ಮಣಿಪಾಲ: ತಂಬಾಕು ಬಳಕೆಯ ಕುರಿತಾಗಿ ಜನರಲ್ಲಿ ಸ್ವಜಾಗೃತಿ ಮೂಡುವ ಅಗತ್ಯದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಉತ್ತರಗಳು ಇಲ್ಲಿದೆ.
ರೆಹಮತುಲ್ಲಾಹ್ ವಿ ತಬ್ರೀಜ್: ಖಂಡಿತ ಆಗುತ್ತೆ.ಜನ ಜಾಗ್ರಿತಿ ಆಂದೋಲನ ನಡೆಸಿ ಸಿಗರೇಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು. ಸಿಗರೇಟ್ ವ್ಯವಹಾರವನ್ನು ದೇಶಾದ್ಯಂತ ನಿಷೇಧ ಹೇರಿ ಅಲ್ಲಿನ ಉದ್ಯೋಗಿಗಳಿಗೆ ಪರ್ಯಾಯ ಉದ್ಯೋಗ ವ್ಯವಸ್ತೆ ಹಾಗೂ ವ್ಯವಹಾರ ನಡೆಸುತ್ತೀರುವವರಿಗೆ ಪರ್ಯಾಯ ವ್ಯವಹಾರ ನಡೆಸಲು ಸಮಯಾವಕಾಶ ಹಾಗು ಸರಕಾರದಿಂದ ಸಬ್ಸಿಡಿ ಸೌಲಭ್ಯ ಒದಗಿಸಿ ಕೊಡಬೇಕು. ಅದರಿಂದ ಬರುವ ಆದಾಯವನ್ನು ನೋಡಬಾರದು. ಅದರಿಂದ ಮಾತ್ರ ಸಾಧ್ಯ.
ರಮೇಶ್ ತಿಂಗಳಾಯ: ಉಡುಪಿ ಜಿಲ್ಲೆ ಕೋಡಿ ಬೆಂಗ್ರೆ ಗ್ರಾಮದಲ್ಲಿ ಗ್ರಾಮದ ಯುವಕರ ತಂಡ ಸ್ವ ಪ್ರೇರಣೆಯಿಂದ ಕಳೆದ 22ವಷ೯ಗಳಿಂದ ಅಂಗಡಿಗಳಲ್ಲಿ ಗುಟ್ಕ ಮಾರಾಟ ನಿಷೇದವನ್ನು ಮಾಡಿದೆ. ಅಲ್ಲದೆ ಇದೆ ಸಮಯದಿಂದ ಮದುವೆ ಸಮಾರಂಭದ ಮೇಹಂದಿ ದಿನ ರಾತ್ರಿ ಮಾಂಸಹಾರ ಮತ್ತು ಮದ್ಯಾಪಾನವನ್ನು ನಿಷೇದಿಸಿ ಮಾದರಿ ಗ್ರಾಮವಾಗಿ ಮೂಡಿ ಬಂದಿದೆ.ಇಂತಹ ಸ್ಥಳಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ .ಅಲ್ಲಿನ ಈ ಯೋಜನೆಗೆ ಕಾರಣ ಏನೆಂಬುದನ್ನು ತಿಳಿದು ಜನಜಾಗ್ರತಿ ಮೂಡಿಸಬೇಕು.ಇಲ್ಲವೆ ಇಂತಹ ವ್ಯವಸ್ಥೆಗಳಿಗೆ ಪರವಾನಿಗೆಯನ್ನು ನೀಡಬಾರದು.
ಸಂತೋಶ್ ನಾಯಕ್: ಸರಕಾರ ಮನಸ್ಸು ಮಾಡಿದರೆ ತಂಬಾಕು ನಿಷೇಧ ಖಂಡಿತಾ ಸಾಧ್ಯವಿದೆ. ಆದರೆ ಇದರ ಹಿಂದೆ ತಂಬಾಕು ಉತ್ಪಾದಕರ ಹಾಗು ಖಾಸಗಿ ಆಸ್ಪತ್ರೆಗಳಂತಹ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಸರಕಾರದ ಮೇಲೆ ಇರಬಹುದು.
ಶಿವಶಂಕರ್ ನಾಯಕ್: ಖಂಡಿತ ಆಗುತ್ತೆ. ಮೊದಲು ಸಿಗರೇಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು. ಅದರಿಂದ ಬರುವ ಆದಾಯವನ್ನು ನೋಡಬಾರದು. ಅದರಿಂದ ಮಾತ್ರ ಸಾಧ್ಯ.
ರಾಣಿ ರಾಣಿ: ಡ್ರಿಂಕ್ಸ್, ಸಿಗರೇಟ್, ಗುಟ್ಕಾ ಇವುಗಳನ್ನು ಬ್ಯಾನ್ ಮಾಡ್ರಿ ಆಗ ನಮ್ಮ ದೇಶ ಉದ್ದಾರ ಆಗುತ್ತೆ.