Advertisement

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

10:54 PM Jan 26, 2022 | Team Udayavani |

ರಾಯಬಾಗ: ಕೋವಿಡ್‌ ಸಮಯ ದಲ್ಲಿಯೂ ರಾಜ್ಯ ಸರಕಾರ ಪರಿಶಿಷ್ಟ ಜಾತಿ-ಜನಾಂಗದ ಕಾಲೋನಿಗಳಲ್ಲಿ ರಸ್ತೆ ಸುಧಾರಣೆಗಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡ ಬೇಕೆಂದು ಶಾಸಕ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಂ. ಐಹೊಳೆ ಹೇಳಿದರು.

Advertisement

ಮಂಗಳವಾರ ಲೋಕೋಪಯೋಗಿ ಇಲಾಖೆಯಿಂದ ಎಸ್‌ಸಿಪಿ ಯೋಜನೆ ಯಡಿ ತಾಲೂಕಿನ ನಸಲಾಪುರ ಗ್ರಾಮದಿಂದ ಪ.ಜಾ.ದಾಸರ ಕಾಲೋನಿ ವರೆಗೆ 60 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ, ನಂದಿಕುರಳಿ-ನಸಲಾಪುರ ರಸ್ತೆಯಿಂದ ಪ.ಜಾ.ವಂಜೇರಿ ತೋಟದ ವರೆಗೆ 60 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ, ಕೆಂಪಟ್ಟಿ ಗ್ರಾಮದ ಪ.ಜಾ. ಕಾಲೋನಿಗೆ 20 ಲಕ್ಷ ರೂ. ವೆಚ್ಚದಲ್ಲಿ ಕೂಡುವ ರಸ್ತೆ ಸುಧಾರಣೆ, ಮೇಖಳಿ ಗ್ರಾಮದ ಪ.ಜಾ.ಕಾಲೋನಿಗೆ 17 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ರಾಯಬಾಗ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಬರುವ ದಿನಗಳಲ್ಲಿ ರಾಜ್ಯ ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಎಲ್ಲ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಸಿಬಿಕೆಎಸ್‌ಎಸ್‌ಕೆ ಅಧ್ಯಕ್ಷ ಭರತೇಶ ಬನವಣೆ, ಪೃಥ್ವಿರಾಜ ಜಾಧವ, ಅಮಿತ ಜಾಧವ, ಆರ್‌.ಕೆ.ನಿಂಗನೂರೆ, ಸಿ.ಎಸ್‌. ಕಾಂಬಳೆ, ದತ್ತಾ ಸಾವಂತ, ಶ್ರವಣ ಕಾಂಬಳೆ ಇನ್ನಿತರರಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next