Advertisement

ಶಿಕ್ಷಕರು ಸರ್ವಾಂಗೀಣ ವಿಕಾಸದ ದಾರಿ

12:42 PM Jul 31, 2022 | Team Udayavani |

ಕಲಬುರಗಿ: ಶಿಕ್ಷಕರು ಕೇವಲ ಮಕ್ಕಳಿಗೆ ಅಕ್ಷರ ಕಲಿಸುವುದಷ್ಟೇ ಅಲ್ಲ, ತಮ್ಮ ನಡೆ, ನುಡಿಗಳಿಂದ ಪರಿಸರ ಮತ್ತು ಸರ್ವಾಂಗೀಣ ವಿಕಾಸದ ದಾರಿ. ಆದರೆ, ಇವತ್ತು ಅವರೆಲ್ಲ ತುಂಬಾ ಒತ್ತಡದಿಂದ ಕೆಲಸ ಮಾಡುತ್ತಿರುವುದು ಖೇದಕರ ಎಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಕಳವಳ ವ್ಯಕ್ತಪಡಿಸಿದರು.

Advertisement

ಶಹಾಬಾದ ನಗರದ ಶಾಸಕರ ಸರಕಾರಿ ಕನ್ಯಾ ಮಾದರಿ ಶಾಲೆಯ ಮುಖ್ಯಶಿಕ್ಷಕ ಶಿವಪುತ್ರಪ್ಪ ಕೋಣಿನ್‌ ಸೇವಾ ನಿವೃತ್ತಿ ಸಮಾರಂಭದಲ್ಲಿ ಶ್ರೀಮತಿ ಚಂದ್ರಕಲಾ ಕೋಣಿನ್‌ ಹಾಗೂ ಶಿವಪುತ್ರಪ್ಪ ಕೋಣಿನ್‌ ಅವರನ್ನು ಸನ್ಮಾನಿಸಿ ಮತ್ತು ಅನಾಥ ಮಕ್ಕಳಿಗೆ ಶಾಲಾ ಬ್ಯಾಗ್‌ ವಿತರಿಸಿ ಅವರು ಮಾತನಾಡಿದರು.

ಶಿವಪುತ್ರಪ್ಪ ಕೇವಲ ಶಿಕ್ಷಕರಾಗಿ ನನಗೆ ಕಂಡಿಲ್ಲ, ಅವರೊಬ್ಬ ಸಂಘಟಕ ಮತ್ತು ಶ್ರಮಜೀವಿಯಾಗಿ ಕಂಡಿದ್ದಾರೆ. ಅನಾಥ ಮಕ್ಕಳ ಶಿಕ್ಷಣದ ಕುರಿತು ಅವರಿಗಿರುವ ಕಾಳಜಿ ಮತ್ತು ಮರುಗುವಿಕೆ ಇತರರಲ್ಲಿ ಇಲ್ಲ ಎಂದ ಅವರು, ಶಹಾಬಾದ ಕನ್ಯಾ ಪ್ರಾಥಮಿಕ ಶಾಲೆಗೆ ಬಂದ ಬಳಿಕ ಸಾಕಷ್ಟು ಪ್ರಗತಿ ಆಗಿದೆ ಎಂದರು.

ಅತಿಥಿಯಾಗಿದ್ದ ನಿವೃತ್ತ ಅಧ್ಯಾಪಕಿ ಡಾ| ಮೀನಾಕ್ಷಿ ಬಾಳಿ ಮಾತನಾಡಿ, ಶಿವಪುತ್ರಪ್ಪ ನನಗೆಂದು ಒಬ್ಬ ಶಿಕ್ಷಕರಾಗಿ ಕಂಡೇ ಇಲ್ಲ. ಅವರೊಬ್ಬ ತಳಸ್ಪರ್ಶಿ ಸಂಘಟಕ ಮತ್ತು ಶೈಕ್ಷಣಿಕ ಕೆಲಸಗಾರ. ಸದಾ ಮಕ್ಕಳ ಕುರಿತೇ ಚಿಂತಿಸುವ ಅದರಲ್ಲೂ ಪ್ರಮುಖವಾಗಿ ಅನಾಥ ಮಕ್ಕಳ ಕುರಿತು ಹೆಚ್ಚು ಮಮಕಾರ ಇರುವ ವ್ಯಕ್ತಿ. ಅವರು ನಿವೃತ್ತಿಯ ಬಳಿಕ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳಲು ಅನುಕೂಲವೂ ಆಗಿದೆ ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಬಾಣಿ ಮಾತನಾಡಿ, ಶಿವಪುತ್ರಪ್ಪ ಕೋಣಿನ್‌ ಅವರು ಜೇವರ್ಗಿ ತಾಲೂಕಿನವರು ಎನ್ನುವುದು ನಮಗೂ ಹೆಮ್ಮೆ ಎಂದರು. ಮುಖಂಡರಾದ ಚನ್ನಬಸವ ಶರಣರು, ಸಿದ್ಧವೀರಯ್ಯ ರುದೂ°ರ, ಮಾಣಿಕಪ್ಪ, ನಗರಸಭೆ ಸದಸ್ಯೆ ಸಾಬೇರಾ ಬೇಗಂ ಇದ್ದರು.

Advertisement

ಅನಾಥ ಮಕ್ಕಳಿಗೆ ಶಾಲಾ ಬ್ಯಾಗ್‌ ವಿತರಣೆ ಮಾಡಲಾಯಿತು. ರವಿ ಬೆಳಮಗಿ ಸ್ವಾಗತಿಸಿದರು, ಅಂಬುಜಾ ದೇಶಮುಖ್‌ ನಿರೂಪಿಸಿದರು, ಸಂತೋಷ ಸಲಗರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next