Advertisement

ಕೊನೆಯ ಊರಿನ ಚಹಾ

09:31 PM Mar 13, 2020 | Lakshmi GovindaRaj |

ಭಾರತದ ದಕ್ಷಿಣದಂಚಿನ ಕನ್ಯಾಕುಮಾರಿಯ ಸೂರ್ಯೋದಯ ಮತ್ತು ಸೂರ್ಯಾಸ್ತ ಜಗತ್ಪ್ರಸಿದ್ಧ. ಅದನ್ನು ನೋಡಲೆಂದು ನಾನಾ ರಾಜ್ಯಗಳಿಂದ, ದೇಶ, ವಿದೇಶಗಳಿಂದ ಜನರು ಬರುತ್ತಾರೆ. ವಿವೇಕಾನಂದ ರಾಕ್‌ ಮೆಮೋರಿಯಲ್‌ಗೆ ತೆರಳುವ ತಾಣದ ಬಳಿ ಇರುವ ಸನ್‌ರೈಸ್‌ ವ್ಯೂ ಪಾಯಿಂಟ್‌ ,ಸೂರ್ಯೋದಯ ನೋಡಲು ಹೇಳಿಮಾಡಿಸಿದಂತಿದೆ. ಸೂಯಾಸ್ತ ನೋಡಲು ಕೋವಳಂ ಬೀಚ್‌ ಸೂಕ್ತ. ಕೋವಳಂ ಬೀಚ್‌ನಲ್ಲಿ ಸಂಜೆಯ ವೇಳೆ ಜನರ ಜಿಹ್ವಾಚಾಪಲ್ಯವನ್ನು ತೀರಿಸಲು ಬಜ್ಜಿ ಬೋಂಡಾ, ಚುರುಮುರಿ, ಐಸ್‌ಕ್ರೀಮ್‌ ಮುಂತಾದ ಚಿಕ್ಕಪುಟ್ಟ ಸ್ಟಾಲ್‌ಗ‌ಳಿವೆ. ಅವುಗಳಲ್ಲಿ ಟೀ ಸ್ಟಾಲ್‌ ಕಿಕ್ಕಿರಿದು ತುಂಬಿರುತ್ತದೆ. ಸಂಜೆ ಕಡಲಿನ ಭೋರ್ಗರೆತದ, ಭರ್ರನೆ ಬೀಸುವ ಗಾಳಿ, ಮುಳುಗುತ್ತಿರುವ ಸೂರ್ಯ, ಇವೆಲ್ಲದರ ನಡುವೆ ಜಿಂಜರ್‌ ಟೀ ನಿಜಕ್ಕೂ ಮೈಮರೆಸುವ ಸುಖ.

Advertisement

* ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next