ಮಣಿಪಾಲ: ಎತ್ತಿನ ಹೊಳೆ ಯೋಜನೆ ವಿಳಂಬ-ಈಗ ಯೋಜನಾ ವೆಚ್ಚ 20 ಸಾವಿರ ಕೋಟಿ ಏರಿಕೆ: ಇಂತಹ ಯೋಜನೆ ಜಾರಿಗೂ ಮುನ್ನ ಸೂಕ್ತ ಪರಿಶೀಲನೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಉತ್ತರ ದೊರೆತಿದೆ. ಆಯ್ದ ಉತ್ತರಗಳು ಇಲ್ಲಿದೆ.
ಜಗದೀಶ್ವರ ಭಟ್ ಕೊಮ್ಮುಂಜೆ: ನೀರಿನಂತೆ ಹಣ ಪೋಲು , ಕೋಲಾರಕ್ಕೆ ಬರೇ ಪೈಪ್ ಮಾತ್ರ್ ಇರಬಹುದು. ಇದು ಖಜಾನೆ ಖಾಲಿ ಮಾಡುವ ಪ್ರೊಜೆಕ್ಟ್.
ರಾಜೇಶ್ ಅಂಚನ್ ಎಂ ಬಿ: ಈ ಯೋಜನೆಯೇ ಒಂದು ಅವೈಜ್ಞಾನಿಕ. ಇದರಲ್ಲಿ ನೀರಿನ ಹೊಳೆ ಹರಿಯೋ ಬದಲು ಹಣದ ಹೊಳೆಯೇ ಹರಿಯಿತು.ಈಗಿನ ಮಳೆಯನ್ನು ನಂಬಿ ಈ ಯೋಜನೆ ಕೈಗೆ ತೆಗೆದುಕೊಂಡದ್ದು ಸರ್ಕಾರದ ಮೂರ್ಖತನ. ಇದರಿಂದ ಇತ್ತ ಕರಾವಳಿಗೆ ನಷ್ಟ ಸಂಭವಿಸಿದರೆ ಬಯಲುಸೀಮೆಗೆ ಮೂಗಿನ ಮೇಲೆ ತುಪ್ಪ ಸವರಿದ್ದು ಅಷ್ಟೇ. ಸಾವಿರಾರು ಎಕರೆ ಅರಣ್ಯವನ್ನು ತಿಂದು ನೀರು ಕುಡಿದ್ದದ್ದೇ ಸಾಧನೆ. ಒಟ್ಟಾರೆ ಇದೊಂದು ಹಣ ಪೋಲು ಮಾಡುವ ವ್ಯರ್ಥ ಯೋಜನೆಯಾಗಿದೆ.
ಮಹದೇವ ಗೌಡ: ನಮ್ಮದೇಶ ನೀರಾವರಿ ಯೊಜನೆಗಳನ್ನು ಉದಾಶಿನ ಮಾಡ್ಡದ್ದರಿಂಲೆ ದೇಶ ಹಿಂದೆನೆ ಇರಲು ಕಾರಣಗಳಲ್ಲಿ ಒಂದು ಅನಿಸುತ್ತದೆ ಎಲ್ಲಾ ಜನಪ್ರತಿನಿದಿಗಳು ಇದಕ್ಕೆ ಜವಬ್ದಾರಾರು ಅಲ್ವಾ ಸರ್.
ಪರಂ ಪರಂ: ಈ ಯೋಜನೆಯಿಂದ ಬಯಲು ಸೀಮೆ ಗೆ ನೀರು ಬರುವುದಿಲ್ಲ ಅದರ ಬದಲಾಗಿ ಪಶ್ಚಿಮ ಘಟ್ಟ ನಾಶ ವಾಗುತಿದೆ ಹಾಗು ರಾಜಕಾರಣಿಗಳ ಜೇಭು ತುಂಬುತಿದೆ
ಸಣ್ಣಮಾರಪ್ಪ. ಚಂಗಾವರ: ಇಂತಹ ಯೋಜನೆಗಳ ವಿಳಂಬದಿಂದ ಸರ್ಕಾರದ ಖರ್ಚು ಹೆಚ್ಚುತ್ತ ಹೋಗುತ್ತವೆ. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯುವಂತಾಗಬೇಕು. ಇಲ್ಲದಿದ್ದರೆ ಜನರ ಹಣ ವ್ಯರ್ಥವಾಗುತ್ತದೆ.