Advertisement
ಶ್ರೀಧರ್ ಉಡುಪ: ಸಾರ್ವಜನಿಕ ಆಸ್ತಿ ನಾಶ ಮಾಡುವ ದುಷ್ಕರ್ಮಿಗಳಿಗೆ ಶಿಕ್ಷೆ ವ ದಂಡವನ್ನು ವಿಧಿಸುವುದರೂಂದಿಗೆ ನಷ್ಟ ಪರಿಹಾರಕ್ಕಾಗಿ ತಪ್ಪಿಸ್ಥತ್ತರ ಆಸ್ತಿ ಜಪ್ತಿಯನ್ನು ಮಾಡಿದರೆ ಅಪರಾಧ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.ಆದರೆ ಈ ವಿಷಯದಲ್ಲಿ ನಿರಪರಾಧಿಗಳಿಗೆ ಶಿಕ್ಷೆಯಾಗದಂತೆ ಸೂಕ್ತ ರೀತಿಯಲ್ಲಿ ಕಾನೂನು ಜಾರಿಯ ಹೊಣೆ ಸರಕಾರ ಹಾಗೂ ನ್ಯಾಯಾಂಗದ ಮೇಲೆ ಇದೆ.
Related Articles
Advertisement
ಜೀವೆಂದರ್ ಪೂಜಾರಿ: ನಮ್ಮ ದೇಶದ ರಾಜಕೀಯ ಬಹಳ ಕೆಟ್ಟದು, ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಸಾಮಾನ್ಯ ಜನರನ್ನು ಉಪಯೋಗಿಸಿ ತಮ್ಮ ಕಾರ್ಯಗಳನ್ನು ಈಡೇರಿಸುತಾರೆ. ಉದಾಹರಣೆಗೆ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಎಂತಹ ವಿಪರ್ಯಾಸ ದೇಶದ ಬಗ್ಗೆ ಯಾರಿಗೂ ಅಭಿಮಾನ ಇಲ್ಲ ಎಲ್ಲರಿಗೂ ಅಧಿಕಾರ ಬೇಕು . ಗಲಾಟೆ ಮಾಡಲು ಪ್ರಚೋದಿಸಿ ಜನರು ಸತ ಮೇಲೆ ಅವರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರಿಂದ ಹಣ ವಸೂಲಿ ಮಾಡಿ.
ಚೇತನ್ ಎಸ್ ಗೌಡ: ಹೌದು. ಆದ್ರೆ ಇದಕ್ಕೂ ಹಿಂದಿನ ವಿಚಾರಗಳ ಬಗ್ಗೆ ಮಾತಾಡ್ತಾರೆ, ಅಂತವರು ಅರ್ಥ ಮಾಡ್ಕೊಬೇಕು ಇನ್ನು ಮುಂದಾದರೂ ಸಾರ್ವಜನಿಕ ಆಸ್ತಿ ನಾಶ ತಪ್ಪಿದರೆ ಅದು ನಮಗೆ ಟ್ಯಾಕ್ಸ್ ಹೊರೆ ಕಡಿಮೆ ಮಾಡುತ್ತೆ… ಇವತ್ತು ಒಂದು ಬಸ್ ಸುಟ್ಟು ಹಾಕಿದರೆ ಅದು ಇಂಡೈರೆಕ್ಟ್ ಆಗಿ ನಮ್ಮಿಂದಲೇ ವಸೂಲಿಯಾಗುತ್ತೆ ಅಲ್ವೇ?
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಮಾಡಬೇಕು.ಇದನ್ನು ರಾಷ್ಟ್ರವ್ಯಾಪಿ ಕೇಂದ್ರ ಸರ್ಕಾರ ಜಾರಿಗೊಳಿಸಬೇಕು.. ಪ್ರತಿಭಟನೆ ಹೆಸರಲ್ಲಿ ರಾಷ್ಟ್ರದ ಆಸ್ತಿ ಪಾಸ್ತಿ ಹಾನಿ ಮಾಡೋದೇ ಕೆಲ ಮತೀಯ ಸಂಘಟನೆಗಳ ಉದ್ದೇಶ ಅಂತಹ ಸಂಘಟನೆ ಗಳನ್ನು ಹತ್ತಿಕ್ಕೋದು ಇಂದಿನ ಅಗತ್ಯ..
ಕಣ್ಣೊಳಗಿನ ಕನಸು: ಪ್ರತಿಭಟನೆ ಅನ್ನೋದು ತಮ್ಮ ಅಭಿಪ್ರಾಯ ಸರಕಾರಕ್ಕೆ ತಿಳಿಸೋದಷ್ಟೇ. ಸಾರ್ವಜನಿಕ ಆಸ್ತಿ ಹಾನಿ ಮಾಡೋದು ಅಂದ್ರೆ ಅದು ಕಾನೂನು ಕೈಗೆ ತೆಗೆದುಕೊಳ್ಳೋದು. ಯಾರು ನಷ್ಟ ಮಾಡಿರ್ತಾರೋ ಅವರೇ ಅದಕ್ಕೆ ಜವಾಬ್ದಾರರು. ಅವರೇ ಅದನ್ನ ತುಂಬಬೇಕು. ಆಗ ಹಾನಿ ಮಾಡೋರು ಖಂಡಿತವಾಗಿ ಪ್ರತಿಭಟನೆ ಸಂದರ್ಭ ಶಾಂತವಾಗಿ ಮಾಡ್ತಾರೆ. ಇದು ಸರಿಯಾದ ಕ್ರಮ.