Advertisement

ಬ್ರಿಟನ್‌ ನಾಗರಿಕರಿಗೆ ಟೀ ಜತೆಗೆ ಸಮೋಸಾ ಬಲು ಪ್ರಿಯ…ಬಿಸ್ಕಟ್‌ ಕಂಪನಿಗಳಿಗೆ ತಲೆಬಿಸಿ

06:41 PM Jan 22, 2023 | Team Udayavani |

ಲಂಡನ್‌: ರಾಜರ ಆಳ್ವಿಕೆ ಕಾಲದಿಂದಲೂ ಬ್ರಿಟನ್‌ ನಾಗರಿಕರು ಟೀ ಪ್ರಿಯರು. ಸ್ನ್ಯಾಕ್ಸ್‌ ರೂಪದಲ್ಲಿ ಅವರಿಗೆ ಟೀ ಮತ್ತು ತರಹೇವಾರಿ ಬಿಸ್ಕಟ್‌ಗಳು ಬೇಕೇ ಬೇಕು. ಅದರಲ್ಲೂ ಭಾರತದಿಂದ ಆಮದಾಗುವ ಟೀ ಪುಡಿ ಎಂದರೆ ಅವರಿಗೆ ಪಂಚ ಪ್ರಾಣ. ಟೀ ಜತೆಗೆ ಬೌರ್ನ್ಬಾರ್ನ್ ಬಿಸ್ಕಟ್‌, ಕ್ರೀಮ್‌ ಬಿಸ್ಕಟ್‌, ಡ್ರೈ ಫ್ರೂಟ್ಸ್‌ , ಸ್ಪೈಸಿ ಬಿಸ್ಕಟ್‌ಗಳು ಇದ್ದರೆ ಸ್ನ್ಯಾಕ್ಸ್‌ ಪೂರ್ಣವಾಗುತ್ತದೆ.

Advertisement

ಆದರೆ ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್‌ ನಾಗರಿಕರು ಟೀ ಜತೆಗೆ ಸಮೋಸಾ ಸವಿಯುವುದನ್ನು ಆರಂಭಿಸಿದ್ದಾರೆ. ಸ್ನ್ಯಾಕ್ಸ್‌ ಸಮಯಕ್ಕೆ ಅವರಿಗೆ ಭಾರತೀಯ ತಿಂಡಿಯಾದ ಸಮೋಸಾ ಹೆಚ್ಚು ರುಚಿಕರ ಎನಿಸಿದೆ. ಹೀಗಾಗಿ ಬ್ರಿಟನ್‌ನಲ್ಲಿ ಸಮೋಸಾ ಮಾರಾಟ ಹೆಚ್ಚಳವಾಗಿದೆ. ಇದು ಬಿಸ್ಕಟ್‌ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇದರಿಂದ ಬಿಸ್ಕಟ್‌ ತಯಾರಕಾ ಕಂಪನಿಗಳು ಚಿಂತಿತರಾಗಿದ್ದಾರೆ.

ಮಿಂಟೆಲ್‌ ನಡೆಸಿದ ಸರ್ವೆ ಪ್ರಕಾರ, ಟೀ ಕುಡಿಯುವ 10 ಮಂದಿ ಬ್ರಿಟನ್ನರ ಪೈಕಿ 4 ಮಂದಿ ಟೀ ಜತೆಗೆ ಬಿಸ್ಕಟ್‌ ತಿನ್ನುತ್ತಾರೆ. ಉಳಿದ ಆರು ಮಂದಿ ಸಮೋಸಾ ತಿನ್ನುತ್ತಾರೆ. ಇನ್ನೊಂದೆಡೆ ಐವರಲ್ಲಿ ಒಬ್ಬರು ಟೀ ಜತೆಗೆ ಹಣ್ಣು ಸೇವಿಸುತ್ತಾರೆ. ಅಲ್ಲದೇ 18ರಿಂದ 29 ವರ್ಷ ವಯಸ್ಸಿನವರ ಪೈಕಿ ಹೆಚ್ಚು ಮಂದಿ ಸಮೋಸಾ ಇಷ್ಟ ಪಡುತ್ತಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ವಿವಾದಕ್ಕೆ ಗುರಿಯಾದ ಪೊಲೀಸರ ಉಗ್ರ ವಿರೋಧಿ ಅಣಕು ಡ್ರಿಲ್

Advertisement

Udayavani is now on Telegram. Click here to join our channel and stay updated with the latest news.

Next