Advertisement

ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

04:19 PM Sep 19, 2018 | |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಪ್ರಾಯೋಜಿತ ಗುರುನಾರಾಯಣ ರಾತ್ರಿಶಾಲೆಯಲ್ಲಿ ಶಿಕ್ಷಕರ ದಿನಾಚರ ಣೆಯು ಸೆ. 5 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ಕುಮಾರ್‌, ಕಾರ್ಯಾಧ್ಯಕ್ಷ ಬಿ. ರವೀಂದ್ರ ಅಮೀನ್‌, ಸದಸ್ಯರಾದ ಆನಂದ ಪೂಜಾರಿ ಮತ್ತು ವಿಶ್ವನಾಥ ಜಗದೀಶ್‌ ಅಮೀನ್‌ ಉಪಸ್ಥಿತರಿದ್ದರು.

ಗುರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಗಣ್ಯರನ್ನು ಶಿಕ್ಷಕರು ಗೌರವಿಸಿದರು. ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಮತ್ತು ಪದಾಧಿಕಾರಿಗಳು ಶಾಲೆಯ ಶಿಕ್ಷಕವೃಂದದವರನ್ನು ಗೌರವಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.

ಶಿಕ್ಷಣ ಸಮಿತಿಯ ಸದಸ್ಯ ಆನಂದ ಪೂಜಾರಿ ಅವರು ಮಾತನಾಡಿ, ಶಿಕ್ಷಣ ಇಂದು ಒಂದು ನಿರಂತರ ಪ್ರಕ್ರಿಯೆ. ಆದ್ದರಿಂದ ಉತ್ತಮ ಸಾಧನೆ ಮಾಡಲು ಆದರ್ಶ ವ್ಯಕ್ತಿಗಳ ಜೀವನವನ್ನು ಅನುಸರಿಸಬೇಕು. ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಇವರು ಶಿಕ್ಷಣ ತಜ್ಞರಾಗಿ, ಶಿಕ್ಷಣಪ್ರೇಮಿಯಾಗಿ, ಆದರ್ಶ ಶಿಕ್ಷಕರಾಗಿ ಹೆಸರು ಮಾಡಿದ್ದಾರೆ. ಶಿಕ್ಷಣದಿಂದ ವಿದ್ಯಾರ್ಥಿಗಳ ದೃಷ್ಟಿಕೋನವನ್ನು ವಿಸ್ತರಿಸುವ ಮಹಾನ್‌ ಕಾರ್ಯ ಶಿಕ್ಷಕ ರಿಂದ ಆಗುತ್ತದೆ. ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಣ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಕುಮಾರ್‌ ಅವರು ಮಾತನಾಡಿ, ಗುರು ವನ್ನು ಬ್ರಹ್ಮ, ವಿಷ್ಣು, ಮಹೇಶ್ವರಿಗೆ ಹೋಲಿಸುತ್ತಾರೆ. ಇದರಿಂದ ಗುರುವಿನ ಶ್ರೇಷ್ಠತ್ವ ತಿಳಿಯುತ್ತದೆ. ದೇವರಿಂದ ದೊರೆಯುವುದು ಜನ್ಮ. ಅದನ್ನು ರೂಪಿಸುವುದು ಗುರು ಮಾತ್ರ. ಗುರುಗಳು ಶಿಲ್ಪಿಯಂತೆ ಬಂಡೆಕಲ್ಲನ್ನು  ಕಡಿದು ದಿವ್ಯ ಮಂಗಳ ದೇವತಾ ವಿಗ್ರಹವಾಗಿ ಪರಿವರ್ತಿಸುತ್ತಾನೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ತರವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಗುರುಗಳನ್ನು ನಿತ್ಯ ಜೀವನದಲ್ಲಿ ನೆನೆಯುತ್ತಲೇ ಇರಬೇಕು. ಅವರು  ಕಲಿಸಿದ ಮೌಲ್ಯಗಳನ್ನು ಅನುಸರಿಸಿ ಸಾಧನೆಗೈಯಬೇಕು ಎಂದರು.

Advertisement

ಕಾರ್ಯಾಧ್ಯಕ್ಷ ಬಿ. ರವೀಂದ್ರ ಅಮೀನ್‌ ಅವರು ಮಾತನಾಡಿ, ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ. ಶಿಕ್ಷಣವೇ ನಿಮ್ಮ ಬದುಕಿನ ಮೂಲ ಮಂತ್ರವಾಗಲಿ. ಮಕ್ಕಳಲ್ಲಿ ಕಲಿಕಾ ನ್ಯೂನತೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಸಲಹೆ ನೀಡುವುದು ಗುರುಗಳ ಧರ್ಮ. ಕಲಿಕೆಯಲ್ಲಿ ವಿದ್ಯಾರ್ಥಿಗಳು ಅಭಿರುಚಿ ಹೊಂದುವಂತೆ ಮಾಡು ವುದು ನಿಜವಾದ ಗುರುವಿನ ಕಾರ್ಯ ವಾಗಿದೆ. ಅಂತಹ ಶಿಕ್ಷಕ ವೃಂದ ನಮ್ಮ ಶಾಲೆಯಲ್ಲಿದ್ದಾರೆ. ಅವರ ಪ್ರಯೋ ಜನವನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾತೃ ಸಂಸ್ಥೆಯ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಅವರು ಮಾತನಾಡಿ, ನಿಮಗೆ ಕಲಿಸಿದ ಗುರುವನ್ನು ಮತ್ತು ನೀವು ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು. ಇದುವೇ ಗುರುವಿಗಾಗಿ ಮತ್ತು ಶಾಲೆಗಾಗಿ ನೀವು ಮಾಡುವ ನೈಜ ಆರಾಧನೆಯಾ ಗಿದೆ. ಜೀವನದಲ್ಲಿ ಸಾಧನೆಗೆ ಅಸಾಧ್ಯ
ವಾದುದು ಯಾವುದೂ ಇಲ್ಲ. ಆದರೆ ಸಾಧಿಸುವಾಗ ಗುರು ಹಿರಿಯರ ಆಶೀರ್ವಾದ, ಹಿರಿಯರ ಮಾರ್ಗ ದರ್ಶನವನ್ನು ಅನುಸರಿಸ ಬೇಕು. ಆಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದು ನುಡಿದರು.

ಕೊನೆಯಲ್ಲಿ ಗುರುವೃಂದದವರಿಗೆ ಮತ್ತು ಮಾತೃಸಂಸ್ಥೆಯ ಪದಾಧಿಕಾರಿ ಗಳಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಪೂಜಾ, ದಿವ್ಯಾ, ಐಶ್ವರ್ಯಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next