Advertisement

ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ನಾಗರತ್ನಾ 

01:00 AM Feb 03, 2019 | Team Udayavani |

ಕಾಸರಗೋಡು: ದೇಶದ ಭವಿಷ್ಯದ ರೂವಾರಿಗಳಾದ ಮಕ್ಕಳಿಗೆ ಚಿಕ್ಕಂದಿನಿಂದಲೇ ಮನೆಯಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕು. ಆ ಮೂಲಕ ಮಕ್ಕಳನ್ನು ಸತ್ಪÅಜೆಯನ್ನಾಗಿಸಬೇಕು. ಈ ನಿಟ್ಟಿನಲ್ಲಿ ಮಾತೆಯರ ಪಾತ್ರ ಮಹತ್ವದ್ದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಕೆ.ಜಿ.ನಾಗಲಕ್ಷಿ$¾à ಬಾಯಿ ಅವರು ಹೇಳಿದರು.

Advertisement

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಶ್ರಯದಲ್ಲಿ ಕಾಸರಗೋಡು ದ್ವಾರಕ ನಗರದ ಶ್ರೀ ಕೃಷ್ಣ ಮಂದಿರದಲ್ಲಿ ಆಯೋಜಿಸಿದ “ಮಹಿಳೆಯರಿಗಾಗಿ ಅರಿವಿನ ಬೆಳಕು’ ಕಾರ್ಯಕ್ರಮವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಹೆಣ್ಮಕ್ಕಳು ದ್ವಿತೀಯ ದರ್ಜೆ ಪ್ರಜೆಯಲ್ಲ. ಹೆಣ್ಮಕ್ಕಳೇ ಪ್ರಥಮ. ದೇಶದಲ್ಲಿ ವಿದ್ಯಾವಂತರಿಂದಲೇ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಅಧಿಕ ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅವರು ಮಹಿಳೆಯರು ಕೇವಲ ಅಡುಗೆ ಕೋಣೆಗೆ ಸೀಮಿತರಾಗದೆ ಎಲ್ಲ ರಂಗಗಳಲ್ಲೂ ಸಾಧನೆಯಲ್ಲಿ ತೊಡಗಬೇಕು. ಮಹಿಳೆಯರು ಕಾನೂನು, ಸಂವಿಧಾನ    ಸಾಮಾಜಿಕ ಪ್ರಜೆಯನ್ನು ಅರಗಿಸಿಕೊಳ್ಳಬೇಕು. ಸಮಾಜದಲ್ಲಿ ಹೆಣ್ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಂದು ಅವರು ಹೇಳಿದರು.

ಅವರು ಮಹಿಳೆಯರಿಗೆ ಅರಿವು ಇಲ್ಲದಿದ್ದಲ್ಲಿ ಜೀವನವೇ ಕತ್ತಲೇ ಕೂಪಕ್ಕೆ ತಳ್ಳಲ್ಪಡುತ್ತದೆ. ಮಹಿಳೆಗೆ ಹುಟ್ಟಿನಿಂದಲೇ ಸಂಸ್ಕಾರದ ಅರಿವು ಬರುತ್ತಿರುವುದರಿಂದಲೇ ಕುಟುಂಬ ವ್ಯವಸ್ಥೆ ಗಟ್ಟಿಯಾಗಿದೆ. ತಾಯಿ ಇಲ್ಲದಿದ್ದಲ್ಲಿ ಮಕ್ಕಳಿಲ್ಲ. ಜಗತ್ತಿಲ್ಲ. ಅಂತಹ ಮಾತೆಯನ್ನು ಗೌರವಿಸುವುದು ರೂಢಿಸಿಕೊಳ್ಳಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ  “ಮಹಿಳೆಯರಿಗಾಗಿ ಅರಿವಿನ ಬೆಳಕು’ ಎಂಬ ಕುರಿತಾಗಿ ಡಾ|ಸ್ವಪ್ನಾ ಜಯಗೋವಿಂದ ಉಕ್ಕಿನಡ್ಕ ಅವರು ಮಾತನಾಡಿದರು. ಮೀನಾಕ್ಷಿ ಕಾಮತ್‌ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ನೃತ್ಯ ಶಿಕ್ಷಕಿ ಸಿಂಧು ಭಾಸ್ಕರ, ಮಮತಾ ಆಚಾರ್ಯ, ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿ ಬಿಂದುದಾಸ್‌, ಕ್ರೀಡಾ ಪ್ರತಿಭೆ ವೀಕ್ಷಿತಾ, ಸಂಗೀತ ಕಲಾವಿದೆ ಅಪೇಕ್ಷಾ ಪೈ, ಮೇಘನಾ ಬಜಕೂಡ್ಲು, ಅಭಿನವಿ ಹೊಳ್ಳ, ಕ್ರೀಡಾಪಟು ದಿವ್ಯಾ, ರಾಜೀವಿ ಸುಳ್ಯ, ದಿವ್ಯಾ ಬದಿಯಡ್ಕ, ತೇಜ ಕುಮಾರಿ, ಸಮಾಜ ಸೇವಕಿ ರತ್ನಮಾಲ ಮೊದಲಾದವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಗುಂಗಿನಿಂದ ಹೊರಬರಬೇಕು
 ದೃಶ್ಯ ಮಾಧ್ಯಮ ಟಿ.ವಿ. ಸೀರಿಯಲ್‌ ಚಟಕ್ಕೆ ಬಿದ್ದರೆ ಕುಟುಂಬದ ಗತಿ ಅಧೋಗತಿ. ಸೀರಿಯಲ್‌ ಗುಂಗಿನಿಂದ ಹೊರಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಟಿ.ವಿ. ಸೀರಿಯಲ್‌ಗ‌ಳಿಗೆ ಬಲಿಯಾಗದೆ ಉತ್ತಮ ಕಾರ್ಯಕ್ರಮಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಬೇಕು
-ನಾಗಲಕ್ಷಿ ಬಾಯಿ,  ಮಹಿಳಾ ಆಯೋಗ ಅಧ್ಯಕ್ಷೆ

ಎಲ್ಲರೂ ಮಹಾಪುರುಷರಾಗಲ್ಲ
 ಜೀವನದಲ್ಲಿ  ಶಿಸ್ತು ಬದ್ಧ ಕ್ರಮ,ಸಂಪ್ರದಾಯಗಳಿವೆ.ಅದನ್ನು  ಬದಲಾದ ಕಾಲಘಟ್ಟದಲ್ಲಿ ಹೊಂದಾಣಿಕೆ ಯೊಂದಿಗೆ ಅವುಗಳನ್ನು ಅನುÓರಿ‌ಸುವ ಅಗತ್ಯ ವಿದೆ. ಪರಸ್ಪರ ಪ್ರೀತಿ ವಿಶ್ವಾಸ,ಒಗ್ಗಟ್ಟು ಗಳಿಂದ ಸುಶಿಕ್ಷಿತ ಸಮಾಜಕಟ್ಟುವ ಹೊಣೆಗಾರಿಕೆಯಲ್ಲಿ ಮಹಿಳೆ ಪಾಲುಪಡೆದಾಗ ಯಶ‌ಸ್ಸು ಸಾಧಿಸಲು ಸಾಧ್ಯ.ಜವಾಬಾœರಿ ಎಲ್ಲರಿಗೂ ಇದೆ ಎಲ್ಲರಿಗೂ ಮಹಾ ಪುರುಷರಾಗಲು ಸಾಧ್ಯವಿಲ್ಲ,ಆದರೆ ಮಾನವೀಯತೆಯಿಂದ ಮನುಷ್ಯರಾಗಿ ಬಾಳ ಬಹುದು. 
– ಡಾ| ಸ್ವಪ್ನಾ ಜಯಗೋವಿಂದ

Advertisement

Udayavani is now on Telegram. Click here to join our channel and stay updated with the latest news.

Next