ಬೆಂಗಳೂರಿನಲ್ಲಿ ಲೆಬು ಚಹಾದೊಂದಿಗೆ, ಕೋಲ್ಕತ್ತಾದ ಆಕರ್ಷಣೆಯನ್ನೂ ಸವಿಯುತ್ತಾ, ಆ ಲೋಕದೊಳಗೆ ಕಳೆದುಹೋಗುವ ಸಂಗತಿಯೊಂದು ಹೊಸ ಕ್ರಷ್ ಆಗುತ್ತಿದೆ. ಅದು ಇಂದಿರಾನಗರದ “ಕಿಚನ್ ಆಫ್ ಜಾಯ್’. ಇಲ್ಲಿ ಲೆಬು ಚಹಾವನ್ನು ಹೀರುತ್ತಲೇ, ರವೀಂದ್ರನಾಥ ಟ್ಯಾಗೋರರನ್ನು ಕಣ್ತುಂಬಿಕೊಳ್ಳಬಹುದು. ಸತ್ಯಜಿತ್ ರೇ ಅವರನ್ನು ಮಾತಾಡಿಸಬಹುದು. ಹೌರಾ ಬ್ರಿಡಿjನ ಮನೋಹರ ದೃಶ್ಯಕ್ಕೆ ಮನಸೋಲಬಹುದು. ಬೇಲೂರು ಮಠದ ಬೆಡಗಿಗೆ ಮೂಕರಾಗಬಹುದು. ಬೆಂಗಾಲಿ ಕಾಮಿಕ್ ಪಾತ್ರಗಳಿಗೆ ಬೆರಗಾಗಬಹುದು. ಏಕೆ ಗೊತ್ತಾ? ಕಿಚನ್ ಆಫ್ ಜಾಯ್‌ನ ಪ್ರತಿ ಗೋಡೆಗಳಲ್ಲಿ ಬೆಂಗಾಲಿ ಸಂಸ್ಕೃತಿಯ ದೃಶ್ಯಾವಳಿಗಳಿವೆ. ಬೆಂಗಾಲಿ ಮಹಾತ್ಮರ ಪೋಸ್ಟರ್, ಅವರ ನುಡಿಮುತ್ತುಗಳು, ಬಂಗಾಳದ ಐತಿಹಾಸಿಕ ನೋಟಗಳು… ಹೀಗೆ ಪ್ರತಿಯೊಂದಕ್ಕೂ ಇಲ್ಲಿ ಕೋಲ್ಕತ್ತಾ ಫ್ಲೇವರ್. ಕುಡಿಯುವ ಕಪ್‌ಗ್ಳಲ್ಲೂ ಬೆಂಗಾಲಿ ಕಲಾವಿದರೇ ಇಣುಕುತ್ತಾರೆ.
Advertisement
ಬೆಂಗಳೂರಿಗೇಕೆ ಬಂಗಾಳ ಬಂತು?ಇದಕ್ಕೆ ಕಾರಣವೂ ಉಂಟು. ಈ ರೆಸ್ಟೋರೆಂಟ್ ಶುರುವಾಗಿದ್ದು, 2013ರಲ್ಲಿ. ಕೋಲ್ಕತ್ತಾದ ಸೋಹಿನಿ ಸೇನಗುಪ್ತಾ ಮತ್ತು ಕೇರಳದ ಆರ್. ಸುರೇಶ್ ದಂಪತಿ ಇದನ್ನು ಆರಂಭಿಸಿದರು. ಬೆಂಗಾಲಿ ಖಾದ್ಯಗಳು, ಬೆಂಗಳೂರಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆಂಬ ಗ್ಯಾರಂಟಿಯಿಂದಲೇ “ಕಿಚನ್ ಆಫ್ ಜಾಯ್’ ಶುರುವಾಯಿತು.
ಇಲ್ಲಿ ಲೆಬು ಚಾಯ್ ಮಾತ್ರವೇ ಅಲ್ಲ.. ಬೆಂಗಾಲಿ ಮತ್ತು ಪಶ್ಚಿಮ ಭಾರತ ಖಾದ್ಯಗಳು ಇಲ್ಲಿ ಆಹಾರಪ್ರಿಯರಿಗೆ ಆಸೆಹುಟ್ಟಿಸುತ್ತಿವೆ. ದಿಮರ್ ದೆವಿಲ್, ಲುಂಚಿ ದಮ್ ಆಲೂ, ಗ್ರೀನ್ ಪೀಸ್ ಕಚೋರಿ, ಎಗ್ ಪೊಟೇಟೊ ಚಾಪ್, ಕೋಲ್ಕತ್ತಾ ಮಟನ್ ಕರ್ರಿ, ಶಿಘರಿ , ಫಿಶ್ ಚಾಪ್ಸ್ ಇಲ್ಲಿನ ಫುಡ್ ಹೈಲೈಟ್ಸ್. ಎಲ್ಲಿದೆ?: ದಿ ಕಿಚನ್ ಆಫ್ ಜಾಯ್, ಡಿಫೆನ್ಸ್ ಕಾಲೋನಿ, ದೊಮ್ಮಲೂರು
ಸಂಪರ್ಕ: 080 48658343