Advertisement

ಸ್ವಘೋಷಿತ ದೇವಮಾನವ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಗುಪ್ತಚರ ವಿಭಾಗದ ವೈಫಲ್ಯವೇ ಕಾರಣವೇ ?

04:56 PM Dec 05, 2019 | keerthan |

ಮಣಿಪಾಲ: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಭಾರತ ಬಿಟ್ಟು ಪರಾರಿಯಾಗಲು ಗುಪ್ತಚರ ವಿಭಾಗದ ವೈಫಲ್ಯವೇ ಕಾರಣವೇ ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿದೆ.

Advertisement

ಸಣ್ಣಮಾರಪ್ಪ. ಚಂಗಾವರ; ಗುಪ್ತಚರ ಇಲಾಖೆ ವೈಫಲ್ಯವಲ್ಲ ನಿರ್ಲಕ್ಷ್ಯ. ಇದು ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಇದೆ. ಇದರ ಜೊತೆಗೆ ಇಂತಹ ಘಟನೆಗಳಲ್ಲಿ ರಾಜಕೀಯವೆಂಬ ಕೆಟ್ಟ ಆಡಳಿತವೂ ಎದ್ದು ಕಾಣುತ್ತಿದೆ. ಒಟ್ಟಾರೆ ದೇಶದಲ್ಲಿ ಸಾಮಾನ್ಯನಿಗೆ ಮತ್ತು ಹಣವಂತರಿಗೆ ಬೇರೆ ಬೇರೆ ರೀತಿಯ ಕಾನೂನುಗಳು ಇರುವಂತೆ ಇದೆ.

ರಾಕಿ ಉಡುಪಿ: ಹಣ ಇದ್ದರೆ ನಮ್ಮ ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಆಡಳಿತ ಯಾರು ಬೇಕಾದರೂ ಮಾಡಲಿ ಎಲ್ಲಾ ಪಕ್ಷಗಳು ಒಂದೇ ಬಡವನಿಗೆ ಮಾತ್ರ ಈ ದೇಶದಲ್ಲಿ ಕಾನೂನು, ಪೊಲೀಸ್, ಶಿಕ್ಷೆ.

ನಟರಾಜನ್ ಸುರೇಶ್: ನಮ್ಮಲ್ಲಿ ಎಲ್ಲಾ ಇಲಾಖೆಗಳು ಮೋದಿ ಅಮಿತ್ ಷಾ ಅಡಿಯಲ್ಲಿ ಕೆಲಸ ಮಾಡುತ್ತಿವೆ..ಕಾನೂನುನಿನ ಅಡಿಯಲ್ಲಿ ಅಲ್ಲ..

ಅರ್ಕಲ್ ಗೋವಿಂದ್ ಶೆಣೈ: ಹೋಗಲಿ ಬಿಡಿ. ದೇಶಕ್ಕೇ ಭಾರವಾದ ಇಂತಹ ಹಲವಾರು ವ್ಯಕ್ತಿಗಳು ಇನ್ನೂ ದೇಶದಲ್ಲಿ ಇದ್ದಾರೆ. ಎಲ್ಲರನ್ನೂ ಅವರಷ್ಟಕ್ಕೆ ಹೋಗಲು ಬಿಡಿ, ದೇಶ ಉದ್ಧಾರವಾಗ್ತದೆ.

Advertisement

ರಾಜೇಶ್ ಅಂಚನ್ : ಇಲ್ಲಿ ಗುಪ್ತಚರ ಇಲಾಖೆಯ ವೈಫಲ್ಯದ ಪ್ರಶ್ನೆ ಉದ್ಭವಿಸೋದಿಲ್ಲ. ಕಾರಣ ನಿತ್ಯಾನಂದ ಅಂತಹ ದೊಡ್ಡ ಮೊಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರಲಿಲ್ಲ. ಸರ್ಕಾರ ಎಲ್ಲರ ಮೇಲೂ ಕಣ್ಣಿಡೋದು ಅಸಾಧ್ಯ. ಅಷ್ಟಕ್ಕೂ ಆತನನ್ನು ಮತ್ತೆ ಭಾರತಕ್ಕೆ ವಾಪಾಸು ಕರೆತರೋದು ದೊಡ್ಡ ವಿಷಯವಲ್ಲ. ಸರಕಾರ ಆದಷ್ಟು ಶೀಘ್ರ ವಾಗಿ ಆತನನ್ನು ಕರೆತರಲಿದೆ.

ರಾಮಕೃಷ್ಣ ಪೈ: ಯಾರನ್ನೂ ದೂರಿ ಪ್ರಯೋಜನವಿಲ್ಲ. ಕಾನೂನಿನ ಕೊಂಡಿಯಿಂದ ಕಳಚಲು ಕ್ರಿಮಿನಲ್ಗಳಿಗೆ ಭಾರತದಲ್ಲಿ ಸಾಕಷ್ಟು ಸಾಧ್ಯತೆಗಳಿವೆ. ಕ್ರಿಮಿನಲ್ ಎಂದು ಸಾಬೀತಾಗುವ ವೇಳೆಗೆ ಹಲವು ದಶಕಗಳೇ ಕಳೆಯುತ್ತವೆ. ಸೋನಿಯಾ ರಾಹುಲ್ ಗಾಂಧಿಯಂತಹವರು ಕೂಡ ಇದಕ್ಕೆ ಹೊರಯಲ್ಲ

ರಮೇಶ್ ತಿಂಗಳಾಯ: ಕಪ್ಪು ಹಣ ಬರುತ್ತೆ ಅಂತ ಹೇಳಿ ಕಪ್ಪು ಕುಳಗಳನ್ನು ಹೊರದೇಶಕ್ಕೆ ಕಳುಹಿಸುತ್ತಿದೆ ರಾಜಕೀಯ ತಮ್ಮ ಒಳ ಒಪ್ಪಂದ ಎಲ್ಲಿ ಬಯಲಾಗುತ್ತೆ ಅನ್ನೊದರ ಒಳಗುಟ್ಟಿದು.ಇದರಲ್ಲಿ ಎಲ್ಲರು ಸಮಾನರು. ಆಮೇಲೆ ಇದ್ದ ಇಲಾಕೆಗಳ ಮೇಲೆ ಈ ಮಾಧ್ಯಮದ ಮೂಲಕ ಗೂಬೆ ಕೂರಿಸೋದು.

Advertisement

Udayavani is now on Telegram. Click here to join our channel and stay updated with the latest news.

Next