Advertisement

ಆಕಾಶ ಅವಕಾಶ: ಶಿಕ್ಷಕರ ಅರ್ಹತಾ ಪರೀಕ್ಷೆ

11:04 PM Jul 01, 2021 | Team Udayavani |

ಯಾರು ಅರ್ಜಿ ಸಲ್ಲಿಸಬಹುದು?:

Advertisement

ಒಂದರಿಂದ ಐದನೇ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿ.ಇಡಿ., ಉತ್ತೀರ್ಣರಾಗಿರಬೇಕು ಹಾಗೂ 6ರಿಂದ 8ನೇ ತರಗತಿ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಡಿ.ಇಡಿ., ಅಥವಾ ಪದವಿಯೊಂದಿಗೆ ಬಿಇಡಿ ಅಥವಾ ಬಿ.ಎ.ಇಡಿ/ ಬಿ.ಎಸ್‌.ಸಿ.ಇಡಿಯಲ್ಲಿ ಉತ್ತೀರ್ಣರಾಗಿರಬೇಕು. ಕೊನೆ ವರ್ಷಗಳ ಡಿಇಡಿ, ಬಿಇಡಿ, ಬಿಎಇಡಿ/ ಬಿಎಸ್ಸಿಇಡಿ ಪರೀಕ್ಷೆಗೆ ಹಾಜರಾಗಿ ಫ‌ಲಿತಾಂಶ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ  ಕೊನೇ ದಿನ : ಜುಲೈ 20. ಆನ್‌ಲೈನ್‌ ಮೂಲಕವೇ ನಿಗದಿಪಡಿಸಿದ ಶುಲ್ಕ ಪಾವ‌ತಿಸಬೇಕು.

ಪರೀಕ್ಷೆ ಹೇಗೆ?:

ಆ. 22ರಂದು ಬೆಳಗ್ಗೆ 9.30ರಿಂದ 12 ಗಂಟೆ ಮತ್ತು ಮಧ್ಯಾಹ್ನ 2 ರಿಂದ 4.30ರವರೆಗೆ ಪರೀಕ್ಷೆಗಳು.

Advertisement

ಪತ್ರಿಕೆ 150ಅಂಕ ಹೊಂದಿರುತ್ತದೆ.

ಆ. 12ರಿಂದ ಆನ್‌ಲೈನ್‌ನಲ್ಲಿ ಪ್ರವೇಶ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಜೀವಿತಾವಧಿ ಮಾನ್ಯತೆ :ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ

ತಾಂತ್ರಿಕ ಸಮಸ್ಯೆ ಎದುರಾದಲ್ಲಿ:  080 22483140, 080 22228805, 080 22483145 ಸಂಪರ್ಕಿಸಿ

ಅರ್ಹ ಅಭ್ಯರ್ಥಿಗಳು ಇಲಾಖೆ ವೆಬ್ ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. //www.schooleducation.kar.nic.in/ ಅರ್ಜಿಯಲ್ಲಿ ಮಾಹಿತಿಗಳು ಸಮರ್ಪಕವಾಗಿರಲಿ. ಇತ್ತೀಚೆಗಿನ ಭಾವಚಿತ್ರ ಮತ್ತು ಸಹಿ ಅಪ್‌ಲೋಡ್‌ ಮಾಡಬೇಕು. ಅಂಗವಿಕಲ ಕೋಟಾ ದಡಿ ವಿನಾಯಿತಿ ಬಯಸಿದ್ದಲ್ಲಿ ಪಿಎಚ್‌ ಪ್ರಮಾಣ ಪತ್ರವನ್ನು ಅಪ್‌ಲೋಡ್‌ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next