Advertisement

ದಿಶಾ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸುವ ಅಗತ್ಯ ಇದೆಯೇ?

04:50 PM Dec 15, 2019 | keerthan |

ಮಣಿಪಾಲ: 21 ದಿನದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ದಿಶಾ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸುವ ಅಗತ್ಯ ಇದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಉತ್ತರಗಳು ಇಲ್ಲಿವೆ.

Advertisement

ಮೋಹನ್ ದಾಸ್ ಕಿಣಿ: ಹೌದು, ಇಂತಹ ವಿಷಯದಲ್ಲಿ ತ್ವರಿತ ನ್ಯಾಯ ತೀರ್ಮಾನದ ಅಗತ್ಯವಿದೆ. ಆದರೆ ಇದೇ ವೇಳೆ, ನ್ಯಾಯ ತೀರ್ಮಾನಕ್ಕೆ ಅವಧಿ ನಿಗದಿಪಡಿಸುವ ಧಾವಂತದಲ್ಲಿ ನಿರಪರಾಧಿಗೆ ಶಿಕ್ಷೆ ಆಗಬಾರದಲ್ಲ? ತ್ವರಿತ ನ್ಯಾಯಾಲಯ, ಮತ್ತು ಮೇಲ್ಮನವಿ ಪ್ರಾಧಿಕಾರಗಳ ಸಂಖ್ಯೆ ಕಡಿತಗೊಳಿಸುವುದೇ ಮುಂತಾದ ಕ್ರಮಗಳ ಮೂಲಕ ಇದನ್ನು ಸಾಧಿಸಬಹುದು.

ನೀಲ ನೀಲ: ಹೌದು ದೇಶದ ಮೂಲೆ ಮೂಲೆಯಲ್ಲೂ ಈ ಕಾನೂನು ಜಾರಿಗೆ ಬರಲೇಬೇಕು ಇಲ್ಲಾಂದ್ರೆ ದಿನಾ ಕಳೆದಂತೆ ಹೆಣ್ಣು ಮಕ್ಕಳ ಸಂಕೆ ಕಡಿಮೆಯಾಗುತ್ತೆ .

ರಾಘವೇಂದ್ರ ನಾಯಕ್: ಖಂಡಿತವಾಗಿಯೂ ಪ್ರತಿ ರಾಜ್ಯದಲ್ಲಿಯು ಜಾರಿಗೊಳಿಸುವ ಅವಶ್ಯಕತೆ ಇದೆ.

ಎಂ ಹರೀಶ್: ಈ ಶಿಕ್ಷೆ ನಿಜವಾದ ಅಪರಾಧಿಗಳಿಗೆ ಕೊಟ್ಟರೆ ಒಂದು ಅರ್ಥ ಬರುತ್ತದೆ. ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು.

Advertisement

ನಾಗಮಣಿ ಅನಿಲ್: 21 ದಿನ ಅನ್ನುವುದಕ್ಕಿಂತ, ತಪ್ಪು ಸಾಬೀತಾದರೆ, ಶಿಕ್ಷೆ ಕೊಡಲೇಬೇಕು, ಇಲ್ಲ ಅಂದ್ರೆ ಅದೆಷ್ಟು ಅಮಾಯಕ ಹೆಣ್ಣು ಮಕ್ಕಳನ್ನು ಬಲಿ ಕೊಡಬೇಕಾಗುತ್ತೆ.

ಹರೀಶ್ ಡಿ ಸಾಲ್ಯಾನ್: 21 ದಿವಸ ಜಾಸ್ತಿ ಎನಿಸುತ್ತೆ 13 ದಿನದ ಓಳಗೆ ಗಲ್ಲು ಶಿಕ್ಷೆ ಖಾಯಂ ಆಗಲಿ! ಇದನ್ನು ಮಾನವ ಹಕ್ಕುಗಳ ಗಿರಾಕಿಗಳು ಇದನ್ವು ವಿರೋಧಿಸಿದರೆ . ಅವರಿಗೂ ಅದೇ ಶಿಕ್ಷೆ ನೀಡಲಿ!

ಮಧುಕುಮಾರ್ ಬಿಲಿಚೋಡು; ಖಂಡಿತವಾಗಿಯೂ ಇದೆ. ಏಕೆಂದರೆ ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತೀವೆ. ಹೆಣ್ಣಿನ ರಕ್ಷಣೆಗೆ ಇಂದಿನಿಂದಲೇ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಲಿಂಗಾನುಪಾತ ವಿಚಾರದಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಲ್ಲಿ ಯಾವುದೇ ಸಂಶಯವಿಲ್ಲ.

ಶಂಕರ್ ಬಂಟ್ವಾಳ ಪೈ: ಅತ್ಯಾಚಾರಿಗಳು ಎಂದು ರುಜುವಾತಾದ ಬಳಿಕ ಸಾಮಾನ್ಯ ಜನರಿಗೆ ನೇಣು ಶಿಕ್ಷೆಯೇ ಆಗಬೇಕು. ಸಂತೋಷ . ವ್ಯಕ್ತಿ ರಾಜಕಾರಣಿ ಯಾ ಅವರಿಗೆ ಸಂಬಂಧ ಪಟ್ಟವರಾದರೆ ಆಂತವರನ್ನು ಮೂರು ಮಾರ್ಗ ಸೇರುವಲ್ಲಿ ನಿಲ್ಲಿಸಿ ಕಲ್ಲಿನಿಂದ ಹೊಡೆದು ಕೊಲ್ಲಬೇಕು.

ದಿನೇಶ್ ಗೌಡ: ಆತುರಗಾರರಿಗೆ ಬುದ್ದಿ ಮಂದ ರೇಪ್ ಮಾಡಿ ಕೊಲೆ ಮಾಡಿದ್ರೆ ಗಲ್ಲು ಶಿಕ್ಷೆ ಸರಿ ಅತ್ಯಾಚಾರ ಮಾಡಿದವರಿಗೆಲ್ಲ ಗಲ್ಲು ಶಿಕ್ಷೆ ಕೊಡೊಕೋದ್ರೆ ಉಪ;ಯೋಗಕ್ಕಿಂತ ದುರುಪಯೋಗಪಡಿಸಿ ಕೋಳೋರೆ ಜಾಸ್ತಿ. ಆಸ್ತಿಗೋಸ್ಕರ ಕೊಲೆ ಮಾಡೋಕೆ ಅಥವಾ ಬೇರೆ ದ್ವೇಷ ತೀರಿಸಿಕೋಳೋಕೆ ಇದನ್ನ ಬಳಸಿಕೊಳ್ತಾರೆ. ಒಪ್ಪಿಗೆಯಿಂದಲೇ ಸಂಭೋಗ ನೆಡೆಸಿ ಆಮೇಲೆ ಅತ್ಯಾಚಾರ ಅಂತಾರೆ ಇವಾಗ ಮಗಳನ್ನು ಉಳಿಸಿ ಅನ್ನೋರು ಆಮೇಲೆ ಮಗನನ್ನು ಉಳಿಸಿ ಅಂತ ಬೊಬ್ಬೆ ಓಡಿಬೇಕಾಗುತೆ. ನಿಮ ಜೊತೆನೂ ಅಣ್ಣ ತಮ್ಮ ಇರುತ್ತಾರೆ ನೆನಪಿರಲಿ.

ಲೋಹಿತ್ ನವೀನ್ ಕುಮಾರ್ ಗೌಡ: 21ದಿನ ಕೂಡ ತಡವಾಗುತ್ತದೆ. ಆರೋಪಿ ಅಪರಾಧಿ ಅಂತ ಸಾಬಿತಾದ ನಂತರ ಒಂದು ಕ್ಷಣವೂ ಆತನು ಬದುಕಿರಲು ಅನರ್ಹ. ಕೂಡಲೇ ಆತನಿಗೆ ಮರಣದಂಡನೆ ವಿಧಿಸಬೇಕು ಅದು ಸಾರ್ವಜನಿಕವಾಗಿ.

ಫ್ರಾನ್ಸಿಸ್ ಡಿಸೋಜ: ಆರೋಪ ಸಾಬಿತು ಆಗಿದ್ರೆ ಖಂಡಿತವಾಗಿ ಜಾರಿಗೊಳಿಸುವ ಅಗತ್ಯವಿದೆ ಮತ್ತು ಆರೋಪವಿರುವ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಲೂ ಕೂಡದು.

Advertisement

Udayavani is now on Telegram. Click here to join our channel and stay updated with the latest news.

Next