ಗದರ್ಶನ ಹಾಗೂ ಸಹಾಯಕ್ಕೆ ನನ್ನ ಕೃತಜ್ಞತೆ. ಸ್ವಭಾವತಃ ತಮಾಷೆ ಮತ್ತು ಕಾಳಜಿ ಯುಳ್ಳವರು. ತುಂಬಾ ಶಿಸ್ತು ಮತ್ತು ಸಮಯ ಪ್ರಜ್ಞೆಯುಳ್ಳವರು. ನಮಗೆ ಒಳ್ಳೆಯ ವಿಷಯಗಳನ್ನು ಕಲಿಸಲು ತುಂಬಾ ಸುಲಭವಾದ ಮಾರ್ಗಗಳನ್ನು ಪ್ರಯತ್ನಿಸುವ ಕಾರಣ ನಾನು ತುಂಬಾ ಇಷ್ಟಪಡುತ್ತೇನೆ. ಇಂಗ್ಲಿಷ್ ಪಾಠ ಮಾಡುವಾಗ ಮಧ್ಯೆ ಸಾಕಷ್ಟು ಜೋಕ್‌ಗಳನ್ನು ಹೇಳಿ ನಮ್ಮನ್ನು ನಗಿಸುತ್ತೀರಿ. ಪಠ್ಯೇತರ ಚಟುವಟಿಕೆಗೂ ಹುರಿದುಂಬಿಸುತ್ತೀರಿ. – ದಿನೇಶ ಕಂಬಾರ, 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ ದೇವಿಕೊಪ್ಪ, ಧಾರವಾಡ ಜಿಲ್ಲೆ
**
ನಮ್ಮ ಮಿಸ್ಸು ಸ್ಫೂರ್ತಿಯ ಸೆಲೆ
ದಾಕ್ಷಾಯಣಿ ಮೇಡಂ ನೀವು ನನಗೆ ಅಚ್ಚುಮೆಚ್ಚು. ನೀವು ಗುರುಗಳಷ್ಟೇ ಅಲ್ಲ, ಮಾರ್ಗದರ್ಶಕರು ಹಾಗೂ ಸ್ಫೂರ್ತಿಯ ಮೂಲ. ವಿಷಯದ ಬಗ್ಗೆ ನಿಮ್ಮ ಉತ್ಸಾಹ ಹಾಗೂ ನಾವು ಯಶಸ್ವಿಯಾಗಲು ನೀವು ಸಹಾಯ ಮಾಡುವ ಬದ್ಧತೆಯೂ ನನ್ನ ಶೈಕ್ಷಣಿಕ ಪ್ರಯಾಣದಲ್ಲಿ ಅಳಿಸಲಾಗದ ಗುರುತು. ನಿಮ್ಮ ಬೋಧನಾ ಶೈಲಿಯು ತೊಡಗಿಸಿಕೊಳ್ಳುವ ಒಳನೋಟವನ್ನು ಹೊಂದಿದೆ. ಅತ್ಯಂತ ಸವಾಲಿನ ವಿಷಯಗಳನ್ನು ಸಹ ಸುಲಭವಾಗಿ ಹಾಗೂ ಆಸಕ್ತಿದಾಯಕವಾಗಿ ಮಾಡುತ್ತೀರಿ. ತಾವು ಶಾಲೆಯ ಮುಖ್ಯ ಗುರುಗಳು ಆಗಿರುವುದರಿಂದ ಶೈಕ್ಷಣಿಕವಾಗಿಯೂ ಹಾಗೂ ಶಾಲಾ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಹಾಕಿಕೊಂಡು ಮುನ್ನಡೆಸುತ್ತಿದ್ದೀರಿ.
– ಸ್ವಸ್ತಿಕ್, 8ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಲ್ಯಪದವು, ಮಂಗಳೂರು
**
ಪ್ರೀತಿ, ತಾಳ್ಮೆ ಮೌಲ್ಯದ ಪ್ರತೀಕ
ನಾನು ವ್ಯಾಸಂಗ ಮಾಡುತ್ತಿರುವ ಸಂಸ್ಕೃತಿ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕರೂ ನನ್ನ ಜೀವನ ರೂಪಿಸುವಲ್ಲಿ ಕಾರಣಿಭೂತ ರಾಗಿದ್ದರೂ ಶ್ವೇತಾ ದುಬೆ ಟೀಚರ್ ನೋಡಿದಾಗ ವಿಶೇಷ ಭಕ್ತಿ-ಭಾವ. ನೀವು ನಮಗೆ ಪ್ರೀತಿ ಮತ್ತು ತಾಳ್ಮೆಯಿಂದ ಕಠಿಣ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿರಿ. ತಪ್ಪು ಮಾಡಿದಾಗ ಸರಿಪಡಿಸುವುದಲ್ಲದೆ ಮತ್ತೆ ನಮ್ಮನ್ನು ಪ್ರಯತ್ನಿಸಲು ಪ್ರೋತ್ಸಾಹಿಸುತ್ತೀರಿ. ಪಾಠವನ್ನು ಅಥವಾ ಯಾವುದೇ ವಿಷಯವನ್ನು ಕಥೆಗಳ ಮೂಲಕ ನೀವು ಹೇಳಿಕೊಡುವುದು ನನಗೆ ತುಂಬಾ ಇಷ್ಟ, ಬಿಡುವಿನ ವೇಳೆಯಲ್ಲಿ ಕ್ರಾಫ್ಟ್ ವರ್ಕ್ ಮತ್ತು ಮೋಜಿನ ಆಟಗಳನ್ನು ಆಡಿಸುತ್ತೀರಿ. ಒಳ್ಳೆಯ ಸಂಸ್ಕಾರ ಕೊಡುವುದಲ್ಲದೇ ಸಮಾಜದಲ್ಲಿ ನನ್ನನ್ನು ಒಳ್ಳೆಯ ವಿದ್ಯಾರ್ಥಿಯನ್ನಾಗಿ ರೂಪಿಸುತ್ತಿದ್ದೀರಿ.
– ಅಭಯ ಗೌರಿಮಠ, ಸಂಸ್ಕೃತಿ ಶಾಲೆ, ಶಿಗ್ಗಾವಿ, ಹಾವೇರಿ ಜಿಲ್ಲೆ
Related Articles
ನಿಮ್ಮಂತೆ ನಾನೂ ಟೀಚರ್ ಆಗುವೆ
ಕೆ.ಐ.ಕೊಂಗಿ ಸರ್ ನಿಮ್ಮಿಂದ ತುಂಬಾ ಕಲಿತಿದ್ದೇನೆ. ನಾನು ಗ್ರಾಮೀಣ ಭಾಗದ ವಿದ್ಯಾರ್ಥಿನಿ. ನನ್ನಂತೆಯೇ ನನ್ನ ಅನೇಕ ಸಹಪಾಠಿಗಳು ಕೂಡಾ ಹಳ್ಳಿಗಳ ಅನಕ್ಷರಸ್ಥ ಪಾಲಕರ ಮನೆಯಿಂದ ಬರುತ್ತಿದ್ದು, ತಾವು ಕೇವಲ ನಮಗೆ ಮಾತ್ರ ಗುರುವಾಗದೆ ನಮ್ಮ ಪಾಲಕರಿಗೂ ಕೂಡ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟಿದ್ದೀರಿ. ಪ್ರತಿ ಶನಿವಾರ ಬೆಳಗ್ಗೆ 6 ಗಂಟೆಗೆ ಪಾಲಕರ ಮನೆಗೆ ಭೇಟಿ ನೀಡುವುದರ ಮೂಲಕ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸಹ ಪ್ರಯತ್ನ ಪಡುತ್ತಿದ್ದೀರಿ. ತಮ್ಮ ಹಿಂದಿ ವಿಷಯ ಬೋಧನೆ ಆಕರ್ಷಕ, ಸರಳ ಸುಂದರ ಶೈಲಿ, ತಿಳಿಹೇಳುವ ದಾಟಿ ಅತ್ಯಂತ ಆಕರ್ಷಕ. ನಾನು ನಿಮ್ಮಿಂದ ಪ್ರಭಾವಿತಳಾಗಿ ಮುಂದಿನ ನನ್ನ ಜೀವನದಲ್ಲಿ ಓರ್ವ ಶಿಕ್ಷಕಿಯಾಗುವೆ.
– ಐಶ್ವರ್ಯ ಪ್ರಕಾಶ ಬೇಟಗೇರಿ, 10ನೇ ತರಗತಿ, ಗರ್ಲ್ಸ್ ಇಂಗ್ಲಿಷ್ ಹೈಸ್ಕೂಲ್, ಕಲಘಟಗಿ
**
ನನಗೆ ಪರಿಸರ ಪ್ರೀತಿ ಬೆಳೆಸಿದರು
ನಿಂಗಯ್ಯ ಸರ್ ತುಂಬಾ ಇಷ್ಟ. ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಾರೆ. ಪಾಠ ಮಾಡುವಾಗಲೂ ತಮಾಷೆ ಮಾಡುತ್ತಾ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಸದಾ ಚಟುವಟಿಕೆಯಿಂದ ಇರುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ಜೊತೆಗೆ ಗಣಿತ ಹಾಗೂ ಕನ್ನಡ ವಿಷಯಗಳನ್ನು ಅರ್ಥವಾಗುವಂತೆ ಮಾಡುತ್ತಾರೆ. ವಿದ್ಯಾರ್ಥಿಗಳ ಪಾಠದ ಬಗ್ಗೆ ಹೆಚ್ಚು ಗಮನಹರಿಸುವ ಮೂಲಕ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸುತ್ತಾರೆ. ನಮ್ಮ ಎಲ್ಲ ತುಂಟಾಟಗಳನ್ನು ಸಹಿಸಿಕೊಂಡು ಬೇಸರ ಮಾಡಿಕೊಳ್ಳದೆ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಸಮಾನ ರೀತಿಯಲ್ಲಿ ಕಾಣುತ್ತಾರೆ.
– ಹಿತಶ್ರೀ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಣಸಾಲೆ, ಮಳವಳ್ಳಿ, ಮಂಡ್ಯ ಜಿಲ್ಲೆ
**
ನನ್ನ ಮೇಲೆ ನೆಚ್ಚಿನ ಶಿಕ್ಷಕರ ಪ್ರಭಾವ
ಗಣೇಶ ಮೊಗವೀರ ನನ್ನ ನೆಚ್ಚಿನ ಶಿಕ್ಷಕರು. ನಾನು ಕಳೆದ ಒಂದು ವರ್ಷದಿಂದ ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದೇನೆ. ನಿಮ್ಮಲ್ಲಿನ ಶಿಸ್ತು, ಹಿತಮಿತ ಮಾತು, ನಿಮ್ಮ ಪ್ರೇರಣ ದಾಯಕ, ಸ್ಫೂರ್ತಿಯ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿವೆ. ಜೀವನದಲ್ಲಿ ಸವಾಲುಗಳನ್ನು ಎದುರಿಸಿ, ಸಾಧನೆಗಳನ್ನು ಮಾಡಬೇಕೆಂಬ ಛಲವನ್ನು ನೀವು ನನ್ನಲ್ಲಿ ಮೂಡಿಸಿದ್ದೀರಿ. ನಿಮ್ಮ ಪಾಠ ನನ್ನ ಜೀವನದಲ್ಲಿ ಮೌಲ್ಯವನ್ನು ಹೆಚ್ಚಿಸಿದೆ. ನಿಮ್ಮ ಮಾರ್ಗದರ್ಶನ ಅತೀವ ಪರಿಣಾಮ ಬೀರಿದೆ. ಪಾಠದ ವೇಳೆ ಇಂದಿನ ಘಟನೆಗಳನ್ನು ಹೋಲಿಸಿ ನೀವು ಅರ್ಥ ಮಾಡಿಸುವ ನಿಮ್ಮ ಬೋಧನಾ ಶೈಲಿ ನನಗೆ ಖುಷಿ ನೀಡುತ್ತಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ನೀವು ನೀಡುವ ಪ್ರಾಶಸ್ತ್ಯದಿಂದ ಎಲ್ಲ ರಂಗದಲ್ಲೂ ಬೆಳೆಯಬೇಕು ಎನ್ನುವ ಹುಮ್ಮಸ್ಸು ನನ್ನಲ್ಲಿ ಮೂಡಿದೆ.
– ಕಾರ್ತಿಕ್ , 10ನೇ ತರಗತಿ, ಸಾಣೂರು ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗ ಕಾರ್ಕಳ
**
ಚಿತ್ತ ಶುದ್ಧಿ ಮಾಡಿದ ಶಿಕ್ಷಕ
ನನ್ನ ನೆಚ್ಚಿನ ಗುರು ಗಳು ಎಂ. ಎಂ.ವಾಟ ಕ ರ. ಸಹನೆ, ತಾಳ್ಮೆ, ಧ್ಯೆರ್ಯ, ಸತ್ಯದ ಪ್ರತಿರೂಪ. ಸಮಯ ಪಾಲನೆಗೆ “ಗುರು’ಗಳು. ಹಿಂದಿ ಶಿಕ್ಷಕರಾಗಿದ್ದರೂ ನೈತಿಕ ಶಿಕ್ಷಣ, ಸ್ಪರ್ಧಾ ತ್ಮಕ ಪರಿ ಕ್ಷೆ ಸೇರಿ ವ್ಯಕ್ತಿತ್ವ ವಿಕಸನದ ಬಗ್ಗೆ ಪಾಠ ಮಾಡುತ್ತಾರೆ. 10 ವರ್ಷದಲ್ಲಿ ನನಗೆ ಹಿಂದಿ ಸರಾಗವಾಗಿ ಮಾತನಾಡುವ, ಬರೆಯುವ ಚಾಕಚಕ್ಯತೆ ಕಲಿಸಿದ್ದಾರೆ. ನಮ್ಮ ಚಿತ್ತ ವನ್ನು ಶುದ್ಧಿ ಮಾಡಿ ಒಳ್ಳೆಯ ದಾರಿ ತೋರಿದ್ದಾರೆ. ಯಾವಾಗಲು ಅವರು ಹೇಳು ವುದು ಸ್ಟುಡೆಂಟ್ ಲೈಫ್ ಎನ್ನುವುದು ನಿಮಗೆ ಗೋಲ್ಡನ್ ಲೈಫ್ ಆಗ ಬೇ ಕು ಅಂದರೆ ನೀವು ವಿದ್ಯಾ ಭ್ಯಾಸ ಮುಗಿ ಯು ವ ವ ರೆಗೂ ಪ್ರಯ ತ್ನ ವನ್ನು ನಿಲ್ಲಿ ಸ ಬಾರದು. ಶಿಕ್ಷಕ ಪದದ ಅರ್ಥದಂತೆ ನೀವಿದ್ದೀರಿ. ಶಿ-ಶಿಸ್ತು, ಕ್ಷ-ಕ್ಷಮೆ, ಕ-ಕರುಣೆ. ಈ ಎಲ್ಲಾ ಪದಗಳಿಗೂ ಪಾತ್ರರಾಗಿದ್ದೀರಿ.
– ಪ್ರಾರ್ಥನಾ ಹನಮಂತ ಗುಬಚಿ, ಕೆ.ಎಚ್‌ಎಸ್. ಜ.ಎಚ್.ಎಸ್, ಮೂಡಲಗಿ, ಬೆಳಗಾವಿ ಜಿಲ್ಲೆ
**
Advertisement
ಎಲ್ಲರನ್ನೂ ಉತ್ತೇಜಿಸುವ ಶಿಕ್ಷಕಕನ್ನಡ ವಿಷಯ ಕಲಿಸುವ ಆರ್.ವೆಂಕಟರೆಡ್ಡಿ ನನ್ನ ನೆಚ್ಚಿನ ಶಿಕ್ಷಕರು. ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಪ್ರೀತಿಯಿಂದಲೇ ಓದಿಗೆ ಪ್ರೇರೇಪಿಸುತ್ತಾರೆ. ಗೈರಾಗುವ ಮಕ್ಕಳನ್ನು ಅವರ ಪೋಷಕರ ಮನವೊಲಿಸಿ ಶಾಲೆ ಕರೆ ತರುತ್ತಾರೆ. ಕಷ್ಟದಲ್ಲಿದ್ದವರ ಮಾತನಾಡಿಸಿ, ಆದರ್ಶ ವ್ಯಕ್ತಿಗಳ ಉದಾಹರಣೆ ಕೊಟ್ಟು ಧೈರ್ಯ ತುಂಬುತ್ತಾರೆ. ಅವರ ಪಾಠ ಮಾಡುವ ಶೈಲಿ ಮನಮು ಟ್ಟುವಂತಿರುತ್ತದೆ. ಪರೀಕ್ಷೆಗಳಲ್ಲಿ ಅಂಕ ಕಡಿಮೆ ಪಡೆಯುವ ಮಕ್ಕಳಿಗೆ, ಹೆಚ್ಚಿನ ಪ್ರಯತ್ನಕ್ಕೆ ಸ್ಫೂರ್ತಿ ತುಂಬುತ್ತಾರೆ. ಹೆಚ್ಚು ಅಂಕಗಳಿಸಿದವರಿಗೆ ಉತ್ತೇಜನ ನೀಡುತ್ತಾರೆ. ಅವರು ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನೂ ಅವರು ಕಲಿಸಿಕೊಡುತ್ತಾರೆ. ಆದ್ದರಿಂದಲೇ ಇವರು ನನ್ನ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.
– ಎಸ್. ಅಮೂಲ್ಯ, 10 ನೇ ತರಗತಿ, ಸರಕಾರಿ ಪ್ರೌಢಶಾಲೆ, ಅರಾಭಿಕೊತ್ತನೂರು, ಕೋಲಾರ **
ಜೀವನಪಾಠ ಹೇಳಿಕೊಟ್ರಾ..
ನೆಚ್ಚಿನ ಗುರು ಸುರೇಶ್ ಸರ್ ಪಾಠಗಳ ಜತೆಗೆ ಸಮಯಪಾಲನೆ, ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ರೀತಿ ಹೇಳಿ ಕೊಡುತ್ತಾರೆ. ನೀತಿಕಥೆ ಹೇಳುವ ಮೂಲಕ, ನಗಿಸುತ್ತಲೇ ನಮಗೆ ಜೀವನ ಪಾಠವನ್ನು ಅರ್ಥೈಸಿದ್ದಾರೆ. ತಂದೆ-ತಾಯಿ ಜೀವ ನೀಡಿದರೆ ಗುರುಗಳು ಜೀವನ ಕಟ್ಟಿಕೊಡುತ್ತಾರೆ. ನಮ್ಮ ಶಿಕ್ಷಕರು ಅದೇ ರೀತಿ ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟು ನಮ್ಮನ್ನು ಪರಿಪೂರ್ಣ ವ್ಯಕ್ತಿಯಾಗಿ ಸುವ ನಿಷ್ಕಾಮ ಕಾರ್ಯ ಮಾಡುತ್ತಿದ್ದಾರೆ. ಪಾಠ ಬೋಧನೆಯು ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ. ಅವರು ಎಲ್ಲ ರೀತಿಯಿಂದಲೂ ಉತ್ತೇಜನ ನೀಡುತ್ತಾರೆ. ಹಾಗಾಗಿ ಅವರು ಎಲ್ಲರಿಗೂ ಅಚ್ಚು ಮೆಚ್ಚಿನ ಗುರು.
– ಪ್ರೀತಿ ಎನ್., 9ನೇ ತರಗತಿ, ಸರ್ಕಾರಿ ಪ್ರೌಢ ಶಾಲೆ, ತಗಚಗೆರೆ ಚನ್ನಪಟ್ಟಣ ತಾ, ರಾಮನಗರ ಜಿಲ್ಲೆ
**
ಅಮ್ಮನಂತೆ ಪ್ರೀತಿ ತೋರುವ ಶಿಕ್ಷಕಿ
ಸುಮಾ ಮಿಸ್ ಅಂದ್ರೆ ನಮಗೆ ತುಂಬಾ ಇಷ್ಟ. ನಮಗೆ ಪಾಠದ ಜತೆಗೆ ಸಂಸ್ಕಾರ, ನೀತಿ ಪಾಠ, ಶಿಸ್ತು ಕಲಿಸುತ್ತಾರೆ. ಅಮ್ಮನ ತರ ಪ್ರೀತಿಯಿಂದ ನೋಡಿಕೊಂಡು ಅಕ್ಷರ ಕಲಿಸುತ್ತಾರೆ. ಮನೆಯಲ್ಲಿ ಸಿಗುವ ಅಮ್ಮನ ಪ್ರೀತಿಯಂತೆಯೇ ಶಾಲೆಯಲ್ಲಿಯೂ ನಮಗೆ ಸುಮಾ ಮಿಸ್ ಪ್ರೀತಿ ತೋರುತ್ತಾರೆ. ಹಿರಿಯರಿಗೆ, ಗುರುಗಳಿಗೆ ಗೌರವ ಕೊಡುವುದನ್ನು ಹೇಳಿಕೊಟ್ಟಿದ್ದಾರೆ. ಪಾಠದ ಜತೆಗೆ ಮೌಲ್ಯಗಳನ್ನು ಹೇಳಿಕೊಡುತ್ತಾರೆ. ಜೀವನದಲ್ಲಿ ಪಾಠ, ಆಟ ಹೇಗೆ ಮುಖ್ಯವೋ ಅಂತೆಯೇ ಸಂಸ್ಕಾರವೂ ಅಷ್ಟೇ ಮುಖ್ಯ. ಭಾರತೀಯರಾದ ನಾವು ಸಂಸ್ಕಾರದಿಂದ ಬೆಳೆಯಬೇಕು. ಗುರು-ಹಿರಿಯರನ್ನು ಗೌರವಿಸಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. ನಮ್ಮನ್ನು ಪರಿಪೂರ್ಣವಾಗಿಸಲು ಪ್ರಯತ್ನಿಸುತ್ತಾರೆ.
– ವಿನೀತ್ ಟಿ., ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್, ಹುಯಿಲ್‌ದೊರೆ, ಶಿರಾ ತಾಲೂಕು
**
ನಾನೂ ಗಣಿತ ಟೀಚರ್ ಆಗುವೆ!
ಗಣಿತ ಬೋಧಿಸುವ ಸಿದ್ದಮಲ್ಲಪ್ಪ ಸರ್ ನಂಗೆ ಇಷ್ಟ. ನಮಗೆ ಕಠಿಣ ಎನಿಸುವ ಗಣಿತ ವಿಷಯವನ್ನು ಅತ್ಯಂತ ಸುಲಭ ವಿಧಾನದಲ್ಲಿ ಅರ್ಥೈಸುವ ರೀತಿ ತುಂಬಾ ಇಷ್ಟ. ತರಗತಿಯಲ್ಲಿ ನಮಗೆ ಶಿಸ್ತಿನ ಪಾಠ ಹೇಳಿಕೊಡುತ್ತಾರೆ. ಜೊತೆಗೆ ಸ್ವಂತ ಮಕ್ಕಳಂತೆ ಪ್ರೀತಿ, ಕಾಳಜಿ ತೋರುತ್ತಾರೆ. ಇಂತಹ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೂ ಸಿಕ್ಕರೆ ಪ್ರತಿಯೊಬ್ಬರು ಭವಿಷ್ಯವು ಉಜ್ವಲ. ಇವರ ಮಾದರಿ ವ್ಯಕ್ತಿತ್ವವನ್ನು ಕಂಡ ನನಗೆ ಇವರ ಹಾಗೆಯೇ ಗಣಿತ ವಿಷಯ ಬೋಧಿಸುವ ಶಿಕ್ಷಕಿಯಾಗಬೇಕೆನ್ನುವ ಗುರಿ ಹೊಂದಿದ್ದೇನೆ. ಅವರು ಗಣಿತ ಬೋಧಿಸುವ ಪರಿ ಅನನ್ಯ. ತುಂಬಾ ಸರಳವಾಗಿ ಅರ್ಥವಾಗುವಂತೆ ಹೇಳಿಕೊಡುತ್ತಾರೆ. ಹಾಗಾಗಿ, ನನಗೂ ಗಣಿತ ಶಿಕ್ಷಕಿಯಾಗುವ ಬಯಕೆ.
– ಪೂರ್ಣಿಮಾ, 10ನೇ ತಗರತಿ, ದೊಡ್ಡಹುಂಡಿ ಬೋಗಪ್ಪ ಪಪೂ ಕಾಲೇಜು, ಪ್ರೌ.ಶಾ., ಗುಂಡ್ಲುಪೇಟೆ. **
ನನ್ನ ಟೀಚರ್ ಎಲ್ಲರಿಗೂ ಇಷ್ಟ
ವಿಜ್ಞಾನ ಶಿಕ್ಷಕಿ ಆಶಾ ಮೇಡಂ ನಂಗಿಷ್ಟ. ವಿಜ್ಞಾನ ವಿಷಯ ಕಠಿಣ ಎಂದು ನಮಗೆ ಅನಿಸಿಲ್ಲ, ಗ್ರಾಮೀಣ ಭಾಗದಿಂದ ಬರುವ ನನಗೆ ವಿಜ್ಞಾನ ಆರಂಭದಲ್ಲಿ ಅರ್ಥ ಆಗುತ್ತಿರಲಿಲ್ಲ. ಆದರೆ ಆಶಾ ಮೇಡಂ ಎಲ್ಲರಿಗೂ ಅರ್ಥವಾಗುವ ಹಾಗೆ ಪಾಠವನ್ನು ಮಾಡುತ್ತಾರೆ. ಅರ್ಥವಾಗದಿದ್ದರೆ ಒಂದೇ ವಿಷಯವನ್ನು 10 ಬಾರಿ ಕೇಳಿದರೂ ಕೋಪಿಸಿಕೊಳ್ಳುವುದಿಲ್ಲ, ಪಠ್ಯ ಹೊರತುಪಡಿಸಿ ಇತರೆ ಚಟುವಟಿಕೆಗಳಾದ ಗಾಯನ, ನೃತ್ಯ ಇತರೆ ಚಟುವಟಿಕೆಗಳನ್ನು ತಾವೇ ತಮ್ಮ ಸ್ವಯಿಚ್ಛೆಯಿಂದ ಶಾಲಾ ಸಮಯ ಮುಗಿದ ಮೇಲೂ ಇದನ್ನು ನಮಗೆ ಕಲಿಸುತ್ತಾರೆ. ಇಂತಹ ಶಿಕ್ಷಕಿಯನ್ನು ಪಡೆದ ನಾವೇ ಧನ್ಯರು. ಆಶಾ ಮೇಡಂ ಎಂದರೆ ನನಗೊಬ್ಬಳೆ ಅಲ್ಲ ಶಾಲೆಯಲ್ಲಿ ಕಲಿಯುತ್ತಿರುವ ಹತ್ತಾರು ವಿದ್ಯಾರ್ಥಿಗಳಿಗೆ ಇವರು ಸ್ಫೂರ್ತಿ.
– ಎಸ್. ತ್ರಿವೇಣಿ, ಎಸ್ಸೆಸ್ಸೆಲ್ಸಿ, ಸರ್ಕಾರಿ ಪಬ್ಲಿಕ್ ಶಾಲೆ, ಯಳಂದೂರು. ಚಾ.ನಗರ ಜಿಲ್ಲೆ