Advertisement

ಶೀಘ್ರ ನ್ಯಾಯಕ್ಕಾಗಿ ತ್ವರಿತ ವಿಚಾರಣಾ ನ್ಯಾಯಾಲಯವನ್ನುತುರ್ತಾಗಿ ರಚಿಸುವ ಅಗತ್ಯವಿದಯೇ?

04:52 PM Dec 07, 2019 | keerthan |

ಮಣಿಪಾಲ: ಅತ್ಯಾಚಾರ ಪ್ರಕರಣಗಳಲ್ಲಿ ಶೀಘ್ರ ನ್ಯಾಯಕ್ಕಾಗಿ ತ್ವರಿತ ವಿಚಾರಣಾ ನ್ಯಾಯಾಲಯವನ್ನು ತುರ್ತಾಗಿ ರಚಿಸಲು ಕ್ರಮ ಕೈಗೊಳ್ಳಬೇಕಾಗಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಉತ್ತರಗಳು ಇಲ್ಲಿವೆ.

Advertisement

ಸಣ್ಣಮಾರಪ್ಪ. ಚಂಗಾವರ: ಇಂತಹ ಪ್ರಕರಣಗಳು ವಿಳಂಬವಾಗುವುದರಿಂದ ನ್ಯಾಯಾಲಯದ ಸಮಯ, ಹಣ ವ್ಯರ್ಥವಾಗುತ್ತಿದೆ. ಅಲ್ಲದೆ ಸಾಕ್ಷಿಗಳನ್ನು ತಿರುಚಬಹುದು. ಇವುಗಳನ್ನೆಲ್ಲಾ ನಿಯಂತ್ರಿಸಲು ತ್ವರಿತ ಗತಿಯಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ.

ವಿನಯ್ ಸಿಜಿ: ಹೌದು, ಜಾಸ್ತಿ ದಿನ ನೂಕಬಾರದು ತೀರ್ಪುಗಳು ಬೇಗ ಬರಬೇಕು. ಇಂತಹ ಪ್ರಕರನಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಲೇಬಾರದು.

ರಾಜೇಶ್ ಅಂಚನ್ ಎಂಬಿ: ಖಂಡಿತಾ ತ್ವರಿತ ನ್ಯಾಯಾಲಯಗಳ ಅಗತ್ಯ ಬಹಳ ಇದೆ. ಪ್ರತಿದಿನ ಎಲ್ಲಿ ನೋಡಿದರೂ ಅತ್ಯಾಚಾರ ಪ್ರಕರಣಗಳು ವಿಪರೀತ ಅನ್ನೋ ಮಟ್ಟ ತಲುಪಿವೆ. ಇಂತಹ ಪ್ರಕರಣಗಳನ್ನು ಅನಗತ್ಯವಾಗಿ ವಿಳಂಬ ಮಾಡೋದರಿಂದಲೇ ಮತ್ತಷ್ಟು ಅಪರಾಧಗಳು ನಡೆಯುತ್ತಿವೆ. ಅಷ್ಟೇ ಅಲ್ಲದೆ ಗಲ್ಲು ಶಿಕ್ಷೆಯ ವಿಧಾನ ಬಹಳ ಹಳೆಯ ಪದ್ಧತಿಯಲ್ಲಿದ್ದು ಅದನ್ನು ಬದಲಾಯಿಸಿ ಶೀಘ್ರ ಶಿಕ್ಷೆ ಜಾರಿಗೊಳಿಸುವಂತಹ ಪದ್ದತಿ ಜಾರಿಗೆ ತರಬೇಕು. ಯಾವುದೇ ಕ್ಷಮಾದಾನಕ್ಕೆ ಅವಕಾಶವಿಲ್ಲದೆ ಗಲ್ಲುಶಿಕ್ಷೆ ವಿಧಿಸುವುದರಿಂದ ಈ ರೀತಿಯ ಅಪರಾಧಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು.

ಮಂಜುನಾಥ್ ಕಾಡಜಿ: ನಿಜವಾಗಲೂ ಪ್ರಸ್ತುತ ಸಂದರ್ಭದಲ್ಲಿ ಅತಿ ಅವಶ್ಯವಾಗಿ ರಚನೆ ಮಾಡಬೇಕಾಗಿರುವುದು ಸರ್ಕಾರದ ಪ್ರಮುಖ ಕಾರ್ಯಸೂಚಿಯಾಗಬೇಕು.ಇದರಿಂದ ನೊಂದ ಜೀವಗಳಿಗೆ ಶೀಘ್ರದಲ್ಲಿ ನ್ಯಾಯ ಸಿಗುವ ವಿಶ್ವಾಸ ಮೂಡುತ್ತದೆ.ಕೇಂದ್ರ ಸರ್ಕಾರ ಕೂಡಲೆ ತುರ್ತು ನ್ಯಾಯಾಲಯವನ್ನು ಸ್ಥಾಪನೆ ಮಾಡಬೇಕು…

Advertisement

ಸಂತೋಷ್ ಎಚ್ ಡಿಸೋಜಾ: ನ್ಯಾಯಾಲಯವು ತ್ವರಿತವಾಗಿ ವಿಚಾರಣೆ ಮಾಡಿ ಗಲ್ಲು ಶಿಕ್ಷೆ ವಿಧಿಸಿದರೂ ಮುಂದೆ ರಾಷ್ಟ್ರಪತಿಗಳು ಕೂಡ ಅಷ್ಟೇ ವೇಗವಾಗಿ ಕ್ಷಮಾದಾನ ಅರ್ಜಿಯನ್ನು ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ನ್ಯಾಯಾಲವು ಶಿಕ್ಷೆ ಕೊಟ್ಟು ಏನು ಪ್ರಯೋಜನ?ನಿರ್ಭಯಾ ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದರೂ ಕ್ಷಮಾದಾನ ಅರ್ಜಿ ಇನ್ನೂ ರಾಷ್ಟ್ರಪತಿಗಳ ಬಳಿ ಕೊಳೆಯುತ್ತಾ ಇದೆ.

ಗಿರೀಶ್ ಗೌಡ ವಿ: ಖಂಡಿತವಾಗಿಯೂ ಹೌದು. ದೇಶದಾದ್ಯಂತ ನಡೆಯುವ ಘೋರಾತಿಘೋರ ಘಟನೆಗಳನ್ನು ಈ ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ ಸಾಧ್ಯವಾದಷ್ಟು ಬೇಗ ನ್ಯಾಯ ಸಿಗುವಂತೆ ಮಾಡಬೇಕು. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ತೀರ್ಪು ಹೊರಹೊಮ್ಮಿದರೆ ಸೂಕ್ತ.

ವೀರೇಶ್ ಮುಗದುರ್: ನ್ಯಾಯಾಲಯದ ಅವಶ್ಯಕತೆ ಇಲ್ಲ, ವಿಪಿ ಸಜ್ಜನರಂತ ಪೊಲೀಸ ಅಧಿಕಾರಿಗಳ ನೇಮಕಾತಿ ಅವಶ್ಯಕತೆ ಇದೆ

Advertisement

Udayavani is now on Telegram. Click here to join our channel and stay updated with the latest news.

Next