ಸರ್ಕಾರದ ಅಧೀನದಲ್ಲಿ ನಡೆಯುವ ಶಿಕ್ಷಕರಿಗೂ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಒತ್ತಾಯಿಸಿದೆ.
Advertisement
ಈ ಕುರಿತು ಗುರುವಾರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರಗೆ ಸಲ್ಲಿಸಿದ ಶಿಕ್ಷಕ ಸಂಘದ ಪದಾಧಿಕಾರಿಗಳು, ದೇಶದ ಬಹುತೇಕ ರಾಜ್ಯಗಳು ಕೇಂದ್ರ ಸರ್ಕಾರ ನಡೆಸುವ ಕೇಂದ್ರೀಯ ವಿದ್ಯಾಲಯದ, ನವೋದಯ ವಿದ್ಯಾಲಯಗಳ ಶಿಕ್ಷಕರಿಗೆ ನೀಡುವ ವೇತನವನ್ನು ತಮ್ಮ ರಾಜ್ಯ ಸರ್ಕಾರದ ಅಧೀನದ ಶಾಲೆಗಳ ಶಿಕ್ಷಕರಿಗೂ ನೀಡುತ್ತಿದ್ದು, ಕರ್ನಾಟಕದಲ್ಲಿ ಇದನ್ನು ಜಾರಿಗೆ ತರಬೇಕೆಂದು ಅನೇಕ ಸಲ ತಮ್ಮ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲಾದರೂ ಒಂದೇ ರಾಷ್ಟ್ರ, ಒಂದೇ ಶಿಕ್ಷಣ, ಒಂದೇ ವೇತನ ಎನ್ನುವಂತೆ ರಾಜ್ಯ ಸರ್ಕಾರದ ಅಧಿಧೀನದ ಶಿಕ್ಷಕರಿಗೂ ವೇತನ ನಿಗದಿಪಡಿಸಬೇಕು.
ನೀಡಿರುವುದಾಗಿ ತಿಳಿಸಿದ್ದೀರಿ. ಆದರೆ ಕೇಂದ್ರ ಮತ್ತು ರಾಜ್ಯದ ಶಿಕ್ಷಕರ ವೇತನದಲ್ಲಿ ಶೇ.67 ವ್ಯತ್ಯಾಸವಿದೆ.
ಆದ್ದರಿಂದ ಶಿಕ್ಷಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನಡೆಸುವ ಶಾಲೆಗಳ ಶಿಕ್ಷಕರಿಗೆ ನೀಡುವ ವೇತನವನ್ನು ರಾಜ್ಯ ಸರ್ಕಾರ ನಡೆಸುವ ಶಾಲೆಗಳ ಶಿಕ್ಷಕರಿಗೂ ನೀಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗಣಪತಿ ಬೋಚರೆ, ಅಶೋಕ ಸಾವಳೆ, ವೀರಶೆಟ್ಟಿ ಉಮಾ ಸೇರಿದಂತೆ ಮುಂತಾದವರು ಇದ್ದರು.