Advertisement

ಶಿಕ್ಷಕ ವೃತ್ತಿ ಪವಿತ್ರವಾದುದು: ಶಾಸಕ ನಿರಂಜನಕುಮಾರ್‌

03:19 PM Sep 06, 2018 | |

ಗುಂಡ್ಲುಪೇಟೆ: ಭವಿಷ್ಯದ ಮುಂದಿನ ಪೀಳಿಗೆಯನ್ನು ಉತ್ತಮವಾಗಿ ರೂಪಿಸುವ ಹೊಣೆ ಹೊತ್ತ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ದೇಶ ಸೇವೆಯಷ್ಟೇ ಪ್ರಾಮುಖ್ಯತೆಯನ್ನು ಶಿಕ್ಷಕ ವೃತ್ತಿ ಪಡೆದಿದೆ ಎಂದು ಶಾಸಕ ನಿರಂಜನಕುಮಾರ್‌ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾನ್ಯ ಶಿಕ್ಷಕರಾಗಿದ್ದ ಡಾ.ರಾಧಾಕೃಷ್ಣನ್‌ ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೇರಲು ನಮ್ಮ ದೇಶದ ಸಂಸ್ಕೃತಿಯೇ ಕಾರಣ. ಭವಿಷ್ಯದ ಮುಂದಿನ ಪೀಳಿಗೆ ರೂಪಿಸುವಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಹೊಣೆ ದೊಡ್ಡದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ಹಾಗೂ ಅರ್ಹ ಶಿಕ್ಷಕರಿದ್ದರೂ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದು ತಪ್ಪಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ತಾಪಂ ಅಧ್ಯಕ್ಷ ಜಗದೀಶಮೂರ್ತಿ ಮಾತನಾಡಿ, ಎಲ್ಲಾ ಮಹನೀಯರ ಜಯಂತಿ ಅವರ ಹೆಸರಿನಲ್ಲಿಯೇ ಆಚರಿಸಿದರೂ ಡಾ.ರಾಧಾಕೃಷ್ಣನ್‌ ಮಾತ್ರ ಶಿಕ್ಷಕರ ದಿನಾಚರಣೆ ಮಾಡುವ ಮೂಲಕ ತಮ್ಮ ವೃತ್ತಿಗೆ ಗೌರವ ನೀಡಿದ್ದಾರೆ. ಆದ್ದರಿಂದ ಬೇರೆ ಹುದ್ದೆಗಳಿಗೆ ಹೋಲಿಕೆ ಮಾಡಿಕೊಂಡು ಕೀಳರಿಮೆಯಿಂದ ಕುಗ್ಗದೆ ತಮ್ಮ ವೃತ್ತಿಗೆ ಇನ್ನೂ ಹೆಚ್ಚಿನ ಗೌರವ ದೊರಕುವಂತೆ ಮಾಡಬೇಕು ಎಂದರು.

ಪುರಸಭೆ ಅಧ್ಯಕ್ಷ ಗಿರೀಶ್‌ ಮಾತನಾಡಿ, ಮಕ್ಕಳು ಮನೆಗಿಂತ ಹೆಚ್ಚಿನ ಸಮಯ ಶಾಲೆಯಲ್ಲಿಯೇ ಕಲಿಯುವುದರಿಂದ ಮಕ್ಕಳ ಮೇಲೆ ಶಿಕ್ಷಕರ ಪ್ರಭಾವ ಹೆಚ್ಚಾಗಿದೆ. ಸ್ವಂತ ಮಕ್ಕಳಂತೆ ಭಾವಿಸಿ ವಿದ್ಯೆಯೊಂದಿಗೆ ವಿನಯವನ್ನೂ ಕಲಿಸಿದರೆ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ. ಶಿಕ್ಷಕರು ನೀಡುವ ಸಣ್ಣಪುಟ್ಟ ಶಿಕ್ಷೆಗಳಿಗೂ ಪಾಲಕರು ಅಡ್ಡಿಪಡಿಸಿದರೆ
ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸ ಬೇಕಿದೆ. ಪೋಷಕರು ಶಿಕ್ಷಕರಿಗೂ ಸ್ವಾತಂತ್ರ್ಯ ನೀಡಿ ತಮ್ಮ ಮಕ್ಕಳ ಮೇಲೆ ಹಿಡಿತವನ್ನು ಪಡೆಯಲಿ. ಆಗ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದರು.

ಮೆರವಣಿಗೆ: ಇದಕ್ಕೂ ಮೊದಲು ಪ್ರವಾಸಿಮಂದಿರದಲ್ಲಿ ಡಾ. ರಾಧಾಕೃಷ್ಣನ್‌ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂಗೀತ ಶಿಕ್ಷಕ ಸಿದ್ದನಗೌಡ ಪಾಟೀಲ್‌, ಸೋಮು ಹಾಗೂ ತಂಡದವರಿಂದ ನಾಡಗೀತೆ ಹಾಗೂ ಸುಗಮ ಸಂಗೀತ ಗಾಯನ ಆಯೋಜಿಸಲಾಗಿತ್ತು. ವಿವಿಧ ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ
ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಚಿತ್ರಕಲಾ, ನಿವೃತ್ತ ಹಾಗೂ ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

Advertisement

 ಈ ಸಂದರ್ಭದಲ್ಲಿ ಉಪನ್ಯಾಸಕ ಡಾ.ನಂದೀಶ್‌ ಹಂಚೆ, ಜಿಪಂ ಸದಸ್ಯರಾದ ಮಹೇಶ್‌, ಬೊಮ್ಮಯ್ಯ, ಚನ್ನಪ್ಪ, ರತ್ನಮ್ಮ, ಅಶ್ವಿ‌ನಿ, ತಾಪಂ ಸದಸ್ಯರಾದ ರೇವಣ್ಣ, ಪ್ರಭಾಕರ್‌, ಬಿಇಒ ಮೋಹನ್‌, ಬಿಆರ್‌ಸಿ ನಂದೀಶ್‌ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next