ಮಣಿಪಾಲ: ಜೆ.ಎನ್.ಯು. ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಗೂಂಡಾವರ್ತನೆಗೆ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆಯ ವೈಫಲ್ಯವೇ ಕಾರಣವೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಉತ್ತರಗಳು ಇಲ್ಲಿವೆ.
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಭದ್ರತಾ ವೈಫಲ್ಯ ಕಾರಣವಲ್ಲ. ಅಲ್ಲಿಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ದಾಖಲಾಗ್ತಾ ಇಲ್ಲ. ಅವರ ಉದ್ದೇಶ ಕೊಳಕು ರಾಜಕೀಯ ಮಾಡೋದು. ಅವರುಗಳನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ. ಅಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಸಿದ್ದಾಂತ ಎಲ್ಲೇ ಮೀರಿ ದೇಶದ ವಿರುದ್ಧ ಚಟುವಟಿಕೆ ನಡೆಸಲು ಆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಕೂಡಲೇ ಆ ಯೂನಿವರ್ಸಿಟಿ ಯನ್ನು ಕೆಲ ವರ್ಷಗಳ ಮಟ್ಟಿಗೆ ಮುಚ್ಚಿ. ಅದಕ್ಕೆ ಹೊಸ ಕಾಯ ಕಲ್ಪ ಕೊಟ್ಟು ಪುನಾರಾರಂಭಿಸಬೇಕು. ಇಲ್ಲವಾದಲ್ಲಿ ಆ ಯೂನಿವರ್ಸಿಟಿ ದೇಶದ್ರೋಹಿ ಕೇಂದ್ರವಾಗಿ ಬದಲಾಗೋದು ಖಂಡಿತ.
ಚನ್ನಬಸವ ಮಾಲಿ ಪಾಟೀಲ್: ವಾರಕ್ಕೋಂದು ರೌಂಡು ಬೀಳ್ತಾನೆ ಇರಬೇಕು. ಹಾಗಾದರೆ ಮಾತ್ರ ಸರಿಹೋಗುತ್ತವೆ. ಇವರು ಓದೋಕೆ ಬರುತ್ತಿಲ್ಲ ರಾಜಕೀಯ ಮಾಡಿಕೆ ಬರುತ್ತಿದ್ದಾರೆ,
ನಾರಾಯಣ ದೇವಾಡಿಗ ಎಂ ಎಚ್: ಪೋಲಿಸ್ ಒಳಗಡೆ ಹೋದರೆ ಅವರಿಗೆ ಶಾಲೆ ಒಳಗೆ ಏನು ಕೆಲಸ ಅಂತ ಕೇಳುತ್ತಾರೆ. ಹೊರಗಡೆ ಇದ್ದರೆ ಒಳಗೆ ಏಕೆ ಬರಲಿಲ್ಲ ಅಂತ ಕೇಳುತ್ತಾರೆ. ಒಟ್ಟಾರೆ ಜೆ ಎನ್ ಯು ವಿದ್ಯಾಲಯ ಇಂದು ಇಡೀ ದೇಶಕ್ಕೆ ಕಳಂಕಪ್ರಾಯಗಿದೆ. ಈ ವಿದ್ಯಾಲಯದಲ್ಲಿ ನೆಡೆಯುವ ಹೊಲಸು ರಾಜಕೀಯ ಕೆರೆಚಾಟಗಳು, ಅನ್ಯೆತಿಕ ಚಟುವಟಿಕೆಗಳು ಬೇರೆ ವಿದ್ಯಾಲಯಕ್ಕೂ ಪಸರಿಸಬಹುದು. ಅಲ್ಲಿ ಓದುವ ವಿಧ್ಯಾರ್ಥಿಗಳು ಹೆಚ್ಚಿನವರು ಸಾಂಕ್ರಾಮಿಕ ರೋಗಿಗಳಿದ್ದ ಹಾಗೆ. ಹಾಗಾಗಿ ಆ ರೋಗಿಗಳಿಗೂ ಹಾಗೂ ಆ ರೋಗದ ಕೇಂದ್ರಕ್ಕೂ, ದೆಹಲಿ ಸರಕಾರ ಎಚ್ಚೆತ್ತುಕೊಂಡು ಸರಿಯಾದ ತುರ್ತು ಚಿಕಿತ್ಸೆ ನೀಡಬೇಕಾಗಿದೆ.
ರಾಘವೇಂದ್ರ ಭಟ್: JNU ಒಂದು ಲೆಫ್ಟಿಸ್ಟ್ ದೇಶದ್ರೋಹಿಗಳ ತಾಣ. ಅದನ್ನು ಮುಚ್ಚಬೇಕು. ಮುಸ್ಲಿಂ ಧರ್ಮದ ಜನರು ನಮ್ಮ ಸಮಾಜದ ಮತ್ತು ದೇಶದ ಮುಖ್ಯ ಭಾಗ. ಅವರನ್ನು ನಾವು ಒಪ್ಪಿಕೊಂಡಿದ್ದೇವೆ. ಭೇದ ಮಾಡಿ ರಾಜಕೀಯ ದುರುದ್ದೇಶದಿಂದ ಹೋರಾಡುತ್ತಿರುವವರು ಅರ್ಥಮಾಡಿಕೊಳ್ಳಿ.