Advertisement

ಟೀವಿ ಚಾನೆಲ್ ಗಳ ದರ ಇಳಿಸಲು ಟ್ರಾಯ್ ತಂದ ಹೊಸ ನಿಯಮ ಗ್ರಾಹಕರಿಗೆ ಅನುಕೂಲವಾಗಲಿದೆಯೇ ?

04:57 PM Jan 05, 2020 | keerthan |

ಮಣಿಪಾಲ: ಟೀವಿ ಚಾನೆಲ್ (ಡಿಟಿಎಚ್ ಕೇಬಲ್) ಗಳ ದರ ಇಳಿಸಲು ಟ್ರಾಯ್ ತಂದ ಹೊಸ ನಿಯಮ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

Advertisement

ಮಧುಕುಮಾರ್ ಬಿಳಿಚೋಡು: ಖಂಡಿತವಾಗಿಯೂ ಟ್ರಾಯ್ ನ ನೀತಿ ನಿಯಮಗಳು ಗ್ರಾಹಕರಿಗೆ ಸರಿಯಾಗಿ ತಿಳಿದಿದ್ದರೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ದರ ಇಳಿದರೂ ಇಳಿಯದಿದ್ದರೂ ಕೆಲವು ಖಾಸಗಿ ಏಜಿನ್ಸಿಗಳು ಇದನ್ನೇ ಬಂಡವಾಳ ಮಾಡಿ ಕೊಂಡು ದುಡ್ಡು ಮಾಡುವುದಂತೂ ಗ್ಯಾರಂಟಿ ಹಾಗಾಗಿ ಗ್ರಾಮೀಣ ಭಾಗದ ಜನರಿಗೆ ಟ್ರಾಯ್ ನ ಅನುಕೂಲ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯತೆ ಇದೆ.

ಮೌಂಟ್ ಉಮಾಪತಿ ಕೆ ಎಲ್: ಇಲ್ಲಾ, ನಾವಂತೂ 10 ತಿಂಗಳಿನಿಂದ ಟಿವಿ ನೋಡುವುದು ನಿಲ್ಲಿಸಿದ್ದೇವೆ ಹಾಗೆಯೇ ಕಣ್ತುಂಬಾ ನಿದ್ದೆ ಮಾಡುತ್ತಿದ್ದೇವೆ. ಮೊದಲಿನ ದರದಂತೆ ತಿಂಗಳಿಗೆ 300 ರೂ ಉಳಿಯುತ್ತಿದೆ ಅದನ್ನೇ ಊಟಕ್ಕೆ ಬಳಸಿಕೊಳ್ಳುತ್ತೇವೆ.

ದಿನೇಶ್ ದಿನ್ನು: ಹೆಚ್ಚೆಂದರೆ 25 ರೂಪಾಯಿ ಉಳಿಬಹುದು ಅದು 100 ಕ್ಕಿಂತ ಹೆಚ್ಚು ಚಾನೆಲ್ ಬಳಸುವವರಿಗೆ ಮಾತ್ರ

ಅರವಿಂದ ಬೆಲಗಲಿ: ಮೊದಲನೆ ಸಲ ಜಾರಿ ಆದಾಗ ಬಹಳ ಖುಷಿ ಪಟ್ಟಿದ್ದೇವು ಆದರೆ ಹಾಗಾಗಲಿಲ್ಲ. 500 ಇದ್ದದ್ದು 700 ಆಯಿತು. ಮತ್ತೆ ಹೊಸ ನಿಯಮ ಜಾರಿಗೆ ಬಂದ ನಂತರ ನೋಡಬೇಕು.

Advertisement

ಮಾರುತಿ ಗಲಟಗಿ: ಸಂತೋಷ, ಇನ್ನೂ ಒಂದು ಹೆಜ್ಜೆ ಮುಂದೆ ಹೂಗಿ ನಾವೂ ಯಾವ ಚಾಲನ,ಎಷ್ಟು ಸಮಯದವರೆಗೆ ನೂಡುತ್ತೇವೂ ಅಸ್ಟು ಮಾತ್ರ ಬಿಲ್ಲು ತುಂಬ ಬೇಕು “ಉದಾಹರಣೆಗೆ” ಮೂಬಾಯಿಲ ತರಹ ಅನಾವಶ್ಯಕ ಚನಲಗಳ ಕಿರಿ ಕಿರಿಯಿಂದ ಗ್ರಾಹಕರಿಗೆ ಆಗುವ ತೂಂದರೇಯಿಂದ ತಪ್ಪಿಸ ಭಹುದು

ಬಸು ಅಂಗಡಿ: ಹೊಸ ನಿಯಮದ ಪ್ರಕಾರ 153 ರೂ. ಗ್ರಾಹಕ ಪಾವತಿಸಿದರೆ ಇನ್ನೂರು ಚಾನಲ್ ಕೋಡ್ತಾರಂತೆ. ಆದರೆ ಗ್ರಾಹಕನಿಗೆ ಬೇಕಾದ ಒಂದೇ ಒಂದು ಚಾನಲ್ ಕೂಡಾ ಬರೋದಿಲ್ಲಾ. ಮತ್ತೆ ದುಡ್ಡುಕೊಟ್ಟೆ ನೋಡಬೇಕು

Advertisement

Udayavani is now on Telegram. Click here to join our channel and stay updated with the latest news.

Next