ಆಳಂದ: ಶಿಕ್ಷಕ ರಾಷ್ಟ್ರನಿರ್ಮಾಣ ಶಿಲ್ಪಿಯಾಗಿದ್ದು, ಘನತೆ ಗೌರವಾಧಾರ ಮತ್ತು ನೈಪುಣ್ಯತೆ ಅಳವಡಿಸಿಕೊಂಡು ಮಕ್ಕಳನ್ನು ಉನ್ನತ ಗುರಿ ತಲುಪುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಸ್ಥಳೀಯ ದ. ಬ್ರೀಜ್ ಆಂಗ್ಲ ಶಾಲೆಯ ಸಂಸ್ಥೆಯ ಅಧ್ಯಕ್ಷ, ಶೈಕ್ಷಣಿಕ ಸಂಶೋಧಕ ರಫೀಕ್ ಇನಾಮದಾರ ಹೇಳಿದರು.
ಪಟ್ಟಣದ ದ| ಬ್ರೀಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ| ಸರ್ವಪಲಿ ರಾಧಾಕೃಷ್ಣನನವರ ಜನ್ಮದಿನಾಚಣೆ ನಿಮಿತ್ತ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಧಾಕೃಷ್ಣನವರು ತಮ್ಮ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವ ಮೂಲಕ ಶಿಕ್ಷಕರಿಗೆ ಗುರುವಿನ ಸ್ಥಾನಮಾನ ಕಲ್ಪಿಸಿಕೊಡಲಾಗಿದೆ ಎಂದರು. ಮುಖ್ಯ ಶಿಕ್ಷಕ ಜಗದೀಶ ನಿರಗುಡಿ, ಶಿಕ್ಷಕಿ ಶಾಹಿಸ್ತಾ ಬಸವಾಜ ಗುಬ್ಬನ್, ರಬ್ಟಾನಾ ಬೆಗಂ, ಆಸ್ಮಾ, ತಬಸುಮ್, ಆಶಾ, ಮಹೇಂದ್ರ ಕ್ಷೀರಸಾಗರ, ಅಲಪಿಯಾ ಸೇರಿ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಬಾಲಕ ಪ್ರೌಢಶಾಲೆ: ಪಟ್ಟಣದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅಂಗವಾಗಿ ಶಾಲೆಯ ಮುಖ್ಯಗುರು ಕಚ್ಛೇಂದ್ರ ಪಾಂಚಾಳ ಅವರು, ಡಾ| ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜಿಸಿ, ನಮಿಸಿದರು. ಕನ್ನಡ ಶಿಕ್ಷಕ ಮಲ್ಲೇಶಪ್ಪ ಭಂಡಾರಿ ಮಾತನಾಡಿದರು. ಶಿಕ್ಷಕರಾದ ಶಾಂತಪ್ಪ ವಚ್ಚೆ,ರಾಮಚಂದ್ರ ಸೋನಾರ್, ದತ್ತಾ ಬಡಿಗೇರ, ಜಗದೇವಪ್ಪಾ ಕಾರಭಾರಿ, ಇಂಬ್ರಾನ ನಾಯಿಕವಾಡಿ, ವಾಜೀದ್ ಹುಸೇನ್, ವಿಜಯಲಕ್ಷ್ಮೀ ಬಿರಾದಾರ, ಅಮೀನಾ ಫಿರ್ದೋಸ್, ಸಿಬ್ಬಂದಿ ರಫೀಯೋದಿನ್ ಅನ್ಸಾರಿ ಸೇರಿದಂತೆ ಶಿಕ್ಷಕರು ಶಾಲೆಯ ಮಕ್ಕಳು ಮತ್ತಿತರರು ಇದ್ದರು.
ಸಿದ್ಧಲಿಂಗ ಶ್ರೀ ಶಾಲೆ: ಪಟ್ಟಣದ ಸಿದ್ಧಲಿಂಗ ಶಿವಾಚಾರ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ, ಅಣ್ಣರಾವ್ ಪಾಟೀಲ ಸೇರಿದಂತೆ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಎಸ್‌ಆರ್‌ಜಿ ಫೌಂಡೇಶನ್: ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ವಿವಿಧ ಶಾಲಾ ಕಾಲೇಜು ಆಶ್ರಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಇದೇ ವೇಳೆ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಹಣಮಂತ ಶೇರಿ ಅವರು ಶಿಕ್ಷಕರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.