Advertisement

ಧರ್ಮ ಒಡೆಯುವವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ

12:58 PM Sep 04, 2017 | |

ಮುದ್ದೇಬಿಹಾಳ: ಲಿಂಗ ಹೊಂದಿದವರು ಲಿಂಗಾಯತರೇ ಹೊರತು ಲಿಂಗಾಯತವೇ ಸ್ವತಂತ್ರ ಧರ್ಮ ಅಲ್ಲ. ವೀರಶೈವ ಲಿಂಗಾಯತ ಒಂದೇ ಧರ್ಮ. ವೀರಶೈವ ಅನ್ನುವುದು ಧಾರ್ಮಿಕ ಭಾಷೆ. ಶರಣರ 148 ವಚನಗಳಲ್ಲಿ ವೀರಶೈವ ಲಿಂಗಾಯತ ಎಂದೇ ಉಲ್ಲೇಖವಿದೆ. ರಾಜಕೀಯ ಕುತಂತ್ರಿಗಳು ವೀರಶೈವ, ಲಿಂಗಾಯತರ ಮಧ್ಯೆ ಒಡಕು ಹುಟ್ಟು ಹಾಕುವ ಷಡ್ಯಂತ್ರ ನಡೆಸಿದ್ದಾರೆ ಎಂದು ಬಸವನಬಾಗೇವಾಡಿ ಒಡೆಯರ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಹೇಳಿದರು.

Advertisement

ಇಲ್ಲಿನ ವಿಜಯಮಹಾಂತೇಶ ಮಂಗಲ ಭವನದ ದಾಸೋಹ ಭವನದಲ್ಲಿ ಅಖೀಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘ ಮತ್ತು ಹಂಡೆವಜೀರ ಯುವ ಜಾಗೃತ ವೇದಿಕೆ ಸಂಯುಕ್ತ ಆಶ್ರಯದಲ್ಲಿ ರವಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದಲ್ಲಿ ಗಂಡಾದರೂ ಆಗಿ, ಹೆಣ್ಣಾದರೂ ಆಗಿ. ಆದರೆ ಚಕ್ಕಾ ಎಂದಿಗೂ ಆಗಬೇಡಿ. ಸ್ವಾಮೀಜಿಗಳೇ ಖಾವಿ ಬಟ್ಟೆ ಧರಿಸಿ ರಾಜಕೀಯ ಮಾಡಬೇಡಿ. ಸೆ. 4ರಂದು ಬಾದಾಮಿ ತಾಲೂಕು ಶಿವಯೋಗ ಮಂದಿರಕ್ಕೆ ವೀರಶೈವ ಲಿಂಗಾಯತರಾಗಿ ಬನ್ನಿ. ಧರ್ಮ ಒಡೆಯುವವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದರು.

ಶಿಕ್ಷಕ ಡಿ.ಎನ್‌. ಪಾಟೀಲ ಮಾತನಾಡಿ, ಹಂಡೆವಜೀರರು ಶಿವಭಕ್ತರು. ವಿಜಯನಗರ ಸಾಮ್ರಾಜ್ಯದ ಸಂರಕ್ಷಕರು. ದೇಶಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ರಾಜಭಕ್ತರು. ಇವರನ್ನು ಹಂಡೆಪಾಳ್ಯಗಾರರು, ಚಂಡಿಮ ಅರಸರು ಎಂದೆಲ್ಲ ಕರೆಯುತ್ತಾರೆ ಎಂದರು. 

ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಚಾಣಕ್ಯ ಕರಿಯರ್‌ ಅಕಾಡೆಮಿ ಮುಖ್ಯಸ್ಥ ಎನ್‌.ಎಂ. ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಸಾಧಕರಾಗಿ ಹೊರ ಹೊಮ್ಮಬೇಕು. ಪಾಲಕರು, ಸಮಾಜ ನಿಮ್ಮ ಮೇಲೆ ಇಟ್ಟ ಭರವಸೆ ಹುಸಿಗೊಳಿಸಬಾರದು. ಪಾಲಕರು ಸಹಿತ ಮಕ್ಕಳ ಎದುರು ಶಿಕ್ಷಕರನ್ನು ಅಗೌರವಿಸಬಾರದು. ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ನಿರ್ಮಿಸಿಕೊಡಬೇಕು ಎಂದರು.

Advertisement

ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಮಂಗಳಾದೇವಿ ಬಿರಾದಾರ, ದ್ರಾಕ್ಷಿ ನಿಗಮದ ಅಧ್ಯಕ್ಷ ಬಿ.ವಿ. ಪಾಟೀಲ ಮಾತನಾಡಿದರು. ಕರಭಂಟನಾಳ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.

ರಾಜ್ಯ ಸಂಘದ ಗೌರವಾಧ್ಯಕ್ಷ ಬಿ.ಎಸ್‌. ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಪುಗೌಡ ಬಿರಾದಾರ, ಜಿಲ್ಲಾಧ್ಯಕ್ಷ ಎಚ್‌.ಟಿ.ಬಿರಾದಾರ, ಕರ್ನಾಟಕ ವಿದ್ಯುತ್‌ ನಿಗಮ ನಿರ್ದೇಶಕ ವಕೀಲ ಆರ್‌.ಬಿ. ಪಾಟೀಲ, ಸಂಘದ ತಾಲೂಕಾಧ್ಯಕ್ಷ ಕೆ.ಎಸ್‌. ಗೌಡರ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಗಣ್ಯರಾದ ಶರಣಪ್ಪ ರೇವಡಿ, ಸಂಗಮೇಶ ಕರಭಂಟನಾಳ, ಬಿ.ಎಚ್‌. ಪಾಟೀಲ, ಎಸ್‌. ಎಸ್‌. ಪಾಟೀಲ ಹಂಡರಗಲ್ಲ, ರಾಜೇಂದ್ರಗೌಡ ರಾಯಗೊಂಡ ವೇದಿಕೆಯಲ್ಲಿದ್ದರು.

ಬೆಂಗಳೂರು ಲಲಿತಕಲಾ ವಿವಿ ವಿಶ್ರಾಂತ ವಿಶೇಷ ಅಧಿಕಾರಿ ಡಾ|ಎಸ್‌.ಸಿ. ಪಾಟೀಲ, ಕೆಎಎಸ್‌ ಸಾಧಕಿ ಮಮತಾ ಹೊಸಗೌಡರ, ಯೋಗ ಶಿಕ್ಷಕಿ ಪ್ರೇಮಾ ಗುಡದಿನ್ನಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಪರೀಕ್ಷೆಗಳಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು
ಪುರಸ್ಕರಿಸಲಾಯಿತು.

ರವೀಂದ್ರ ಬಿರಾದಾರ ಸ್ವಾಗತಿಸಿದರು. ದೇವೇಂದ್ರ ಬೇನಾಳ ಪ್ರಾಸ್ತಾವಿಕ ಮಾತನಾಡಿದರು. ಎಂ.ಎಂ. ಬೆಳಗಲ್ಲ, ಎಚ್‌.ಎಸ್‌.ಹಂಡರಗಲ್ಲ, ಎಂ.ಬಿ.ಪಾಟೀಲ ನಿರೂಪಿಸಿದರು. ನಾಗರಾಜ ತಂಗಡಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next