ಮಣಿಪಾಲ: ಪಂಚಭಾಷಾ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಯಾವ ಕನ್ನಡ ಸಿನಿಮಾ ನಿಮಗಿಷ್ಟ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
ಪೂರ್ಣಪ್ರಜ್ಞಾ ಪಿ ಎಸ್: ನನಗೆ “ಸಹೋದರರ ಸವಾಲ್ “ಇಷ್ಟ .ಉಳಿದಂತೆ ಕನ್ನಡದಲ್ಲಿ ಅವರ ಚಿತ್ರ ಕಡಿಮೆ ಅನ್ನಬಹುದೇನೋ. ಯಾವ ಭಾಷಯೇ ಆಗಲಿ ಅವರು ಪಡೆದ ಪ್ರಸಿದ್ಧ ಹಾಗೂ ಅವರೊಳಗಿರುವ ಆಧ್ಯಾತ್ಮಿಕ ಜ್ಞಾನಕ್ಕೆ ತಲೆಬಾಗಲೇ ಬೇಕು. ಕನ್ನಡದ ಮಣ್ಣಿನ ಕೂಸು, ಜಗತ್ತಿನ ನಟನಾಗಿ ಬೆಳೆದುದಕ್ಕೆ ನಾವೆಲ್ಲರು ಹೆಮ್ಮೆ ಪಡೋಣ.
ರಾಜೇಶ್ ಅಂಚನ್ ಎಂ ಬಿ: ರಜನಿಕಾಂತ್ ಕನ್ನಡದಲ್ಲಿ ಅಂತಹ ಉತ್ತಮ ಚಿತ್ರ ನೀಡಲಿಲ್ಲ. ಆತ ಹೆಚ್ಚು ತಮಿಳು ಚಿತ್ರಗಳ ಕಡೆಗೆ ಗಮನಹರಿಸಿದದರು ಅನ್ಸುತ್ತೆ. ಕನ್ನಡದಲ್ಲಿ ಸಹೋದರರ ಸವಾಲ್ ಚಿತ್ರದಲ್ಲಿ ಇದ್ದುದ್ದರಲ್ಲಿ ಉತ್ತಮ ನಟನೆ ಮಾಡಿದ್ದಾರೆ. ತಮಿಳಿನಲ್ಲಿ ಜನಪ್ರಿಯತೆ ಪಡೆದ ಮೇಲೆ ಕನ್ನಡ ಚಲನ ಚಿತ್ರಗಳನ್ನು ಕಡೆಗಣಿಸಿದರು ಅನಿಸುತ್ತೆ. ತಮಗೆ ಸಿನಿಮಾ ರಂಗಕ್ಕೆ ದಾರಿ ಮಾಡಿಕೊಟ್ಟ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಶೂನ್ಯವೆ ಅನ್ನಬಹುದು..
ಭರತ್ ಶೆಣೈ: ರಾಜಕುಮಾರ್ ಮತ್ತು ವಿಷ್ಣುವರ್ಧನ್ ಕರ್ನಾಟಕದಲ್ಲಿ ಮಿಂಚುತ್ತಿದ್ದರಿಂದ ರಜನಿಕಾಂತ್ ಗೆಲುವು ಕಾಣಲಿಲ್ಲ. ನಂತರ ಅವರು ತಮಿಳು ಚಿತ್ರರಂಗಕ್ಕೆ ಮುಖಮಾಡಿದರು.