Advertisement

Kolkata; ಹಿಜಾಬ್‌ ಧರಿಸಲು ನಿರ್ಬಂಧ: ರಾಜೀನಾಮೆ ನೀಡಿದ ಶಿಕ್ಷಕಿ

08:48 PM Jun 11, 2024 | Team Udayavani |

ಕೋಲ್ಕತಾ: ಕಾಲೇಜಿಗೆ ಹಿಜಾಬ್‌ ಧರಿಸಿಕೊಂಡು ಬರಬೇಡಿ ಎಂದು ಹೇಳಿದ್ದಕ್ಕೆ ಮುಸ್ಲಿಂ ಶಿಕ್ಷಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ ಘಟನೆ ನಡೆದಿದೆ.

Advertisement

ಕೋಲ್ಕತ್ತಾದ ಎಲ್‌ಜೆಡಿ ಲಾ ಕಾಲೇಜಿನಲ್ಲಿ 3 ವರ್ಷಗಳಿಂದ ಸಂಜಿದಾ ಕಾದರ್‌ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಲೇಜು ಆಡಳಿತ ಮಂಡಳಿ ಸಂಜಿದಾ ಅವರಿಗೆ ಕಾಲೇಜಿನಲ್ಲಿ ಹಿಜಾಬ್‌ ಧರಿಸಲು ನಿರ್ಬಂಧಿಸಿದ್ದು, ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಷಯ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತ ಆಡಳಿತ ಮಂಡಳಿ, ಗೊಂದಲದಿಂದ ಅವರಿಗೆ ತಪ್ಪು ಸಂದೇಶ ತಲುಪಿದೆ. ಅವರು ಹಿಜಾಬ್‌ ಧರಿಸಬಹುದು. ಅವರನ್ನು ಸಂಪರ್ಕಿಸಿ ಮತ್ತೆ ಕೆಲಸಕ್ಕೆ ಹಾಜರಾಗಲು ಕೋರಿದ್ದೇವೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next