ನವದೆಹಲಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಶಿಕ್ಷಕರಿಗೆ ಶುಭ ಹಾರೈಸಿದ್ದಾರೆ. ಮಾಜಿ ರಾಷ್ಟ್ರಪತಿ ದಿ. ಎಸ್.ರಾಧಾಕೃಷ್ಣನ್ ಅವ ರನ್ನು ಸ್ಮರಿಸಿದ್ದಾರೆ.
ದೇಶದ ಯುವ ಸಮಾಜವನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು. ಕೋವಿಡ್ ಸಂಕಷ್ಟದ ಸಮಯದಲ್ಲೂ ಹೊಸತನ ಕಾಪಾಡಿಕೊಳ್ಳುವಲ್ಲಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಿದ ಶಿಕ್ಷಕರ ಕೆಲಸ ಶ್ಲಾಘನೀಯ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಪ್ರಧಾನಿಯವರು ಸೆ.7ರಂದು ನಡೆಯಲಿರುವ ಶಿಕ್ಷಕ ಪರ್ವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದು, ದೇಶದ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದೇ ವೇಳೆ ಸೈನ್ ಲಾಂಗ್ ವೇಜ್ ಡಿಕ್ಷನರಿ, ಟಾಕಿಂಗ್ ಬುಕ್ಸ್ ಸೇರಿ ವಿವಿಧ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಿಯವರ ಕಚೇರಿ ತಿಳಿಸಿದೆ.
ಇದನ್ನೂ ಓದಿ:ಪರಿಷತ್ ಟಿಕೆಟ್‌ಗೆ ಅರ್ಜಿಗೆ ಕಾಂಗ್ರೆಸ್‌ನಿಂದ 1 ಲಕ್ಷ ರೂ. ನಿಗದಿ ?