Advertisement

ಚಾ.ನಗರ: ಶಿಕ್ಷಕ ಪ್ರಶಸ್ತಿ ಹೆಸರು ಪ್ರಕಟ

01:38 PM Sep 05, 2020 | Suhan S |

ಚಾಮರಾಜನಗರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2020-21ನೇ ಸಾಲಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ ಶಿಕ್ಷಕರಿಗೆ ಸೆ. 5ರಂದು ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆಯಲಿರುವ ಶಿಕ್ಷಕ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಲಾಗುವುದು.

Advertisement

ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 3 ವಿಭಾಗಗಳಲ್ಲಿ ನೀಡಲಾಗುತ್ತಿದ್ದು, ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಪ್ರಶಸ್ತಿ ಹಂಚಿಕೆ ಮಾಡಲಾಗಿದೆ. ಚಾಮರಾಜನಗರ ತಾಲೂಕಿನ ವಡ್ಡರಹಳ್ಳಿ ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕ ಪಿ.ಕುಮಾರ್‌, ಗುಂಡ್ಲುಪೇಟೆ ತಾಲೂಕಿನ ಮೂಕಹಳ್ಳಿ ಕಾಲೋ ನಿ-2ರ ಸ.ಕಿ.ಪ್ರಾ.ಶಾಲೆಯ ಸಿ.ಗಾಯತ್ರಿ, ಕೊಳ್ಳೇಗಾಲ ತಾಲೂಕಿನ ಉಪ್ಪಾರ ಬೀದಿಯ ಸ.ಕಿ.ಪ್ರಾ.ಶಾಲೆಯ ಆರ್‌. ರಾಜು, ಹನೂರು ತಾಲೂಕಿನ ಕರಿಯಪ್ಪನ ದೊಡ್ಡಿಯ ಸ.ಕಿ.ಪ್ರಾ.ಶಾಲೆಯ ಡಿ. ದಿವ್ಯಾರಾಣಿ, ಯಳಂದೂರು ತಾಲೂಕಿನ ದಾಸನಹುಂಡಿಯ ಸ.ಕಿ.ಪ್ರಾ.ಶಾಲೆಯ ಎಲ್‌. ಸುಜಾತಾ ಅವರನ್ನು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಚಾಮರಾಜನಗರ ತಾಲೂಕಿನಲ ಸ.ಹಿ.  ಪ್ರಾ. ಶಾಲೆಯ ಸಹ ಶಿಕ್ಷಕರಾದ ನಂಜುಂಡಸ್ವಾಮಿ, ಗುಂಡ್ಲುಪೇಟೆ ತಾಲೂಕಿನ ಬೇಗೂರು ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಅನ್ನಪೂರ್ಣಮ್ಮ, ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕರಾದ ವಸಂತಕುಮಾರಿ, ಹನೂರು ತಾಲೂಕಿನ ಕಣ್ಣೂರು ಸ.ಹಿ.ಪ್ರಾ. ಶಾಲೆಯ ಟಿ.ಜಿ.ಟಿ ಶಿಕ್ಷಕರಾದ ಸಾವುಕರಾಜು, ಯಳಂದೂರು ತಾಲೂಕಿನ ಅಲ್ಕೆರೆ ಅಗ್ರಹಾರ ಸ.ಹಿ.ಪ್ರಾ.ಶಾಲೆಯ ಟಿ.ಜಿ.ಟಿ ಶಿಕ್ಷಕರಾದ ಎನ್‌. ದಿವಾಕರ್‌ ಹಿರಿ ಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಚಾಮರಾಜ  ನಗರ ತಾಲೂಕಿನ ಕೋಳಿಪಾಳ್ಯ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಎಂ.ಎಲ್‌. ಸುರೇಶ್‌ ಕುಮಾರ್‌, ಗುಂಡ್ಲುಪೇಟೆ ತಾಲೂಕಿನ ಪಡಗೂರು ಮದ್ದಾನೇಶ್ವರ ಪ್ರೌಢಶಾಲೆ ರಾಜೇಂದ್ರ, ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸರ್ಕಾರಿ ಪ್ರೌಢಶಾಲೆ ಪಿ.ಎಂ. ಮಹದೇವಸ್ವಾಮಿ, ಹನೂರು ತಾಲೂಕಿನ ಚೆನ್ನಾಲಿಂಗನಹಳ್ಳಿಸರ್ಕಾರಿ ಪ್ರೌಢಶಾಲೆ ಕೃಷ್ಣಸಾ ರಾಮಚಂದ್ರಸಾ ಬಾಕಳೆ, ಯಳಂದೂರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಎನ್‌.ಮಹದೇವ ಆಯ್ಕೆಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next