ಮಣಿಪಾಲ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಲಿರುವ ರಾಜ್ಯ ಬಜೆಟ್ ಬಗ್ಗೆ ನಿಮ್ಮ ನಿರೀಕ್ಷೆಗಳೇನು?ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ
ವೀರೇಶ್ ಕೆ:ಉತ್ತರ ಕರ್ನಾಟಕದಲ್ಲಿ ಇನ್ನೂ ಮೂರು ಡ್ಯಾಂ ಕಟ್ಟಬೇಕು ಸಂಡೂರಿನಲ್ಲಿ ಗಣಿಗಾರಿಕೆ ಸಂಪೂರ್ಣವಾಗಿ ಬಂದ್ ಮಾಡಬೇಕು.
ಕೃಷ್ಣ ಜೋಶಿ: ಅನವಶ್ಯಕ. ವೆಚ್ಚ ಹಾಗೂ ಕೆಳಗಿನಿಂದ ಮೇಲ್ಮಟ್ಟದ ವರೆಗೆ ಆಗುತ್ತಿರುವ. ಲಂಚಗುಳಿತನ ಬಂದ ಆಗುವವರೆಗೆ ಅದು ಬಜೆಟ್. ಅಲ್ಲ. ಸುಳ್ಳು ಆದಾಯ ಹಾಗೂ ಸುಳ್ಳು ವೆಚ್ಚ ಇವುಗಳನ್ನೇ ಬಜೆಟ್ ಎಂದು ಪಂಡಿತರು ಪ್ರತಿ ವರ್ಷ. ಹೇಳುತ್ತಿದ್ದಾರೆ. ಬಜೆಟ್ ವಿವರ ಯಾರಿಗೂ ಅರ್ಥವಾಗುವದಿಲ್ಲ. ಏಕೆಂದರೆ. ಆಡಳಿತ ಪಕ್ಷ ಹಾಗೂ ಬೆಂಬಲಿಗರು ಉತ್ತಮ ಬಜೆಟ್ ಅನ್ನುತ್ತಾರೆ.. ವಿರೋಧಿಗಳು ಕಚಡಾ ಅನ್ನುತ್ತಾರೆ. ಯಾರಿಗೂ ಸರಿಯಾಗಿ ಪರಾಮರ್ಶಿಸಲು ಬರುವದಿಲ್ಲ
ವಿನಯ್ ಸಿಜಿ: ಬಜೆಟ್ ಕೇವಲ ಬೆಂಗಳೂರು ಹಾಗು ಕೆಲವೊಂದು ಶಾಸಕರ ಕ್ಷೇತ್ರಗಳಿಗೆ ಮಾತ್ರವೇ ಹೊರತು ಕರಾವಳಿಗರು ಅದರಲ್ಲೂ ಪ್ರತ್ಯೇಕವಾಗಿ ದ .ಕನ್ನಡ ಜಿಲ್ಲೆಯವರು ಏನನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಹಿಂದೆ ಇದ್ದ ಯಾವುದೇ ಸರ್ಕಾರ ಬಜೆಟ್ನಲ್ಲಿ ಯಾವುದೇ ಅನುದಾನ ದಕ್ಷಿಣ ಕನ್ನಡ ಜಿಲ್ಲೆಗೆ ಘೋಷಿಸಿಯೇ ಇಲ್ಲ! ಅದೂ ಅಲ್ಲದೇ ಈಗ ಆರ್ಥಿಕ ಹಿಂಜರಿತ ಇರುವುದರಿಂದ ನಮ್ಮ ನಿರೀಕ್ಷೆ ಕೇವಲ ಒಂದು ದೊಡ್ಡ ಸೊನ್ನೆ ಮಾತ್ರ.
ಪ್ರಣೀತ್ ಶೆಟ್ಟಿ ಶೆಟ್ಟಿ: ಭೂ ಅಡಮಾನ ಸಾಲದ ಬಡ್ಡಿ ಮನ್ನ ಮಾಡುವ ನಿರೀಕ್ಷೆ ಇದೆ. ಇದರಿಂದ ರೈತರಿಗೆ ಸಹಾಯ ಆಗುತ್ತದೆ.