ಗುಂಡ್ಲುಪೇಟೆ: ಮೀಸಲಾತಿ ಹೆಚ್ಚಳ ಮಾಡುವ ಮೂ ಲಕ ರಾಜ್ಯ ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ತಾಲೂಕಿನ ಬೇಗೂರು ಗ್ರಾಮದಲ್ಲಿ ಹೋಬಳಿ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಳವಾರ, ಪರಿವಾರ ಎಸ್ಟಿಗೆ ಸೇರಿಸಲು ಹೋರಾಟ ನಡೆದಿತ್ತು. ನಂತರ ಬಿಜೆಪಿ ಸರ್ಕಾರ ತಳವಾರ, ಪರಿವಾರವನ್ನು ಎಷ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ ಎಂದರು. ವಾಲ್ಮೀಕಿ ಸಮಾಜಕ್ಕೆ ಮೀಸಲು ಹೆಚ್ಚಳ ಸಂಬಂಧ ಸಮಾಜದ ಶ್ರೀಗಳು 257 ದಿನ ಧರಣಿ ನಡೆಸಿದ್ದರು. ಅಲ್ಲದೆ ಮೀಸಲು ಹೆಚ್ಚಳ ಸಂಬಂಧ ದೊಡ್ಡ ಕೂಗು ಇತ್ತು. ಸರ್ಕಾರ ಮೀಸಲು ಹೆಚ್ಚಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ತಿಳಿಸಿದರು.
ವಾಲ್ಮೀಕಿ ಬರೆದ ರಾಮಾಯಣ ಮಹಾಗ್ರಂಥ ವಾಗಿದೆ. ವಾಲ್ಮೀಕಿ ಅವರ ಆದರ್ಶ ಮೈಗೂಡಿಸಿ ಕೊಳ್ಳಬೇಕು. ನಾವು ಸಹ ವಾಲ್ಮೀಕಿಯಂತೆ ಪರಿವರ್ತನೆ ಯಾಗಬೇಕು ಎಂದರು. ವಾಲ್ಮೀಕಿ ಜಯಂತಿ ತಾಲೂಕು ಮಟ್ಟದಲ್ಲಿ ಆಗುತ್ತಿತ್ತು. ಈಗ ಹೋಬಳಿ ಮಟ್ಟದಲ್ಲಿ ನಡೆಯಲು ಶುರುವಾಗಿದೆ. ಜಯಂತಿ ಪ್ರತಿ ಹಳ್ಳಿಗಳಲ್ಲಿ ಹಾಗು ಪ್ರತಿ ಗಲ್ಲಿಗಳಲ್ಲಿ ನಡೆಸುವ ಮೂಲಕ ವಾಲ್ಮೀಕಿ ಅವರ ನೆನಪಿಸುವ ಕೆಲಸ ಆಗಬೇಕು ಎಂದರು.
ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ವ ಪಕ್ಷಗಳ ಸಭೆಯ ವಾಲ್ಮೀಕಿ ಸಮಾಜಕ್ಕೆ ಮೀಸಲು ಹೆಚ್ಚಿಸಿದ್ದಾರೆ ಇದು ಖುಷಿ ತಂದಿದೆ.ವಾಲ್ಮೀಕಿ ಶ್ರೀಗಳು 257 ದಿನ ಅನಿರ್ದಿಷ್ಠಾವಧಿ ಧರಣಿ ನಡೆಸಿದ್ದಾರೆ. ಮೀಸಲು ಹೆಚ್ಚಳ ಸಂಬಂಧ ಗುಂಡ್ಲುಪೇಟೆಯ ಕಾಂಗ್ರೆಸ್ಸಿಗರು ಧರಣಿಯಲ್ಲಿ ಒಂದು ದಿನ ಭಾಗವಹಿಸಿದ್ದರು.ಈಗ ಮೀಸಲು ಹೆಚ್ಚಳವಾಗಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಉದ್ಯೋಗ ಸೃಷ್ಠಿಯಾಗದೆ ಆರ್ಥಿಕವಾಗಿ ಸಮಾಝದ ಯುವಕರು ಮುಂದೆ ಬರಲು ಸಾದ್ಯವಿಲ್ಲ. ಉದ್ಯೋಗ ಸೃಷ್ಟಿ ಮಾಡುವ ಕೆಲಸ ಸರ್ಕಾರ ಮಾಡಲಿ ಎಂದರು.
ಪ್ರತಿಭಾ ಪುರಸ್ಕಾರ: ಸಮಾರಂಭದಲ್ಲಿ ಎಸ್‌ಎಸ್ ಎಲ್‌ಸಿ ಹಾಗು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮೈಸೂರು ಮೇಯರ್ ಶಿವಕುಮಾರ್ ವಿತರಿಸಿದರು. ಅದ್ದೂರಿ ಮೆರವಣಿಗೆ: ಬೇಗೂರು ಗ್ರಾಮದ ಬಂಡಿಗೆರೆ ದೇವಸ್ಥಾನದಿಂದ ಬೆಳ್ಳಿರಥದಲ್ಲಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮೈಸೂರು ಹೆದ್ದಾರಿಯಲ್ಲಿ ಗ್ರಾಮದ ಅಂಚೆ ಕಚೇರಿ ತನಕ ತೆರಳಿದ ಬಳಿಕ ವಾಪಸ್ ಸಮಾರಂಭದ ಸ್ಥಳಕ್ಕೆ ಬಂದಿತ್ತು. ವಾಲ್ಮೀಕಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಮಂಗಳ ವಾದ್ಯ, ಸತ್ತಿಗೆ, ಸುರಪಾಣಿಗಳೊಂದಿಗೆ ನೂರಾರು ಯುವಕ ರು, ಸಮಾಜ ಮುಖಂಡರು ಭಾಗವಹಿಸಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್ .ಸಿ.ಬಸವರಾಜು, ಮೈಸೂರು ಮೇಯರ್ ಶಿವಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಚಿಕ್ಕರಂಗನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶ್ರೀನಿವಾಸನಾಯಕ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಉಪ ನಿರ್ದೇಶಕ ರಾಜನಾಯಕ, ಚಾಮುಲ್ ನಿರ್ದೇಶಕರಾದ ಎಚ್. ಎಸ್.ನಂಜುಂಡಪ್ರಸಾದ್ ಇತರರು ಇದ್ದರು.