Advertisement

ಉಪಚುನಾವಣೆಗಳ ಸಂಖ್ಯೆ ಹೆಚ್ಚುತ್ತಿರುವುದು ಜನರು ಮತದಾನದಿಂದ ದೂರ ಉಳಿಯಲು ಕಾರಣವಾಗುತ್ತಿದೆಯೇ?

04:55 PM Dec 06, 2019 | Team Udayavani |

ಮಣಿಪಾಲ: ಉಪಚುನಾವಣೆಗಳ ಸಂಖ್ಯೆ ಹೆಚ್ಚುತ್ತಿರುವುದು ಮತದಾರರು ಮತದಾನದಿಂದ ದೂರ ಉಳಿಯಲು ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ರಮೇಶ್ ಉದ್ಯಾವರ: ಉಪ ಚುನಾವಣೆ ಸಂಪೂರ್ಣ ನಿಷೇಧವಾಗ ಬೇಕು. ಕೋಟಿ ಗಟ್ಟಳೆ ಹಣದ ವ್ಯಯ, ದಿನ ಬೆಂದು ಹೊಟ್ಟೆ ತುಂಬಿಸುವ ಕೆಲಸಗಾರನ ಸಮಯ ವ್ಯರ್ಥ.

ನರಸಿಂಹಮೂರ್ತಿ ರಾವ್ : ಪಕ್ಷಾಂತರ ಬಿಜೆಪಿ ಮತದಾರರು ಇಷ್ಟ ಪಡಲ್ಲ ಹೀಗೆ ಚಿಂತಿಸಿದರೆ ನಮಗೆ ಅಭಿವೃದ್ಧಿ ಪರ ಆಡಳಿತ ಕುಂಠಿತವಾಗುತ್ತೆ ಈ ಸ್ಥಿತಿಯಲ್ಲಿ ಅನಿವಾರ್ಯ ರಾಜಕೀಯ ಮಾಡು ತಪ್ಪಿಲ್ಲ ಅನ್ನಿಸುತ್ತೆ ಅಭಿಪ್ರಾಯ ಬಿಜೆಪಿ ಬರಲಿ ಅನ್ನಿಸುತ್ತೆ . ಮನುಷ್ಯರ್ರನ್ನು ಸ್ವಲ್ಪ ನಂಬಿ ಆದಷ್ಟು ದಕ್ಷರು ಆರಿಸಿ ಬರಲಿ.

ರಾಜೇಶ್ ಅಂಚನ್ ಎಂ ಬಿ: ಇದು ನಿಜವಾದ ಕಾರಣವಿರಲಾರದು. ನಮ್ಮಲ್ಲಿ ಹಿಂದಿನಿಂದಲೂ ಮತದಾನದಲ್ಲಿ ಉತ್ಸಾಹದಿಂದ ಭಾಗವಹಿಸೋದು ತುಂಬಾನೇ ಕಡಿಮೆಯಾಗಿದೆ. ಇದಕ್ಕೆ ಚುನಾವಣಾ ಆಯೋಗವು ಒಂದು ರೀತಿ ಕಾರಣ. ಮತದಾರರ ಪಟ್ಟಿಯಲ್ಲಿ ಎಷ್ಟೋ ಜನರ ಹೆಸರೇ ಇರೋದಿಲ್ಲ. ಮತ ಕೇಂದ್ರಕ್ಕೆ ಹೋಗಿ ಮತದಾನಕ್ಕೆ ಅವಕಾಶ ಸಿಗದೆ ಹಿಂತುರುಗಿದ ಮತದಾರ ಮತ್ತೆ ಉತ್ಸಾಹ ತೋರಿಸೋದಿಲ್ಲ. ಇನ್ನು ಪ್ರಮುಖ ಕಾರಣ ಆಯ್ಕೆಯಾದ ಜನಪ್ರತಿನಿಧಿಗಳ ತಾತ್ಸಾರ ಧೋರಣೆ. ಚುನಾವಣಾ ಸಮಯದಲ್ಲಿ ಮಾತ್ರ ನೆನಪಾಗುವ ಮತದಾರ ಉಳಿದ ವೇಳೆಯಲ್ಲಿ ಇವರ ನೆನಪಿನಲ್ಲಿ ಇರೋದೆ ಇಲ್ಲಾ. ತಮ್ಮ ಕ್ಷೇತ್ರಗಳ ಪ್ರಮುಖ ಸಮಸ್ಯೆಗಳನ್ನೇ ಬಗೆಹರಿಸದೆ ಚುನಾವಣಾ ವೇಳೆಯಲ್ಲಿ ಧಿಡೀರ್ ಪ್ರತ್ಯಕ್ಷ ರಾಗುವ ಇವರ ಧೋರಣೆಯಿಂದ ಮತದಾರ ರೋಸಿ ಹೋಗಿಯೇ ದೂರ ಉಳಿಯುತ್ತಾನೆ..

ಸೈಮನ್ ಫೆರ್ನಾಂಡಿಸ್: ಹಾಗೆ ಅನ್ನಿಸುತ್ತಿಲ್ಲ. ಬೆಂಗಳೂರು ಹೊರತು ಪಡಿಸಿ ಬೇರೆಡೆಯೆಲ್ಲ ಉತ್ತಮ ಮತದಾನ ಆಗಿದೆ. ಬೆಂಗಳೂರು ನಗರದ ನಾಗರಿಕರಿಗೆ ಯಾವುದೇ ಚುನಾವಣೆಯಲ್ಲಿ ಅಷ್ಟೊಂದು ಆಸಕ್ತಿ ಇಲ್ಲದಿರುವುದು ಸತ್ಯ. ಅದಕ್ಕೆ ಉಪ ಚುನಾವಣೆಯು ಹೊರತಲ್ಲ.

Advertisement

ನಟರಾಜನ್ ಸುರೇಶ್: ಇಲ್ಲಿ ಚುನಾವಣೆ ವ್ಯವಸ್ಥೆ ಸರಿ ಇಲ್ಲ, ಚುನಾವಣಾ ಭ್ರಷ್ಟಾಚಾರ ಈ ಕಡಿವಾಣ ಇಲ್ಲ, ನಮ್ಮಲ್ಲಿ ಎಲ್ಲದಕ್ಕೂ ಒಂದು ಅರ್ಹತೆ ಬೇಕು, ಅಡ್ರೆ ಚುನಾವಣೆ ನಿಲ್ಲಲು ಯಾವ ಮಾನದಂಡಗಳು ಇಲ್ಲ. ಸಮಾಜ ಸೇವೆ ಹೋಗಿ ವ್ಯಾಪಾರ ಆಗಿದೆ. ಹೀಗಿರುವಾಗ ಜನರಿಗೆ ಎಲ್ಲಿಂದ ಉತ್ಸಾಹ ಬರುತ್ತೆ.

ಚಂದ್ರು ಎಚ್ ಸಿದ್ದಯ್ಯ: ಸಂವಿಧಾನದ ಕಲಂ 371 ರದ್ದು ಮಾಡುವ ಧೈರ್ಯ ಮಾಡುವ ಕೇಂದ್ರ ಸರ್ಕಾರ ಆಪರೇಷನ್ ಕಮಲದ ಹೊಲಸು ರಾಜಕೀಯ ಮಾಡಿ ಚುನಾಯಿತ ಶಾಸಕರು ಹಣಕ್ಕಾಗಿ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿ ಸಾಮಾನ್ಯ ಜನರ ತೆರಿಗೆ ಹಣವನ್ನು ಮರುಚುನಾವಣೆಗಾಗಿ ಖರ್ಚು ಮಾಡುವುದು ಗೊತ್ತಿರುವ ಸಂಗತಿಯೇ. ಶಾಸಕರು ಹಣಕ್ಕಾಗಿ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದನ್ನು ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕು. ಆ ಕೆಲಸ ಬಿಜೆಪಿ ಕೇಂದ್ರ ಸರ್ಕಾರ ಮಾಡುವುದಿಲ್ಲ. ಯಾಕೆಂದರೆ ಬೇಲಿಯೆ ಎದ್ದು ಹೊಲ ಮೇಯ್ದಂತೆ ಇದೆ ಬಿಜೆಪಿ ಸ್ಥಿತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next