Advertisement

ಗುರುಭವನವೀಗ ಹಾಳು ಕೊಂಪೆ!

11:06 AM Jun 19, 2018 | Team Udayavani |

„ಹರಿಯಬ್ಬೆ ಹೆಂಜಾರಪ್ಪ
ಚಿತ್ರದರ್ಗ: ಶಿಕ್ಷಣ ಮತ್ತು ಶಿಕ್ಷಕರ ಕಲ್ಯಾಣ ಕಾರ್ಯಗಳಿಗೆ ಮೀಸಲಾಗಿರುವ ನಗರದ ಗುರುಭವನವನ್ನು ಚುನಾವಣಾ
ಕಾರ್ಯಗಳಿಗೆ ಬಳಸಿಕೊಂಡಿದ್ದರಿಂದ ಕಟ್ಟಡದ ವಿನ್ಯಾಸವೇ ಬದಲಾಗಿದೆ. ಅದೀಗ ಹಾಳು ಕೊಂಪೆಯಂತೆ ಭಾಸವಾಗುತ್ತಿದೆ.

Advertisement

ಮತ ಎಣಿಕೆ, ವಿವಿ ಪ್ಯಾಟ್‌, ಮತಯಂತ್ರ ಶೇಖರಣೆಗೆ ಸರ್ಕಾರಿ ಶಾಲಾ-ಕಾಲೇಜುಗಳ ಕೊಠಡಿ, ಸರ್ಕಾರಿ ಅ ಧೀನ ಕಟ್ಟಡ ಬಳಕೆ ಮಾಡಿಕೊಳ್ಳುವುದು ವಾಡಿಕೆ. ಆದರೆ ಬಳಕೆ ಮಾಡಿಕೊಂಡ ಮೇಲೆ ಅಂತಹ ಕಟ್ಟಡವನ್ನು ಮೂಲ ಸ್ವರೂಪಕ್ಕೆ ಬದಲಿಸಬೇಕು, ಸುಣ್ಣ ಬಣ್ಣ ಬಳಿದು ಸ್ವತ್ಛವಾಗಿಡಬೇಕು ಎನ್ನುವ ಕಾಳಜಿ ಯಾರಿಗೂ ಇದ್ದಂತಿಲ್ಲ. ಇದರ ನೇರ ಪರಿಣಾಮ ಸರ್ಕಾರಿ ಕಟ್ಟಡಗಳ ಮೇಲಾಗುತ್ತಿದೆ ಎನ್ನುವುದಕ್ಕೆ ಗುರುಭವನವೇ ಸಾಕ್ಷಿ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತಯಂತ್ರ ಮತ್ತಿತರ ಚುನಾವಣಾ ಪರಿಕರ ಸಂಗ್ರಹಿಸಿಡಲು ಜಿಲ್ಲಾಡಳಿತ
ಗುರುಭವನವನ್ನು ಪಡೆದಿತ್ತು. ಜಿಲ್ಲೆಯ ಆರು ಕ್ಷೇತ್ರಗಳ ಮತದಾನ ಖಾತರಿ ಯಂತ್ರ, ವಿವಿ ಪ್ಯಾಟ್‌, ಬ್ಯಾಲೆಟ್‌ ನಮೂನೆ, ಕಂಟ್ರೋಲ್‌ ಯೂನಿಟ್‌ ಸೇರಿದಂತೆ ಮತ್ತಿತರ ಚುನಾವಣಾ ಪರಿಕರ ಸಂಗ್ರಹಿಸಿ ಇಡಲಾಗಿತ್ತು. ಆರು
ತಿಂಗಳ ಹಿಂದೆ ಸುಪರ್ದಿಗೆ ಪಡೆದುಕೊಂಡಿದ್ದ ಗುರುಭವನವನ್ನು ಚುನಾವಣೆ ಮುಗಿದು ತಿಂಗಳಾದರೂ ಶಿಕ್ಷಣ ಇಲಾಖೆಗೆ ಬಿಟ್ಟುಕೊಟ್ಟಿಲ್ಲ.

ಗುರುಭವನದ ಕಿಟಕಿಗಳ ಜಾಗಕ್ಕೆ ಸಿಮೆಂಟ್‌ ಇಟ್ಟಿಗೆ ಇಟ್ಟು ಗೋಡೆ ನಿರ್ಮಿಸಿ ಕಟ್ಟಡದ ಅಂದವನ್ನೇ ಹಾಳು ಮಾಡಲಾಗಿದೆ. ಇದನ್ನು ಯಾರೊಬ್ಬರೂ ಪ್ರಶ್ನೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರಿಗೆ ತರಬೇತಿ, ಕಾರ್ಯಾಗಾರ, ಶಿಬಿರ, ಶೈಕ್ಷಣಿಕ ಚಟುವಟಿಕೆ ಮತ್ತಿತರ ಸಭೆ, ಸಮಾರಂಭ ಗುರುಭವನದಲ್ಲಿ ನಡೆಯುತ್ತಿದ್ದವು. 

ಕಳೆದ ಮೇ 28 ರಂದು ಶಾಲೆಗಳು ಪ್ರಾರಂಭವಾಗಿವೆ. ಜಿಲ್ಲಾಡಳಿತ ಗುರುಭವನಕ್ಕೆ ಸುಣ್ಣ, ಬಣ್ಣ ಬಳಿದು, ಕಿಟಕಿ
ಜಾಗ ಮುಚ್ಚಿರುವುದನ್ನು ತೆರವುಗೊಳಿಸಿ ಮೂಲ ಸ್ವರೂಪಕ್ಕೆ ತಂದು ಶಿಕ್ಷಣ ಇಲಾಖೆ ಬಿಟ್ಟು ಕೊಟ್ಟರೆ ಶೈಕ್ಷಣಿಕ ಚಟುವಟಿಕೆ ನಡೆಸಲು ಅನುಕೂಲವಾಗಲಿದೆ. ಮತಯಂತ್ರಗಳಿಗೆ ಸೂಕ್ತ ಭದ್ರತೆ ಒದಗಿಸುವ ದೃಷ್ಟಿಯಿಂದ ಗುರುಭವನದ ನೆಲ ಮಹಡಿ ಹಾಗೂ ಮೊದಲ ಮಹಡಿಯ ಕಿಟಕಿಗಳಿಗೆ ಇಟ್ಟಿಗೆ, ಸಿಮೆಂಟ್‌ನಿಂದ ಗೋಡೆ ಕಟ್ಟಿಸಲಾಗಿತ್ತು. ಅಲ್ಲದೇ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದ ಮೂಲೆಯೊಂದರಲ್ಲಿ ಕೆಳ ಮಹಡಿ ಸೇರಿದಂತೆ ಒಟ್ಟು ಮೂರು
ಮಹಡಿಗಳನ್ನು ಹೊಂದಿರುವ ಗುರುಭವನವನ್ನು ನಿರ್ಮಿಸಲಾಗಿದೆ. ಕೆಳ ಮಹಡಿಯಲ್ಲಿ ಊಟದ ಹಾಲ್‌, ಮೂರು
ಕೊಠಡಿಗಳು, ಮೊದಲ ಮಹಡಿಯಲ್ಲಿ ಸಭಾಂಗಣದ ಜತೆ ಎರಡು ಕೊಠಡಿಗಳಿವೆ. ಎರಡನೇ ಮಹಡಿಯಲ್ಲಿ ಸಭಾಂಗಣ, ಚಿಕ್ಕ ಹಾಲ್‌ ಹಾಗೂ ಎರಡು ಕೊಠಡಿಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ, ಸಮಾರಂಭಗಳಿಗೆ ಮೀಸಲಿದ್ದ
ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದ ಶಿಲ್ಪ ಭವನವನ್ನು ಈ ಹಿಂದೆ ಚುನಾವಣೆ ಪರಿಕರಗಳನ್ನು ಸಂಗ್ರಹಿಸಿಡಲು ಜಿಲ್ಲಾಡಳಿತ ತನ್ನ ಸುಪರ್ದಿಗೆ ಪಡೆದಿತ್ತು.

ಹಲವು ವರ್ಷಗಳು ಕಳೆದರೂ ಶಿಲ್ಪ ಭವನವನ್ನು ಇನ್ನೂ ಲೋಕೋಪಯೋಗಿ ಇಲಾಖೆಗೆ ವಾಪಸ್‌ ನೀಡಿಲ್ಲ ಎಂಬ ಆರೋಪವೂ ಇದೆ. ಚುನಾವಣೆ ಮುಗಿದು ತಿಂಗಳಾಗಿದೆ. ಇನ್ನಾದರೂ ಜಿಲ್ಲಾಡಳಿತ ಗುರುಭವನವನ್ನು
ದುರಸ್ತಿಗೊಳಿಸಿ ಶಿಕ್ಷಣ ಇಲಾಖೆಗೆ ಬಿಟ್ಟುಕೊಡಬೇಕಿದೆ. ಮೂಲ ಸೌಲಭ್ಯದಿಂದ ವಂಚಿತವಾಗಿರುವ ಶಾಲಾ-ಕಾಲೇಜುಗಳ ಕಟ್ಟಡಗಳನ್ನು ಚುನಾವಣಾ ಕಾರ್ಯಕ್ಕೆ ಪಡೆದು ಹಾಳು ಮಾಡಲಾಗುತ್ತಿದೆ. ಹಾಗಾಗಿ ಚುನಾವಣಾ ಆಯೋಗ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಕಟ್ಟಡ ಹೊಂದಬೇಕು

ಚುನಾವಣಾ ಆಯೋಗದಿಂದ ವಿವಿ ಪ್ಯಾಟ್‌, ಮತಯಂತ್ರಗಳನ್ನು ಬೇರೆ ಕಡೆ ಕಳುಹಿಸಿ ಎಂದು ಆದೇಶ
ಬರುವ ತನಕ ಗುರುಭವನವನ್ನು ಬಿಟ್ಟು ಕೊಡುವುದಿಲ್ಲ. ಸರ್ಕಾರಿ ಕಲಾ ಕಾಲೇಜಿಗೆ ಹಾಗೂ ಗುರುಭವನಕ್ಕೆ
ಹಾನಿಯಾಗಿದ್ದರೆ ದುರಸ್ತಿ ಮಾಡಿಸಲಾಗುತ್ತದೆ. 

 ವಿ.ವಿ. ಜ್ಯೋತ್ಸ್ನಾ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next