Advertisement

ಭಾರತೀಯ ಧರ್ಮದ ಶಿಕ್ಷಣ ಬೋಧಿಸಿ

03:07 PM Sep 16, 2017 | |

ತಾಳಿಕೋಟೆ: ವಿವಿಧ ಜಾತಿ, ಮತ, ಪಂಥಗಳನ್ನು ತೊಡೆದು ಹಾಕುವುದರೊಂದಿಗೆ ಭಾರತೀಯ ಧರ್ಮದ ಶಿಕ್ಷಣ ಮಕ್ಕಳಿಗೆ ಎಲ್ಲಿವರೆಗೆ ಸಿಗುವುದಿಲ್ಲವೋ ಅಲ್ಲಿವರೆಗೆ ದೇಶದ ಸುಧಾರಣೆ ಸಾಧ್ಯವಿಲ್ಲ ಎಂದು ಶಾಸಕ ಸಿ.ಎಸ್‌. ನಾಡಗೌಡ ಹೇಳಿದರು.

Advertisement

ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಂಗಮೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ| ಎಸ್‌.ರಾಧಾಕೃಷ್ಣನ್‌ ಜಯಂತಿ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ತಪ್ಪು ಮಾಡುವ ಮಕ್ಕಳಿಗೆ ಶಿಕ್ಷಕರು ದಂಡಿಸಿ ಹೇಳುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ದಂಡಿಸುವುದಕ್ಕಿಂತ ಕಲಿಕೆಯ ಆಸಕ್ತಿ ಗಮನಿಸಿ ಶಿಕ್ಷಣ ನೀಡಬೇಕಿದೆ. ಮಕ್ಕಳ ಕಲಿಕೆಯಲ್ಲಿ ಮೌಲ್ಯ ಕಳೆದುಕೊಂಡರೆ ಶಿಕ್ಷಕರು ನೀಡಿದ ಶಿಕ್ಷಣ ವ್ಯರ್ಥವಾಗುತ್ತದೆ. ಇದನ್ನು ಅರ್ಥೈಸಿಕೊಳ್ಳುವಂತಹ ಕಾರ್ಯ ಶಿಕ್ಷಕರು ಮಾಡಬೇಕು ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ, ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ. ಚಲವಾದಿ, ನಿವೃತ್ತ ಉಪನ್ಯಾಸಕ ಚಂದ್ರಗೌಡ ಕುಲಕರ್ಣಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಭಾವಚಿತ್ರಕ್ಕೆ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಪಂ ಸದಸ್ಯ ಬಸನಗೌಡ ವಣಕ್ಯಾಳ ಪುಷ್ಪಹಾರ ಹಾಕಿ ಗೌರವಿಸಿದರು. ಈ ವೇಳೆ ನಿವೃತ್ತ ಹಾಗೂ ಸಾಧನೆಗೈದ ಶಿಕ್ಷಕರಿಗೆ ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸಂಗಮೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್‌.ಎಸ್‌. ಪಾಟೀಲ, ಮಾರುತಿ ಶಿಕ್ಷಣ ಸಂಸ್ಥೆ, ಬ್ರಿಲಿಯಂಟ್‌ ಸ್ಕೂಲ್‌, ಎಂ.ಆರ್‌.ಡೋಣಿ, ಬಿ.ಎಸ್‌. ಹೊಳಿ, ಸರ್ವಜ್ಞ ವಿದ್ಯಾಪೀಠದ ಸಿದ್ದನಗೌಡ ಮಂಗಳೂರ, ಎ.ಡಿ. ಗೋನಾಳ, ಆರ್‌. ಎಲ್‌. ಕೊಪ್ಪದ ಟಿ.ಎಸ್‌. ಲಮಾಣಿ ಅವರನ್ನು ಅಭಿನಂದಿಸಲಾಯಿತು.

ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ತಹಶೀಲ್ದಾರ್‌ ಎಂ.ಎ.ಎಸ್‌. ಬಾಗವಾನ, ತಾಪಂ ಇಒ ಜಿ.ಎಸ್‌. ಪಾಟೀಲ, ಬಿ.ಎಸ್‌. ಪಾಟೀಲ (ಯಾಳಗಿ), ಎಸ್‌.ಆರ್‌. ಕಟ್ಟಿಮನಿ, ಎಸ್‌.ಎಸ್‌. ಬಾಣಿ, ಬಿ.ಎಸ್‌. ನಾಡಗೌಡ, ಎಂ.ಜಿ. ಹೊಕ್ರಾಣಿ, ಕೆ.ಎಂ. ಇಬ್ರಾಹಿಂಪುರ, ಸಂತೋಷ ಚವ್ಹಾಣ, ಎಚ್‌.ಎಸ್‌. ಪಾಟೀಲ, ಸಿದ್ದನಗೌಡ ಪಾಟೀಲ ಇದ್ದರು.

ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಂ. ಬೆಳಗಲ್ಲ ಸ್ವಾಗತಿಸಿದರು. ಆನಂದ ತಳವಾರ, ಆರ್‌.ಎಸ್‌. ವಾಲೀಕಾರ ನಿರೂಪಿಸಿದರು. ಆರ್‌.ಎಂ. ಡೋಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next