Advertisement

ಮಕ್ಕಳಿಗೆ ಅಕ್ಷರ ಕಲಿಕೆ ಜೊತೆಗೆ ಸಂಸ್ಕಾರ ಕಲಿಸಿ

08:42 PM Mar 01, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಮಕ್ಕಳಿಗೆ ಕೇವಲ ಪುಸ್ತಕದ ಅಕ್ಷರ ಕಲಿಸಿದರೆ ಸಾಲದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖೀಯಾಗಿ ಬದುಕಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಶಾಂತಲಾ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಎಂಎಂ.ಫೌಂಡೇಷನ್‌ನ ನ್ಯೂ ಸೆಂಟ್ರಲ್‌ ಇಂಗ್ಲಿಷ್‌ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ಪ್ರಪಂಚ -2020 ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಶಿಸ್ತು ಮತ್ತು ಸಂಯಮ ಕಲಿಸುವ ಓದಾರ್ಯ ಬೆಳೆಸಿಕೊಳ್ಳಬೇಕೆಂದರು.

ರಚನಾತ್ಮಕವಾಗಿ ನಡೆಯಲಿ: ಭಾಷಾ ವಿಚಾರದಲ್ಲೂ ಪೋಷಕರು ಎಚ್ಚರ ವಹಿಸಬೇಕು. ಮಗುವಿಗೆ ಕನ್ನಡ ಭಾಷೆ ಕಲಿಸಬೇಕು. ಮಾತೃ ಭಾಷೆ ಮೊದಲು ಕಲಿಸುವ ಜೊತೆಗೆ ಎಲ್ಲಾ ಭಾಷೆ ಕಲಿಸುವ ಹವ್ಯಾಸ ರೂಢಿಸಿಕೊಳ್ಳಬೇಕು. ಆಗ ಮಾತ್ರ ಪ್ರೌಢ ಶಾಲೆ ಹಂತದಿಂದಲೇ ಸತ್ಪ್ರಜೆಯಾಗಿ ರೂಪುಗೊಳ್ಳುತ್ತಾನೆ. ಶಾಲಾ ವಾರ್ಷಿಕೋತ್ಸವ ರಚನಾತ್ಮಕವಾಗಿ ನಡೆಯಬೇಕೆಂದು ಸಲಹೆ ನೀಡಿದರು.

ಅಕ್ಷತಾ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಎಸ್‌ಆರ್‌ಎಸ್‌ ವಿ.ದೇವರಾಜ್‌ ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳ ಭವಿಷ್ಯದ ಸತøಜೆಯನ್ನು ಪ್ರಾಥಮಿಕ ಹಂತದಿಂದಲೇ ನೋಡಬಹುದು. ದೇಶ ಮತ್ತು ತಾಯ್ನಾಡಿನ ಮೇಲಿನ ಪ್ರೀತಿ ಹೆಚ್ಚು ಮಾಡಿಕೊಳ್ಳುವ ಜೊತೆಗೆ ಸಮಾಜದಲ್ಲಿ ಸರಿದಾರಿಯಲ್ಲಿ ನಡೆದುಕೊಳ್ಳಲು ಶಿಕ್ಷಣ ಮುಖ್ಯ ಪ್ರೇರಣೆಯಾಗಿರಲಿದೆ ಎಂದರು.

ಪೋಷಕರು, ಶಿಕ್ಷಕರು ಚಿಕ್ಕಂದಿನಿಂದಲೇ ಮಕ್ಕಳನ್ನು ಸರಿದಾರಿಯಲ್ಲಿ ನಡೆಯಲು ಕಲಿಸಬೇಕು. ಕೇವಲ ಶಿಕ್ಷಕರು ಮಾತ್ರ ಮಕ್ಕಳ ಶಿಕ್ಷಣ ಕಲಿಸಲು ಸಾಧ್ಯವಾಗದು. ಮನೆಯೊಂದು ಮಗುವಿನ ಪಾಠ ಶಾಲೆಯಾಗಬೇಕು. ಹಾಗೆಯೇ ತಾಯಿ ಮೊದಲ ಗುರುವಾಗಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಎಂಎಂ.ಫೌಂಡೇಷನ್‌ ಕಾರ್ಯದರ್ಶಿ ಕೃಷ್ಣಮೂರ್ತಿ, ನಿರ್ದೇಶಕ ಎಂ.ಕೃಷ್ಣಪ್ಪ, ಉಪನ್ಯಾಸಕ ಎಂ.ಹಾಲಪ್ಪ, ಎಸ್‌.ಎನ್‌.ಮುರಳೀಧರ್‌, ಬಶೆಟ್ಟಿಹಳ್ಳಿ ಎಸ್‌ಎಸ್‌ಐನ ಕಾರ್ಯದರ್ಶಿ ಮಂಜುನಾಥ್‌, ಕರಾರಸಾ ಸಂಸ್ಥೆ ನಿವೃತ್ತ ತನಿಖಾಧಿಕಾರಿ ಸುಲೇಮಾನ್‌ ಪಾಷ, ಜೀಲಾನ್‌, ಸಿ.ವಿ.ವೆಂಕಟೇಶ್‌, ಸಹ ಶಿಕ್ಷಕರಾದ ಯಶಸ್ವಿನಿ, ಉಷಾ, ಮಾನ್ಯ, ಫ‌ರಹೀನ್‌ ತಾಜ್‌, ಬಿಂದ್ಯ ಭಾನುಪ್ರಿಯ, ನೃತ್ಯ ಶಿಕ್ಷಕ ರಫೀಕ್‌, ಛಾಯಾಗ್ರಾಹಕ ಮಹೇಶ್‌ ಸೇರಿದಂತೆ ನ್ಯೂ ಸೆಂಟ್ರಲ್‌ ಇಂಗ್ಲಿಷ್‌ ಸ್ಕೂಲ್‌ ಪೋಷಕರು ಇದ್ದರು.

ಮಕ್ಕಳಿಗೆ ಬಹುಮಾನ ವಿತರಣೆ: ಮಕ್ಕಳ ಪ್ರಪಂಚ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು. ಇದೇ ವೇಳೆ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಸಮಾಜ ಸೇವಕ ಎಸ್‌ಆರ್‌ಎಸ್‌ ವಿ.ದೇವರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಶಾಂತಲಾ, ಎಂಎಂ.ಫೌಂಡೇಷನ್‌ ಅದ್ಯಕ್ಷೆ ಕೆ.ಮಂಜುಳ ಮುರಳೀಧರ್‌, ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ಮಕ್ಕಳಿಗೆ ವಿತರಿಸಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next