Advertisement

ಚಹಾ ವ್ಯಾಪಾರಿಯ ಮಗಳು ವಾಯುಪಡೆಯ ಪೈಲಟ್‌!

08:14 AM Jun 24, 2020 | mahesh |

ಭೋಪಾಲ್‌: ಅಪ್ಪ ಬಸ್‌ ನಿಲ್ದಾಣದಲ್ಲಿ ಚಹಾ ವ್ಯಾಪಾರಿ. ಹಗಲು ರಾತ್ರಿಯೆನ್ನದೆ ದುಡಿದು ಕೂಡಿಟ್ಟ ಚಿಲ್ಲರೆ ಕಾಸಿನಲ್ಲಿ ಮಗಳನ್ನು ಓದಿಸಿದ. ಈಗ ಮಗಳು ಭಾರತೀಯ ವಾಯುಪಡೆಯ ಪೈಲಟ್‌! ಮಧ್ಯಪ್ರದೇಶದ ನೀಮಚ್‌ ಬಸ್ಸುನಿಲ್ದಾಣದ ಚಹಾ ವ್ಯಾಪಾರಿಯ ಮಗಳು ಅಂಚಲ್‌ ಗಂಗ್ವಾಲ್‌ ಇತ್ತೀಚೆಗಷ್ಟೇ ವಾಯುಪಡೆಯಲ್ಲಿ ಫ್ಲೈಯಿಂಗ್‌ ಆಫೀಸರ್‌ ಆಗಿ ಸೇರಿಕೊಂಡಿದ್ದಾರೆ. ಈಕೆಯ ಪೈಲಟ್‌ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಎಷ್ಟೋ ಸಮಯದಲ್ಲಿ ಕಾಲೇಜು ಶುಲ್ಕ ಕಟ್ಟಲು ತಂದೆಯ ಬಳಿ ಹಣವೇ ಇರುತ್ತಿರಲಿಲ್ಲ.

Advertisement

ಟರ್ನಿಂಗ್‌ ಪಾಯಿಂಟ್‌: 2013ರಲ್ಲಿ ಕೇದಾರನಾಥದಲ್ಲಿ ಮೇಘಸ್ಫೋಟವಾದಾಗ ಭೀಕರ ಪ್ರವಾಹ ಉಂಟಾಗಿತ್ತು. ಈ ವೇಳೆ ಭಾರತೀಯ ವಾಯುಪಡೆಯ ಯೋಧರು ಜೀವದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸಿದ್ದರು. ವೀರಯೋಧರ ಆ ಸಾಹಸ ನೋಡಿ ತಾನೂ ವಾಯುಪಡೆ ಸೇರಬೇಕು ಎಂದು ಅಂಚಲ್‌ಗೆ ಅನ್ನಿಸಿತಂತೆ. ಸತತ 6 ಬಾರಿಯ ಪ್ರಯತ್ನದ ಬಳಿಕ ಕೊನೆಗೂ ಕನಸು ಈಡೇರಿತು.

“ನನ್ನ ಮಗಳು ಈ ಹಂತಕ್ಕೆ ಏರಲು ಬಹಳ ಪರಿಶ್ರಮ ಪಟ್ಟಿದ್ದಾಳೆ’ ಎಂದು ತಂದೆ ಸುರೇಶ್‌ ಗಂಗ್ವಾಲ್‌ ಹೆಮ್ಮೆ ಪಡುತ್ತಾರೆ. ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚವ್ಹಾಣ್‌, ಅಂಚಲ್‌ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next