Advertisement

ಟೀಚರ್‌ ನನ್ನ ಚಿತ್ರ ಬಿಡಿಸಿ ಎಂದರೆ ಈ ಮಕ್ಕಳು ಯಾರ ಚಿತ್ರ ಬಿಡಿಸಿದ್ದಾರೆ ನೋಡಿ: ಫೋಟೋ ವೈರಲ್

05:42 PM Sep 18, 2022 | Team Udayavani |

ನವದೆಹಲಿ:  ಕಳೆದ ಕೆಲ ದಿನಗಳ ಹಿಂದೆ ಶಿಕ್ಷಕಿಯೊಬ್ಬರ ಜತೆ ಪುಟ್ಟ ವಿದ್ಯಾರ್ಥಿ ಮಾತಾನಾಡುವ ವಿಡಿಯೋವೊಂದು ವೈರಲ್‌ ಆಗಿತ್ತು. ಇನ್ಮುಂದೆ ತಪ್ಪು ಮಾಡಲ್ಲ ಎನ್ನುವ ಆ ಪುಟ್ಟ ಹುಡುಗನಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

Advertisement

ಸದ್ಯ ಇಂಥದ್ದೇ ಸುದ್ದಿಯೊಂದು ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ಮಿಂಚಿದೆ. ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ನಿಶಾತ್, ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿಶಾತ್ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಚಟುವಟಿಕೆಯ ಹಾಗೆ ತಮ್ಮ ಚಿತ್ರವನ್ನು ಬಿಡಿಸಿ ಎಂದು ಹೇಳಿದ್ದಾರೆ. ಒಂದನೇ ತರಗತಿಯ ವಿದ್ಯಾರ್ಥಿಗಳು ತನ್ನ ಶಿಕ್ಷಕಿಯ ಮುಖವನ್ನು ನೋಡಿ ಚಿತ್ರವನ್ನು ಬಿಡಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಮಕ್ಕಳು ಬಿಡಿಸಿರುವ ಚಿತ್ರ ಹಾಸ್ಯಾಸ್ಪದವಾಗಿ ಮೂಡಿಬಂದಿದ್ದು, ಮಕ್ಕಳು ತಮ್ಮದೇ ಕಲ್ಪನೆಯಲ್ಲಿ ತಮ್ಮ ಮೆಚ್ಚಿನ ಟೀಚರ್‌ ನ ಚಿತ್ರವನ್ನು ಬಿಡಿಸಿದ್ದಾರೆ. ಮಕ್ಕಳು ಬಿಡಿಸಿರುವ ಚಿತ್ರಕ್ಕೆ ಶಿಕ್ಷಕಿ ನಿಶಾತ್‌ ಅವರು ಅಂಕಗಳನ್ನು ಕೊಟ್ಟು, ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದು, ಈಗ ವೈರಲ್‌ ಆಗಿದೆ.

ಟ್ವಿಟರ್‌ ಬಳಕೆದಾರರು ಫೋಟೋಗಳನ್ನು ನೋಡಿ ಹತ್ತಾರು ಕಮೆಂಟ್ಸ್‌ ಗಳನ್ನು ಮಾಡಿದ್ದಾರೆ.

Advertisement

 

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next