ಮಣಿಪಾಲ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರ ಸಾಮೂಹಿಕ ರಾಜೀನಾಮೆ ಮತ್ತು ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಶಿವು ಬಿ: ಹಣ ಅಧಿಕಾರದ ಮುಂದೆ ಮಾನವಿಯತೆಯ ಮೌಲ್ಯಗಳಿಗೆ ಬೆಲೆ ಇಲ್ಲ ಇದು ಸೃಷ್ಟಿಯ ವಿನಾಶಕ್ಕೆ ನಾಂದಿಯ ಮುನ್ಸೂಚನೆ.
ದಾವೂದ್ ಕೂರ್ಗ್: ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಿಲ್ಲ ಅಷ್ಟೇ. ಪಕ್ಷಾಂತರ ಕಾಯ್ದೆಯಲ್ಲಿ ಇರುವ ಲೋಪದೋಷವೇ ಇದಕ್ಕೆ ಕಾರಣ. ಪಕ್ಷ ಬಿಡುವವರ ಶಾಸಕ ಸ್ಥಾನ ಅಮಾನ್ಯ ಮಾಡೋದರೊಂದಿಗೆ ಅವರು ಯಾವ ಪಕ್ಷದಿಂದಲೂ ಸ್ಪರ್ದಿಸಲು ಹಾಗೂ ಯಾವುದೇ ಸರ್ಕಾರಿ ಪದವಿ ಹೊಂದಲು ಬಿಡಬಾರದು. ಇಲ್ಲಿ ಮತ ಹಾಕಿದ ಜನರು ಮೂರ್ಖರಾಗುತ್ತಿದ್ದಾರೆ.
ಅಶ್ರಫ್ ಲೂಲೂ: ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರಕಾರದ ಅಬ್ಬರದಿಂದ ಪಾತಾಳ ಸೇರಿದ್ದ ಕಾಂಗ್ರೆಸ್ ಪಕ್ಷವನ್ನು ಹಳ್ಳಿ, ಗ್ರಾಮಗಳಲ್ಲಿ ಕಟ್ಟಿ ಬೆಳೆಸಿದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧ್ಯ. ಅಂತಹ ಯುವ ನಾಯಕನನ್ನು ಅಧಿಕಾರಕ್ಕೆ ಏರಿದ ನಂತರ ಮೂಲೆ ಗುಂಪು ಮಾಡಲಾಯಿತು. ಕಾಂಗ್ರೆಸ್ ಯುವ ಜನತೆಗೆ ಸೂಕ್ತ ಸ್ಥಾನ ಮಾನ ಕಲ್ಪಿಸದಿದ್ದರೆ ಮಧ್ಯ ಪ್ರದೇಶ ಎಲ್ಲಾ ಕಡೆ ಪುನರಾವರ್ತನೆತಯಾದೀತು
ವಸಂತ್ ಶೆಟ್ಟಿ: ಎಲ್ಲಾ ರಾಜಕೀಯ ಪಕ್ಷಗಳು ಎಪ್ಪತ್ತು ದಾಟಿದ ಹಿರಿಯ ತಲೆಗಳನ್ನು ನಿರ್ದಾಕ್ಷಿಣ್ಯವಾಗಿ ನಿವೃತ್ತಿ ಕೊಟ್ಟು ಸಕ್ರಿಯ ರಾಜಕಾರಣಕ್ಕೆ ತಲೆ ಹಾಕದಂತೆ ಮಾಡಬೇಕು. ಆಗ ಮಹತ್ವಾಕಾಂಕ್ಷೆಯ ಎಲ್ಲಾ ಸಮರ್ಥರಿಗೂ ಅವಕಾಶ ಸಿಗುವಂತಾಗುತ್ತದೆ. ಇಲ್ಲವಾದರೆ ಈ ಪಕ್ಷಾಂತರ ಅವಾಂತರಗಳು ನಿರಂತರವಾಗಿ ಎಲ್ಲಾ ರಾಜ್ಯದಲ್ಲಿ ಹರಡಿದರೆ ಪ್ರಜಾಪ್ರಭುತ್ವಕ್ಕೆ ಅಪಾಯ.
ಧನು ಗೌಡ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೂಲೆಗುಂಪು ಮಾಡಿ ಪ್ರಜೆಗಳ ತೀರ್ಪಿಗೆ ಆ ಗೌರವ ತೋರಿ ನಾವು ದೇಶಪ್ರೇಮಿಗಳು ಎಂದು ಬಿಂಬಿಸಿಕೊಂಡು ಹಿಟ್ಲರನ ಆಳ್ವಿಕೆಯನ್ನು ನಡೆಸುತ್ತಿದ್ದಾರೆ.
ಮಲ್ಲಿಕಾರ್ಜುನ ಮಲ್ಲೇಶಣ್ಣ: ಒಂದು ಪಕ್ಷದ ಶಾಸಕರನ್ನು ಆಶೆ ಆಮಿಷ ತೋರಿಸಿ ಆರಿಸಿಬಂದ ಪಕ್ಷಕ್ಕೆ ರಾಜೀನಾಮೆ ಕೊಡಿಸುವುದು ಒಂದೇ, ಬೇರೆಯವರ ಹೆಂಡತಿಯನ್ನು ಆಸೆ ಆಮಿಷ ತೋರಿಸಿ ಪಟಾಯಿಸುವುದೂ ಒಂದೇ. ಎರಡೂ ಅನೈತಿಕ ಅಯೋಗ್ಯತನ ಮತ್ತು ದುಷ್ಟತನ, ಪ್ರಜಾಪ್ರಭುತ್ವಕ್ಕೆ ಮಾರಕ
ಯು ಎನ್ ಎನ್ ಸಿಂಹ; ಅವನಿಗೆ ತಾಕತ್ತು ಇಲ್ಲ ಅದಕ್ಕೆ ಸರ್ಕಾರ ಬಿಳಿಸಿ ಜನರ ಭಾವನೆ ತಿರಸ್ಕರಿಸಿ ಪಕ್ಷ ಬಿಟ್ಟು ಅಡ್ಡದಾರಿಯಲ್ಲಿ ಹೋಗ್ತಾ ಇದ್ದಾನೆ