Advertisement
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಕುರಿತು ಏನನ್ನಿಸುತ್ತಿದೆ ?· ಬಹಳ ಸಂತೋಷವಾಗಿದೆ. ಕಳೆದ 60 ವರ್ಷಗಳಿಂದ ಬೇಲಾಡಿಯಲ್ಲಿ ನಾಡಹಬ್ಬ ಆಯೋಜಿಸಿ ಕೊಂಡು ಸುಮಾರು 70 ಮಂದಿ ಸಾಹಿತಿ, ಶಿಕ್ಷಕರನ್ನು ಸಮ್ಮಾನಿಸಲಾಗಿದೆ. 25 ವರ್ಷಗಳ ಕಾಲ ಕಾಂತಾವರ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದೇನೆ. ಕನ್ನಡ ನಾಡು, ನುಡಿ, ಕೈಂಕರ್ಯದಲ್ಲಿ ತನ್ನಿಂದಾದ ಸೇವೆ ಸಲ್ಲಿಸಿರುತ್ತೇನೆ. ಈ ಕಾರ್ಯವನ್ನು ಗುರುತಿಸಿ ನನ್ನನ್ನು 16ನೇ ಕಾರ್ಕಳ ತಾಲೂಕು ಸಮ್ಮೇಳನ ಅಧ್ಯಕ್ಷನನ್ನಾಗಿ ಮಾಡಿರಬಹುದು.
· ಹೌದು. ಇಂದಿನ ಯುವ ಸಮುದಾಯ ಸಾಹಿತ್ಯದ ಅಭಿರುಚಿ ಹೊಂದುವುದು ಕಡಿಮೆ. ಮೊಬೈಲ್ ಬಳಕೆ ಇದಕ್ಕೊಂದು ಕಾರಣವಾಗಿರಬಹುದು. ಬೇಕಾಗಿದ್ದು, ಬೇಡದ್ದು ಎಲ್ಲವೂ ಅದರಲ್ಲಿ ಸಿಗುತ್ತಿದೆ. ನಾವು ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳು ಕವನ, ಲೇಖನಗಳನ್ನು ರಚಿಸುವ, ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಇಂದು ಇಂತಹ ಬೆಳವಣಿಗೆ ಮರೆಯಾಗುತ್ತಿದೆ. ಇದು ಅತೀವ ಬೇಸರ ಸಂಗತಿ. ಸಮ್ಮೇಳನದಿಂದ ಆಗುವ ಪ್ರಯೋಜನವೇನು ?
· ಸಾಹಿತ್ಯ ಸಮ್ಮೇಳನಗಳ ಮೂಲಕ ಸಾಹಿತ್ಯಾಸಕ್ತರನ್ನು ಒಂದು ಗೂಡಿಸುವ ಕಾರ್ಯವಾಗುತ್ತಿದೆ. ವಿಚಾರಗೋಷ್ಠಿ, ಕವನ ಸಂಕಲನ ಮೂಲಕ ಒಂದಷ್ಟು ಅರಿವು ಮೂಡಿಸುವ ಪ್ರಯತ್ನ ವಾಗುತ್ತಿದೆ. ಯುವ ಬರಹಗಾರರಿಗೆ ಇದರಿಂದ ಪ್ರೋತ್ಸಾಹ ದೊರೆಯುವುದು. ಸಮ್ಮೇಳನ ಕೇವಲ ಜಾತ್ರೆಯಾಗದೇ, ಶಿಸ್ತಬದ್ಧವಾಗಿ, ಅಚ್ಚುಕಟ್ಟಾಗಿ ನಡೆದಲ್ಲಿ ಮಾತ್ರ ಸಾರ್ಥಕ್ಯ ಕಾಣಬಹುದು.
Related Articles
· ಸಾಹಿತಿಗಳು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತ ವಾಗಿರಬೇಕು. ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು, ಎಡ- ಬಲ ಪಂಥದ ವಾದ ಮಂಡಿಸುವುದು ಸರಿಯಲ್ಲ. ಮಾಡಲು ಬೇಕಾದಷ್ಟು ಸಾಹಿತ್ಯಿಕ, ಸಾಮಾಜಿಕ ಕಾರ್ಯಗಳಿರುವಾಗ ಸಾಹಿತಿಗಳು ವಿವಾದಾತ್ಮಕ ವಿಚಾರ ಪ್ರಸ್ತಾವಿಸಿ ಮನರಂಜಿಸುವುದು ಸೂಕ್ತವಲ್ಲ.
Advertisement
ಸರಕಾರಿ ಶಾಲಾ ಶಿಕ್ಷಕರೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತಾರೆ !· ತಮ್ಮ ಮಕ್ಕಳು ಕಲೆ, ಸಾಹಿತ್ಯ, ಸಂಸ್ಕೃತಿ, ನೈತಿಕ, ಮೌಲ್ಯಯುತ ಶಿಕ್ಷಣ ಪಡೆಯಬೇಕೆಂಬ ಇಚ್ಛೆ ಶಿಕ್ಷಕರಲ್ಲಿ ಕಡಿಮೆಯಾಗುತ್ತಿದೆ. ತಮ್ಮ ಮಕ್ಕಳು ಕಡಿಮೆ ಅವಧಿಯಲ್ಲೇ ಹೆಚ್ಚು ಸಂಪಾದನೆ ಮಾಡಬೇಕು. ವಿದೇಶದಲ್ಲಿ ದುಡಿಯಬೇಕೆಂಬ ಅಪೇಕ್ಷೆಯಿಂದ ಕನ್ನಡ ಶಾಲಾ ಶಿಕ್ಷಕರು ಕೂಡ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗೆ ದಾಖಲಿಸುತ್ತಾರೆ. ಎಲ್ಲರೂ ಹೀಗೆ ಮಾಡಿದಲ್ಲಿ ಕನ್ನಡ ಉಳಿಯೋದು, ಬೆಳೆಯೋದು ಹೇಗೆ ? ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೂ ಕನ್ನಡ ಕಲಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಹೆತ್ತವರೂ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವಲ್ಲಿ ಆಸಕ್ತಿ ಹೊಂದಬೇಕು. ಸಮ್ಮೇಳನದಿಂದ ಯಾವ ಸಂದೇಶ ಸಿಗಲಿದೆ ?
ಇಂದಿನ ಮಕ್ಕಳು ಸ್ಪಷ್ಟವಾಗಿ ಕನ್ನಡ ಓದು-ಬರಹ ಕಲಿಯಬೇಕು. ಸಮ್ಮೇಳದ ಮೂಲಕ ಒಂದಷ್ಟು ಕನ್ನಡ ಕಾರ್ಯವಾಗುವುದು. ಸರ್ವರಿಗೂ ಹಿತವಾಗಿರುವುದು ಸಾಹಿತ್ಯ. ಪುರಾಣ, ರಾಮಾಯಣ, ಮಹಾಭಾರತ ಗ್ರಂಥಗಳ ಸಾರವನ್ನು ಮಕ್ಕಳಿಗೆ ತಿಳಿಹೇಳುವ ಕಾರ್ಯವಾಗಬೇಕು. ಸಮ್ಮೇಳನದ ಮೂಲಕ ಮಹಾನ್ ಸಾಧಕರ ಜೀವನ ಚರಿತ್ರೆ ಒದುವ ವಾತಾವರಣ ನಿರ್ಮಾಣವಾಗಬೇಕು. ಇದರಿಂದ ಜೀವನ ಮೌಲ್ಯ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. – ರಾಮಚಂದ್ರ ಬರೆಪ್ಪಾಡಿ