Advertisement

ಸಮಸ್ಯೆ ಅರಿತು ಜನಸಂಪರ್ಕ ಸಭೆ ನಡೆಸಿದೆ: ಶಾಸಕ

02:58 PM Apr 05, 2023 | Team Udayavani |

ಗುಂಡ್ಲುಪೇಟೆ: ಮೂರು ಬಾರಿಯ ಸೋತು ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದರೂ ನಾನು ಬಯಸಿದ್ದಕ್ಕಿಂತ ಹೆಚ್ಚಿನ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ತೋರಿದ್ದೀರಿ. ಅಂತೆಯೇ 2023ರ ವಿಧಾನ ಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಮತ ನೀಡಿ ಗೆಲುವಿಗೆ ಸಹಕರಿಸಬೇಕೆಂದು ಶಾಸಕ ಸಿ.ಎಸ್‌ .ನಿರಂಜನಕುಮಾರ್‌ ಮನವಿ ಮಾಡಿದರು.

Advertisement

ತಾಲೂಕಿನ ಕಂದೇಗಾಲದ ಶ್ರೀ ಪಾರ್ವತಾಂಬ ದೇವಾಲಯದಲ್ಲಿ ಕುಟುಂಬಸ್ಥರು, ಅಭಿಮಾನಿಗಳು ಮತ್ತು ಪಕ್ಷದ ಮುಖಂಡರು, ನೂರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ನಂತರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪದೇ ಪದೆ ಜನರಿಗೆ ಮೋಸ ಮಾಡಿಕೊಂಡು ಬರಬಹುದು ಎಂಬುದು ಕಳೆದ ಬಾರಿ ಸುಳ್ಳಾಯಿತು. ಅಧಿಕಾರ ಇದ್ದಾಗ ಮಾಡದೇ ಈಗ ಸಮುದಾಯವೊಂದರ ಓಲೈಕೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದವರನ್ನು ಟೀಕಿಸಿದರು.

ಎತ್ತಿಕಟ್ಟಿದ್ದರು: ಕ್ಷೇತ್ರದಲ್ಲಿ ಹಿಂದೆ 25 ವರ್ಷ ಅಧಿಕಾರ ಮಾಡಿದವರು ಸಣ್ಣ ಕೊಡುಗೆಯನ್ನು ದೊಡ್ಡದೆಂದು ಬಿಂಬಿಸುವುದು, ಅಭಿವೃದ್ಧಿ ವಿಚಾರದಲ್ಲಿ ರಾಜ ಕಾರಣ, ರೈತರ ಏಳಿಗೆ ಸಹಿಸದೇ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ರಾಜಕೀಯ ಮಾಡಿದರು. ನನ್ನ ಬೆನ್ನಿಗೆ ನಿಂತ ಸಮುದಾಯದಿಂದ ನಿಮಗೆ ಅಪಾಯ ಎಂದು ಜನರನ್ನು ಎತ್ತಿಕಟ್ಟಿದರು ಎಂದು ಆರೋಪಿಸಿದರು.

ಅಭಿವೃದ್ಧಿ ಮಾಡಿಲ್ಲ: ಚುನಾಯಿತನಾದ ನಂತರ ಸಮಸ್ಯೆಗಳ ಗಂಭೀರತೆ ಅರಿತು ಜನಸಂಪರ್ಕ ಸಭೆ ಮೂಲಕ ಪರಿಹಾರ ಕೊಡಿಸಿದೆ. ಟೌನ್‌ ನಲ್ಲಿ ಉಪ್ಪಾರರಿಗೆ 1 ಎಕರೆ ಜಾಗ ಕೊಟ್ಟಿದೆ. 1 ಅನುದಾನ ಕೋಟಿ ಬಿಡುಗಡೆ ಹಂತದಲ್ಲಿದೆ. ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ, ಸಾಗುವಳಿ ಚೀಟಿ ವಿತರಣೆ, ಟೌನ್‌ನ 1078 ನಿರ್ವಸತಿಗರಿಗೆ ಸೈಟ್‌ ಸೇರಿದಂತೆ ಸಾಕಷ್ಟು ಮಾಡಿದ್ದೇವೆ ಎಂದು ಪಟ್ಟಿ ಮಾಡಿದರು. ನೀವು ಬಡವರಿಗೆ ಬರಿ ಪಿಕ್ಚರ್‌ ತೋರಿಸಿದಿರಿ ಎಂದು ಆರೋಪಿಸಿದರು.

ಕಾಂಗ್ರೆಸ್‌ ಗೆಲ್ಲಲ್ಲ: ಕೇತ್ರದಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸೋಣ. ಪ್ರಧಾನಿ, ಗೃಹ ಸಚಿವರಿಗೆ ರಾಜ್ಯದಲ್ಲಿ 118 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಇರುವ ಬಗ್ಗೆ ವರದಿ ಇದೆ. ಇದು 130 ಕ್ಕೆ ಹೋಗುವ ಭರವಸೆ ವ್ಯಕ್ತವಾಗಿದೆ. ವಿಶ್ವ ನಾಯಕತ್ವದ ಮೋದಿ ನಾಯಕತ್ವದ ಪಕ್ಷದವರು ಎಂದು ಹೇಳಿ ಕೊಳ್ಳಲು ನಮಗೆ ಹೆಮ್ಮೆ ಇದೆ. ಪಂಚರಾಜ್ಯ ಈಚೆಗೆ ನಡೆದ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಸೋ ಲುಂಡ ಕಾಂಗ್ರೆಸ್‌ ಕರ್ನಾಟಕದಲ್ಲೂ ಗೆಲ್ಲಲ್ಲ ಎಂದರು.

Advertisement

ಬಿಜೆಪಿ ಸೇರ್ಪಡೆ: ತಾಲೂಕಿನ ಬನ್ನಿತಾಳಪುರ, ಮೂಖ ಹಳ್ಳಿ, ಬೊಮ್ಮಲಾಪುರ, ಹಿರೀಕಾಟಿ, ರಂಗನಾಥಪುರ, ಮೂಡ್ನಾಕೂಡು, ಕಗ್ಗಳದಹುಂಡಿ ಗ್ರಾಮದ ನೂರಾರು ಮಂದಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷ ದೊಡ್ಡಹುಂಡಿ ಜಗದೀಶ್‌, ಪುರಸಭೆ ಅಧ್ಯಕ್ಷ ಪಿ.ಗಿರೀಶ್‌, ಮಾಜಿ ಅಧ್ಯಕ್ಷ ಎಲ್‌.ಸುರೇಶ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್‌.ಜಿ. ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ನಿಟ್ರೆನಾಗ ರಾಜಪ್ಪ, ಅಗತಗೌಡನಹಳ್ಳಿ ಬಸವರಾಜು, ಎಸ್ಟಿ ಮೋ ರ್ಚಾ ರಾಜ್ಯ ಉಪಾಧ್ಯಕ್ಷ ಎನ್‌.ಮಲ್ಲೇಶ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಚ್‌.ಎಂ.ಮಹೇಶ್‌, ಹಾಪ್‌ಕಾಮ್ಸ್‌ ಜಿಲ್ಲಾಧ್ಯಕ್ಷ ಕುರುಬರಹುಂಡಿ ಲೋಕೇಶ್‌, ಚಾಮುಲ್‌ ಮಾಜಿ ನಿರ್ದೇಶಕ ಕನ್ನೇಗಾಲ ಸ್ವಾಮಿ, ಕೊಡಸೋಗೆ ಶಿವಬಸಪ್ಪ, ಹಸಗೂಲಿ ಗಂಗಾಧರಪ್ಪ, ನವೀನ್‌ ಮೌರ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next