Advertisement

ಮಗುವಿನ ಭವಿಷ್ಯ ನಿರ್ಧರಿಸಲು ಶಿಕ್ಷಕರು ಎಂಥಹ ಪರಿಸ್ಥಿತಿಯಲ್ಲೂ ಸಿದ್ಧರಾಗಿರುತ್ತಾರೆ

11:00 AM Sep 05, 2020 | keerthan |

ವೇದಗಳ ಕಾಲದಿಂದ ಇಂದಿನವರೆಗೂ ಶಿಕ್ಷಣಕ್ಕಾಗಿ ಗುರುಗಳನ್ನು ಹುಡುಕಿ‌ ಗುರುಕುಲಗಳಲ್ಲಿ ಅಥವಾ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದು ಪದ್ಧತಿಯಾಗಿತ್ತು.  ಆದರೆ ಪರಿವರ್ತನೆ ಎಂಬುದು ಜಗದ ನಿಯಮ ಎಂಬಂತೆ ಕೋವಿಡ್ 19 ಎಂಬ ವ್ಯಾಧಿಯೊಂದು ಇಡೀ ಜಗತ್ತೇ ಮೌನವಾಗುವಂತೆ ಆವರಿಸಿತು. ಮನುಕುಲದ ಚಟುವಟಿಕೆಗಳೇ ಅಸ್ತವ್ಯಸ್ಥವಾದವು. ಅವುಗಳಲ್ಲಿ ಪ್ರಮುಖವಾದ ಶಿಕ್ಷಣ ವ್ಯವಸ್ಥೆ ತನ್ನ ಕಾರ್ಯಕ್ಷೇತ್ರವನ್ನು ಬದಲಾಯಿಸಿಕೊಂಡಿತು.

Advertisement

ಸದಾ ಚಟುವಟಿಕೆಯಿಂದಿದ್ದು ನಾವಿನ್ಯ ಅಲೋಚನೆಗಳುಳ್ಳ ಮಗುವನ್ನು ಹಿಡಿತದಲ್ಲಿಡುವುದು ಪೋಷಕರಿಗೂ‌ ಸಮಸ್ಯೆಯಾಯಿತು. ಇದರಿಂದಲೇ ಹುಟ್ಟಿಕೊಂಡಿತು ಆನ್ ಲೈನ್ ಶಿಕ್ಷಣ ಮತ್ತು ವಿದ್ಯಾಗಮವೆಂಬ ನೂತನ ಪ್ರಯೋಗಗಳು. ಶಾಲೆಗಳಲ್ಲಿ ಗುರುಗಳೊಂದಿಗೆ ಆಡಿ, ಹಾಡಿ ಕುಣಿಯುತ್ತಾ, ನಲಿಯುತ್ತಾ ಕಲಿಯುವ ಪಾಠ ಇಂದು ಎರಡು ಅಡಿ ಅಂತರದಲ್ಲಿ‌ ಮುಖ ಮುಚ್ಚಿಕೊಂಡು ತಲೆಯಾಡಿಸುತ್ತಾ ಕಲಿಯುವಂತಾಯಿತು. ಇನ್ನು ಶಿಕ್ಷಕರು ಹಿಡಿದ ವೃತ್ತಿಗೆ‌‌ ನ್ಯಾಯ ಒದಗಿಸಲು ಚಡಪಡಿಸುವಂತಾಯಿತು.

ಪ್ರತಿ‌ ಮಗುವಿನೆಡೆಗೆ ಹೋಗಿ ಚಟುವಟಿಕೆಗಳನ್ನು ನೀಡಿ, ಮಾರ್ಗದರ್ಶನ ಮಾಡಿ ಕಲಿಕೆಯನ್ನು ದೃಢಪಡಿಸಿಕೊಳ್ಳುವುದು ಕಷ್ಟಸಾಧ್ಯ ಸಂಗತಿಯಾಯಿತು. ಆದರೆ ಉಳಿದೆಲ್ಲ ವೃತ್ತಿಗಳಂತೆ ಶಿಕ್ಷಕ ವೃತ್ತಿ ಅಲ್ಲಾ. ಶಿಕ್ಷಕರ ನಿಷ್ಠೆ, ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯಿಂದಲೇ ಮಗುವಿನ‌ ಮುಂದಿನ‌ ಭವಿಷ್ಯ ನಿರ್ಧಾರವಾಗುವುದು. ಅದಕ್ಕೆ ನ್ಯಾಯ ಒದಗಿಸಲು ಶಿಕ್ಷಕರು ಎಂಥಹ ಪರಿಸ್ಥಿತಿಯಲ್ಲೂ ಸಿದ್ಧರಾಗಿರುತ್ತಾರೆಂಬುದು ಈಗ ನಿದರ್ಶನವಾಯಿತು.

ಇಂದು ಶಾಲೆಯಲ್ಲಿ ಸಮವಸ್ತ್ರ ಧರಿಸಿದ ಮುದ್ಧಾದ ಮಕ್ಕಳ ಕಲರವ ಇಲ್ಲ. ಮೈದಾನವು‌ ಖಾಲಿ‌ ಖಾಲಿಯಾಗಿದೆ. ಪ್ರಾರ್ಥನೆಯ ಇಂಪು ಕೇಳಿಸದೇ ಮನವೇಕೋ ಮಂಕಾಗಿದೆ. ತರಗತಿ ಕೋಣೆಗಳು ಮಕ್ಕಳಿಲ್ಲದೆ ಭಣಗೂಡುತ್ತಿದೆ. ಕರಿಹಲಗೆ ಬಿಳುಪಾಗದೇ ಎಷ್ಟೋ ದಿನಗಳೇ ಕಳೆದುಹೋಗಿದೆ. ಶಾಲಾ ಕೈತೋಟವು ನಗುವನ್ನೇ ಮರೆತಂತೆ ಭಾಸವಾಗುತ್ತಿದೆ. ಮಹಾಮಾರಿ‌ ಹಾವಳಿ ಮುಗಿದು ಜಗತ್ತು ಮೊದಲಂತಾಗಿ ಕಲಿಕೆ‌ ಮುಂದೆ ಸಾಗಲಿ.

ವಿಶಾಲಾಕ್ಷಿ

Advertisement

ಸ.ಹಿ..ಪ್ರಾ.ಶಾಲೆ ಸೂರ್ಗೋಳಿ

Advertisement

Udayavani is now on Telegram. Click here to join our channel and stay updated with the latest news.

Next