Advertisement

ಉಪ ಚುನಾವಣೆಯಲ್ಲಿ ಮತದಾರರು ನೀಡಿದ ಸ್ಪಷ್ಟ ತೀರ್ಪಿನ ಕುರಿತು ನಿಮ್ಮ ಅಭಿಪ್ರಾಯವೇನು ?

05:23 PM Dec 10, 2019 | Team Udayavani |

ಮಣಿಪಾಲ: ಉಪ ಚುನಾವಣೆಯಲ್ಲಿ ಮತದಾರರು ನೀಡಿದ ಸ್ಪಷ್ಟ ತೀರ್ಪಿನ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ಈರಣ್ಣ ಎಸ್ ತುಕ್ಕಪ್ಪನವರ್: ಬಹುತೇಕ ಬಿಜೆಪಿ ಗರೆ ನಾಚಿಕೆ ಆಗಲವಾ ನಿಮ್ಮ ಗೆ. ಕೆಂದ್ರ ದಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಂತಿರಾ. ರಾಜ್ಯ ಕೆ ಎನ್ ಮಾಡಿದೆ. ಬರೀ ಬರ ಪರಿಹಾರ ತರೊಕೆ ಆಗಲಿಲ್ಲ. 3 ವಷ೯ ನರಕ ಯಾತನೆ ಕರ್ನಾಟಕ ರಾಜ್ಯ ಕೆ ಇನ್ನೂ ಮುಂದೆ.

ಸಂಜೀವ ಸಂಜೀವ: ಬಿಜೆಪಿಗೆ ಮತ ಹಾಕಿ ಮೋಸ ಮಾಡಿಕೊಂಡ ಕರ್ನಾಟಕದ ಜನತೆಗೆ ಮುಂದೆ ಬಾರಿ ಒಳ್ಳೆ ಭವಿಷ್ಯ ಇದೆ.

ಶಾನ್ ಶನ್ವಾಜ್: ಪ್ರಜಾಪ್ರಭುತ್ವದಲ್ಲಿ‌ ಮತದಾರರೇ ಪ್ರಭುಗಳಾದರೂ,ಮತ ಚಲಾಯಿಸುವವರು ಪ್ರಬುದ್ಧರಾಗಬೇಕಾಗಿದೆ ಆಗ ಮಾತ್ರ ಮತದಾರರ ನೈಜ ಸಾಮರ್ಥ್ಯ ಅಳೆಯಲು ಸಾಧ್ಯ, ಹಕ್ಕುಗಳನ್ನು ಕೇಳಿ ಪಡೆಯಲು ಸಾಧ್ಯ. ಆದರೆ ಇಲ್ಲಿ ಮತದಾರರು ಮತ ಚಲಾಯಿಸಿದರೆ ಹೊರತು ಪ್ರಬುದ್ದರಾಗಿ ತಮ್ಮ ಸಾಮರ್ಥ್ಯ ವನ್ನು ತೋರಿಸಲೂ ಇಲ್ಲ, ಪ್ರಭುಗಳಾಗಿಯೂ ಉಳಿಯಲಿಲ್ಲ.

ಮೋಹನ್ ದಾಸ್ ಕಿಣಿ: ಇದು ಒಳ್ಳೆಯ ಬೆಳವಣಿಗೆ ಅಲ್ಲ, ಆದರೂ ಅತಂತ್ರ ವಿಧಾನಸಭೆಯ ಕಾರಣಕ್ಕೆ ರಾಜಕಾರಣಿಗಳು ಮಾಡುವ ಕುತಂತ್ರಕ್ಕೆ ಇನ್ನಾದರೂ ಒಂದಿಷ್ಟು ತಡೆಯಿರಲಿ ಎಂಬ ಉದ್ದೇಶದಿಂದ ಮತದಾರರು ಭಾಜಪಕ್ಕೆ ನೀಡಿರುವ ಅವಕಾಶವೆಂದು ಪರಿಗಣಿಸೋಣ. ಇನ್ನೂ ವ್ಯರ್ಥ ಕಾಲಹರಣ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಯಾವ ಅಲೆಯೂ ಉಪಯೋಗಕ್ಕೆ ಬರಲಾರದು. ವಿಷಾದನೀಯವೆಂದರೆ ಎಲ್ಲರಿಗೂ ಅವಕಾಶ ನೀಡಿಯಾಗಿದೆ. ಈಗಲೂ ವಿಫಲವಾದರೆ ಮುಂದೇನು ಎಂಬುದು ಯಕ್ಷಪ್ರಶ್ನೆ ಅಷ್ಟೇ!

Advertisement

ಶೇಖರ್ ನೈಕ್: ಅನರ್ಹರಿಗೆ ಮತಹಾಕಿದ ಮತದಾರರು ತುಂಬಾ ಬುದ್ದಿವಂತರು. ಅವರನ್ನು ಹುಡುಕಿ ಹುಡುಕಿ ಏನಾದರು Gift ಕೊಡಬೇಕು.

ಮೊಹಮ್ಮದ್ ರಫೀಕ್ ಕೊಲ್ಪೆ: ಎಲ್ಲರ ಪಾಲಿಗೂ ಇದೊಂದು ಒಳ್ಳೆಯ ಫಲಿತಾಂಶ. ಬಿಜೆಪಿ ಏನಾದರೂ ಕಡಿಮೆ ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ತಲೆನೋವು ಆಗುತ್ತಿತ್ತು. ಎಚ್ಡಿಕೆ ಬಿಜೆಪಿ ಜೊತೆ ಸೇರಿ ತನ್ನ ವಿರುದ್ಧ ಮಸಲತ್ತು ಮಾಡುವ ಆತಂಕ ಸಿದ್ದರಾಮಯ್ಯರನ್ನು ಕಾಡುತ್ತಿತ್ತು. ಗೆದ್ದರೆ ಸಿದ್ದುಗೆ ಕ್ರೆಡಿಟ್ ಹೋಗುತ್ತೆ ಅಂತ ಭಯಪಟ್ಟಿದ್ದ ಕಾಂಗ್ರೆಸ್ ನ ಮುದಿ ತಲೆಗಳಿಗೂ ನಿರಾಳವಾಗಿದೆ. ಮತ್ತೆ ಮತ್ತೆ ಆಪರೇಷನ್ ಮಾಡ್ತಾ ಯಡಿಯೂರಪ್ಪರು ಸುಸ್ತಾಗಬೇಕಿತ್ತು. ಈಗ ಯಾವ ಸಮಸ್ಯೆಯೂ ಇಲ್ಲ. ಎಲ್ಲರೂ ಯಥಾ ಸ್ಥಿತಿಯಲ್ಲಿ ಮುಂದುವರಿದರಾಯಿತು. ರೆಸಾರ್ಟ್ ಮಾಲಕರಿಗೆ ಮಾತ್ರ ಬೇಜಾರಾಗಿರಬಹುದು.

ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಮತದಾರ ಒಳ್ಳೆಯ ತೀರ್ಪನ್ನೇ ಕೊಟ್ಟಿದ್ದಾನೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ,ರಾಜೀನಾಮೆ ಎಲ್ಲಾ ಸಹಜ ಪ್ರಕ್ರಿಯೆ. ರಾಜ್ಯದಲ್ಲಿನ ಅತಂತ್ರ ಸ್ಥಿತಿಯಿಂದ ಮತದಾರ ಸಹ ರೋಸಿ ಹೋಗಿದ್ದ.. ಒಂದು ಸ್ಥಿರ ಸರಕಾರದ ಅವಶ್ಯಕತೆ ತುಂಬಾ ಇದ್ದ ಕಾರಣ ಒಳ್ಳೆಯ ತೀರ್ಪನ್ನೇ ನೀಡಿದ್ದಾನೆ. ಸರಕಾರ ಇನ್ನು ಮೇಲೆ ಆಡಳಿತದ ಕಡೆ ಹೆಚ್ಚು ಗಮನ ಹರಿಸಿ ಉತ್ತಮ ಆಡಳಿತ ನೀಡಿ ಉಳಿದ ಅವಧಿಯನ್ನು ಯಶಸ್ವಿಯಾಗಿ ಪೂರೈಸಲಿ.

ಪುಷ್ಪರಾಜ್ ಗುಂಡ್ಯ: ಹದಿನೈದು ಕ್ಷೇತ್ರದ ಜನರು ಮೊದಲ ಚುನಾವಣೆಯಲ್ಲಿ ತಾವು ತಪ್ಪು ಮಾಡಿದ್ದೇವೆ ಅಂತ ಅನ್ನಿಸೋವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು, ಆದರೆ ದೇವರು ಮತ್ತೊಂದು ಅವಕಾಶ ಕೊಡ್ತಾನೆ ಆ ಅವಕಾಶವನ್ನ ಹೆಚ್ಚಿನವರು ಸದುಪಯೋಗ ಪಡಿಸಿಕೊಂಡು ಸುಭದ್ರ ಸರಕಾರಕ್ಕೆ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ಅದನ್ನ ಉಳಿಸಿಕೊಳ್ಳೋದು ಯಡಿಯೂರಪ್ಪನವರ ಕೈಯ್ಯಲ್ಲಿದೆ.

ಬಾಲಕೃಷ್ಣ ಭಟ್: ಸುಪ್ರೀಂ ಕೋರ್ಟ್ ನಲ್ಲಿ ಹಾಗೂ ವಿಧಾನಸಭೆಯಲ್ಲಿನ ಅನರ್ಹತೆಗೆ ಯಾವುದೋ ಒತ್ತಡಕ್ಕೆ ಒಳಗಾಗಿ ಅನರ್ಹರನ್ನು ಅರ್ಹರಾಗಿಸಿದ ಧನಬಲದ ಚುನಾವಣೆ ಪ್ರಜಾಪ್ರಭುತ್ವದ ಅಣಕ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next