ಮಣಿಪಾಲ: ಇರಾನ್ ಮೇಲೆ ಅಮೆರಿಕಾ ದಾಳಿಯ ಪರಿಣಾಮ ಜಾಗತಿಕ ಮತ್ತು ಭಾರತೀಯ ತೈಲ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಬಹುದೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಕೆಲವು ಇಲ್ಲಿದೆ.
ದಾವೂದ್ ಕೂರ್ಗ್: ಯಾರನ್ನ ಕೇಳ್ತಾ ಇದ್ದೀರಾ.. ಭಕ್ತರ ಪ್ರಕಾರ ವಾದರೆ ಮೋದಿ ಎಲ್ಲಾ ಸರಿಮಾಡ್ತಾರೆ.. ಸಾಮಾನ್ಯ ಭಾರತೀಯನ ರೀತಿ ಯೋಚಿಸಿದ್ರೆ ಖಂಡಿತ ಪರಿಣಾಮ ಬೀರುತ್ತೆ.
ಸೂರಿ ಸುರೇಶ್: ಖಂಡಿತಾ ಆಗ್ತದೆ. ತೈಲ ಬಳಕೆಯಲ್ಲಿ ನಮ್ಮ ಭಾರತ ದೇಶ ಮುಂದೆ ಇದೆ. ದರ ಹೆಚ್ಚು ಮಾಡಿ ಇರಾನ್ ತನ್ನ ನಷ್ಟವನ್ನು ಬರಿಸಿಕೊಳ್ಳುತ್ತೆ. ನಮ್ಮ ಕೇಂದ್ರ ಸರಕಾರ ಇನ್ನೂ ಅದರ ಮೇಲೆ ಸ್ವಲ್ಪ ತೈಲ ಬೆಲೆ ಹೆಚ್ಚು ಮಾಡಿಕೊಂಡು ಜೇಬು ತುಂಬಿಸಿ ಕೊಳ್ಳುತ್ತೆ. ಒಳ್ಳೇ ಚಾನ್ಸ್ ಕೇಂದ್ರ ಸರಕಾರಕ್ಕೆ ಕಲ್ಲನಿಗೊಂದು ಪಿಳ್ಳೆ ನೇವ.
ಪ್ರವೀಣ್ ಕುಮಾರ್: ಅಂತರ್ ರಾಷ್ಟ್ರೀಯ ಮಾರುಕಟ್ಟೆ ಪೆಟ್ರೋಲ್ ಕಡಿಮೆ ಇದ್ದಾಗಲೇ ಕೊಳ್ಳೆ ಹೊಡೆದ ಸರ್ಕಾರ ಇದು ಇನ್ನೂ ದುಬಾರಿ ಆದ್ರೆ ಬಿಡ್ತಾರಾ ನೋಡಿ 150ರೂಪಾಯಿ ಆಗುತ್ತೆ ಲೀಟರ್ ಪೆಟ್ರೋಲ್
ಉದಯ್ ಶೆಟ್ಟಿ: ಹೌದು. ಭಾರತಕ್ಕೆ ಬರುವ ಎಲ್ಲಾ ಹಡಗುಗಳು ಇದೇ ದಾರಿಯಲ್ಲಿ ಸಾಗಬೇಕು. ವಿಶ್ವದ 70% ತೈಲ ಗಲ್ಫ್ ದೇಶಗಳಿಂದ ಬರುತ್ತದೆ. ಏಶ್ಯನ್ ದೇಶಗಳ ಆರ್ಥಿಕತೆಗೆ ಇದು ಪರಿಣಾಮ ಬೀರಲಿದೆ.