Advertisement

ಶಿಕ್ಷಕರ ಸಿಇಟಿ: ಅರ್ಜಿ ಶುಲ್ಕ ಹೆಚ್ಚಳ

11:28 PM Mar 08, 2022 | Team Udayavani |

ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) ನೇಮಕಾತಿ ಪರೀಕ್ಷೆಗೆ ಅರ್ಜಿ ಶುಲ್ಕ ದರವನ್ನು ಶೇ. 25ರಷ್ಟು ಹೆಚ್ಚಳ ಮಾಡಲಾಗಿದೆ.

Advertisement

ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ 625 ರೂ. ಹಾಗೂ ಎರಡು ಹುದ್ದೆಗೆ 1,250 ರೂ., ಸಾಮಾನ್ಯ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ 1,250 ರೂ. ಹಾಗೂ ಎರಡು ಹುದ್ದೆಗೆ 2,500 ರೂ. ನಿಗದಿ ಮಾಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್‌.ಎಸ್‌. ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ.

2019ರಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಿದ್ದ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ 500 ರೂ. ಹಾಗೂ ಎರಡು ಹುದ್ದೆಗೆ ಒಂದು ಸಾವಿರ ರೂ., ಸಾಮಾನ್ಯ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ 1,000 ರೂ. ಹಾಗೂ ಎರಡು ಹುದ್ದೆಗೆ 2,000 ರೂ.ಗಳ ಅರ್ಜಿ ಶುಲ್ಕ ನಿಗದಿ ಮಾಡಲಾಗಿತ್ತು.

ಪ್ರಸ್ತುತ ಸರಕಾರವು 15,000 ಹುದ್ದೆಗಳ ಪರೀಕ್ಷಾ ಪ್ರಕ್ರಿಯೆ ನಡೆಸಲು ಸುಮಾರು 9 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. 2019ರ ದರದಂತೆ ಸರಕಾರವು ಅಭ್ಯರ್ಥಿಗಳಿಂದ ಶುಲ್ಕ ಪಾವತಿಸಿಕೊಂಡರೆ, 3 ಕೋಟಿ ರೂ. ಕೊರತೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಶೇ. 25ರಷ್ಟು ಹೆಚ್ಚಳ ಮಾಡಿದರೆ, 1.5 ಕೋಟಿ ರೂ. ಸಂಗ್ರಹವಾಗಲಿದೆ. ಉಳಿದ 1.5 ಕೋಟಿ ರೂ.ಗಳನ್ನು ಪರೀಕ್ಷಾ ಪ್ರಾಧಿಕಾರವಾದ ಕೇಂದ್ರೀಕೃತ ದಾಖಲಾತಿ ಘಟಕದ ಖಾತೆಯಲ್ಲಿರುವ ಹಣವನ್ನು ಬಳಸಿಕೊಂಡು ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next